Home> Business
Advertisement

ಆಭರಣ ಪ್ರಿಯರಿಗೆ ಸಿಹಿ ಸುದ್ದಿ !ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ !ಹಿಂದಿನ ಸ್ತರಕ್ಕೆ ಇಳಿದು ಮತ್ತೆ ಕೈಗೆಟಕುವುದು ಬಂಗಾರ

Gold Price Latest : ಚಿನ್ನದ ಧಾರಣೆಯಲ್ಲಿ ಭಾರೀ ಕುಸಿತ ಉಂಟಾಗಲಿದೆ. ಹತ್ತು ಗ್ರಾಂ ಅಪರಂಜಿ ಚಿನ್ನದ ಬೆಲೆ 85  ಸಾವಿರದಿಂದ 88  ಸಾವಿರಕ್ಕೆ ಕುಸಿಯಲಿದೆ. ಅಂದರೆ 22 ಕ್ಯಾರೆಟ್ ಬಂಗಾರದ ಬೆಲೆಯಲ್ಲಿ ಇನ್ನಷ್ಟು ಕುಸಿತವಾಗಲಿದೆ. 

ಆಭರಣ ಪ್ರಿಯರಿಗೆ ಸಿಹಿ ಸುದ್ದಿ !ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ !ಹಿಂದಿನ ಸ್ತರಕ್ಕೆ ಇಳಿದು ಮತ್ತೆ  ಕೈಗೆಟಕುವುದು ಬಂಗಾರ

Gold Price Latest : ಚಿನ್ನದ ದರ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಇದು ನಿಮಗೆಲ್ಲಾ ಗೊತ್ತಿರೋದೇ. ಚಿನ್ನದ ಧಾರಣೆ ರಾಕೇಟ್‌ ಸ್ಪೀಡ್‌ನಲ್ಲಿ ಮೇಲಕ್ಕೆ ಹಾರುತ್ತಿದೆ. ಮೇಲಕ್ಕೆ ಚಿಮ್ಮಿದ್ದು, ಒಂದಲ್ಲ ಒಂದು ದಿನ ನೆಲಕ್ಕೆ ಇಳಿಯಲೇ ಬೇಕು ಅನ್ನೋದು ನಿಸರ್ಗದ ನಿಯಮ. ಚಿನ್ನದ ಬೆಲೆಗೂ ಅದು ಅನ್ವಯ ಆಗುತ್ತಾ ಅನ್ನೋ ಪ್ರಶ್ನೆಗೆ, ತಜ್ಷರು ಉತ್ತರಿಸಿದ್ದಾರೆ. ಅವರ ಉತ್ತರ ನೋಡಿದರೆ, ಚಿನ್ನಪ್ರಿಯರ ಮೊಗದಲ್ಲಿ ಮಂದಹಾಸ ಮೂಡಬಹುದು. 

ಚಿನ್ನದ ಪೇಟೆಯ ಪರಿಣಿತರ ಪ್ರಕಾರ, ಬಂಗಾರದ ಬೆಲೆ ಇನ್ನು ವಿಪರೀತವಾಗಿ ಏರಲ್ಲ. ಚಿನ್ನದ ಬೆಲೆ ಒಂದು ಹಂತದಲ್ಲಿ ಕುಸಿಯಲಿದೆ. ಹತ್ತು ಗ್ರಾಂ ಅಪರಂಜಿ ಚಿನ್ನದ ಬೆಲೆ 85  ಸಾವಿರದಿಂದ 88  ಸಾವಿರಕ್ಕೆ ಕುಸಿಯಲಿದೆ ಎಂಬುದು ಪರಿಣಿತರ ಲೆಕ್ಕಾಚಾರ. ಚಿನ್ನದ ಧಾರಣೆಯಲ್ಲಿ8000  ದಿಂದ 10 ಸಾವಿರದ ತನಕ ಕುಸಿತ ಉಂಟಾಗಲಿದೆ ಎಂದು ಪರಿಣಿತರು ಲೆಕ್ಕಾಚಾರ ಹಾಕಿದ್ದಾರೆ. ಇದು ಇನ್ನಷ್ಟು ಕುಸಿಯಲಿದೆ ಅನ್ನೋದು ಅವರ ಮತ್ತೊಂದು ಅಂದಾಜು. 

ಇದನ್ನೂ ಓದಿ : ವಿಷಯ ಮತ್ತು ತಂತ್ರಜ್ಞಾನದ ಜಗತ್ತಿನಲ್ಲಿ ಭವಿಷ್ಯದತ್ತ ದೊಡ್ಡ ಹೆಜ್ಜೆ ಇಡುತ್ತಿರುವ ZEE ಎಂಟರ್‌ಟೈನ್‌ಮೆಂಟ್

ಇದು ಸುಮ್ಮನೇ ಅಂದಾಜಿನಿಂದ ಹಾಕಿದ ಲೆಕ್ಕಾಚಾರ ಅಲ್ಲ. ಇದರ ಹಿಂದೆ ಒಂದು ವ್ಯವಸ್ಥಿತ ತರ್ಕ ಅಂದರೆ ಲಾಜಿಕ್‌ ಇದೆ. 
ಚಿನ್ನದ ಬೆಲೆ ಕುಸಿಯಲು ಕಾರಣ ೧: ಅಮೆರಿಕದ ಫೆಡರಲ್‌ ರಿಸರ್ವ್‌ ರೇಟ್‌ನಲ್ಲಿ ಕಡಿತ ಉಂಟಾಗಲಿದೆ. ಈ ಕಡಿತ ಮಾಡಿದರೆ, ಹೂಡಿಕೆಗೆ ಸೇಫ್‌ ಎನ್ನಲಾದ ಚಿನ್ನದ ಮೇಲಿನ ಬೇಡಿಕೆ ಕಡಿಮೆಯಾಗಲಿದೆ. ಬೇಡಿಕೆ ಕಡಿಮೆಯಾದ್ರೆ, ಬೆಲೆ ಕೂಡಾ ಕುಸಿಯುತ್ತೆ.

ಚಿನ್ನದ ಬೆಲೆ ಕುಸಿಯಲು ಕಾರಣ೨: ವಿಶ್ವದಲ್ಲಿ ನಡೆಯುತ್ತಿರುವ ಕೆಲವೊಂದು ಬೆಳವಣಿಗೆಗಳು, ಅಂದರೆ ಯುದ್ಧ, ಪರೋಕ್ಷ ಸಮರ ಇತ್ಯಾದಿಗಳಿಂದಾಗಿ ಚಿನ್ನದ ಬೇಡಿಕೆ ಕಡಿಮೆಯಾಗಲಿದೆ. ಇದು ಚಿನ್ನದ ಬೆಲೆ ಕಡಿಮೆ ಮಾಡಲು ಒತ್ತಡ ಸೃಷ್ಟಿ ಮಾಡಲಿದೆ. 

ಚಿನ್ನದ ಬೆಲೆ ಕುಸಿಯಲು ಕಾರಣ ೩: ವಿಶ್ವಾದ್ಯಂತ ರಿಸೆ಼ಷನ್‌ ಕುರಿತ ಬೆಳವಣಿಗೆಗಳಿಂದ ಕೂಡಾ ಚಿನ್ನದ ಬೆಲೆ ಇಳಿಯಬಹುದು ಎನ್ನಲಾಗಿದೆ. ಈಗ ಚಿನ್ನ ಹೂಡಿಕೆಗೆ ಸುರಕ್ಷಿತ ಆಯ್ಕೆ ಅಲ್ಲ ಎಂಬುದು ಹಲವು ಹೂಡಿಕೆದಾರರ ನಂಬಿಕೆ. ಹಾಗಾಗಿಯೂ, ಚಿನ್ನದ ಮೇಲೆ ವಿಪರೀತ ಒತ್ತಡ ಇರಲ್ಲ. ಹಾಗಾಗಿ ಬೆಲೆ ಏರಿಕೆ ಸಾಧ್ಯತೆ ಕಡಿಮೆ.

ಇದನ್ನೂ ಓದಿ : ಮಾರುಕಟ್ಟೆಯಲ್ಲಿ ಮತ್ತೊಂದು ಹೊಸ ನೋಟು.. ರಿಸರ್ವ್ ಬ್ಯಾಂಕ್ ನ ಪ್ರಮುಖ ಘೋಷಣೆ!

ಆರ್ಥಿಕತೆ ರಿಕವರಿ, ಕಾರಣ ೪: ಹಲವು ದೇಶಗಳು ಆರ್ಥಿಕ ಪುನಶ್ಚೇತನದ ದಿಕ್ಕಿನಲ್ಲಿ ಸಾಗುತ್ತಿವೆ. ಹಾಗಾಗಿ, ಚಿನ್ನದ ಬದಲು, ಇತರ ಕಂಪನಿಗಳ ಹೂಡಿಕೆಗೆ ಹೂಡಿಕೆದಾರರ ಒಲವು ಹೆಚ್ಚಲಿದೆ. ಹಾಗಾಗಿ, ಚಿನ್ನ ಮತ್ತೆ ಕೈಗೆಟುಕಲಿದೆ ಎನ್ನಲಾಗಿದೆ.

ಒಟ್ಟಾರೆಯಾಗಿ ಮಾರುಕಟ್ಟೆಯಲ್ಲಿನ ಸ್ಥಿತಿಗತಿಗಳು ಈಗ ಚಿನ್ನದ ನಾಗಾಲೋಟಕ್ಕೆ ಪೂರಕವಾಗಿಲ್ಲ. ಬದಲಿಗೆ ನಾಗಾಲೋಟಕ್ಕೆ ಬ್ರೇಕ್‌ ಹಾಕುವ ಎಲ್ಲಾ ಸಾಧ್ಯತೆಗಳನ್ನು ಹೇಳುತ್ತಿವೆ. ಇವು ಪರಿಣಿತರ ಅಂದಾಜುಗಳಾಗಿದ್ದು, ಮುಂದಿನದ್ದು ಮಾರುಕಟ್ಟೆ ಬದಲಾವಣೆಗಳಿಗೆ ಒಳಪಟ್ಟಿರುತ್ತವೆ.

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ. 

Read More