Home> Business
Advertisement

IRCTC Confirm Ticket: ಟ್ರೈನ್ ಹೊರಡುವ ಕೆಲ ನಿಮಿಷ ಮೊದಲೂ ಸಿಗುತ್ತೆ ಕನ್ಫರ್ಮ್ ಟಿಕೆಟ್, ಜಸ್ಟ್ ಹೀಗೆ ಟಿಕೆಟ್ ಬುಕ್ ಮಾಡಿ..!

IRCTC Tatkal Ticket: ದಿಢೀರನೆ ದೂರದ ಊರಿಗೆ ಪ್ರಯಾಣ ಕೈಗೊಳ್ಳಬೇಕೆ...? ಈ ಬಗ್ಗೆ ಚಿಂತಿಸುವ ಅಗತ್ಯವೇ ಇಲ್ಲ ರೈಲ್ವೆ ಟಿಕೆಟ್ ಬುಕಿಂಗ್ ನಲ್ಲಿನ ವಿಶೇಷ ಸೇವೆಯ ಪ್ರಯೋಜನವನ್ನು ಪಡೆಯುವ ಮೂಲಕ ನೀವು ಕೊನೆ ಕ್ಷಣದಲ್ಲೂ ಸಹ ದೃಢೀಕೃತ ಟ್ರೈನ್ ಟಿಕೆಟ್ ಬುಕ್ ಮಾಡಬಹುದು. 

IRCTC Confirm Ticket: ಟ್ರೈನ್ ಹೊರಡುವ ಕೆಲ ನಿಮಿಷ ಮೊದಲೂ ಸಿಗುತ್ತೆ ಕನ್ಫರ್ಮ್ ಟಿಕೆಟ್, ಜಸ್ಟ್ ಹೀಗೆ ಟಿಕೆಟ್ ಬುಕ್ ಮಾಡಿ..!

IRCTC Confirm Ticket: ಹಬ್ಬದ ಸಮಯದಲ್ಲಿ ರೈಲಿನಲ್ಲಿ ದೃಢೀಕೃತ ಟಿಕೆಟ್ ಪಡೆಯುವುದೇ ಒಂದು ಹರಸಾಹಸ. ಹಾಗಾಗಿಯೇ ದೂರದ ಪ್ರಯಾಣಕ್ಕಾಗಿ ಪ್ರಯಾಣಿಕರು ತಿಂಗಳ ಮುಂಚೆಯೇ ಟಿಕೆಟ್‌ಗಳನ್ನು ಬುಕ್ ಮಾಡುತ್ತಾರೆ. ಆದರೆ, ಕೆಲವೊಮ್ಮೆ ಪ್ರಯಾಣಗಳು ಯೋಜಿತವಾಗಿರುವುದಿಲ್ಲ. ಆಕಸ್ಮಿಕ ಕಾರಣಗಳಿಂದಾಗಿ ದಿಢೀರನೆ ಪ್ರಯಾಣ ಕೈಗೊಳ್ಳಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ತತ್ಕಾಲ್ ಟಿಕೆಟ್ ಬುಕ್ಕಿಂಗ್ ಏಕೈಕ ಮಾರ್ಗವಾಗಿದೆ. ಅದಕ್ಕೂ ಸಹ ಕನಿಷ್ಠ 24ಗಂಟೆಗಳ ಮೊದಲು ಟಿಕೆಟ್ ಬುಕಿಂಗ್ ಮಾಡಬೇಕಾಗುತ್ತದೆ. ಆದಾಗ್ಯೂ, ರೈಲ್ವೇಯ ಮತ್ತೊಂದು ವಿಶೇಷ ಸೇವೆಯ ಬಗ್ಗೆ ಕೆಲವೇ ಜನರಿಗಷ್ಟೇ ಮಾಹಿತಿ ಇದ್ದು, ಇದರ ಸಹಾಯದಿಂದ ರೈಲು ಹೊರಡುವ ಕೆಲವೇ ನಿಮಿಷಗಳ ಮೊದಲು ಸಹ ಕನ್ಫರ್ಮ್ ಟಿಕೆಟ್ ಪಡೆಯಬಹುದಾಗಿದೆ. ಯಾವುದಾ ಸೇವೆ..? ಇದರ ಪ್ರಯೋಜನವನ್ನು ಪಡೆಯುವುದು ಹೇಗೆ ಎಂಬಿತ್ಯಾದಿ ಮಾಹಿತಿಗಾಗಿ ಮುಂದೆ ಓದಿ... 

ಹೌದು, ಬಹುತೇಕ ಸಂದರ್ಭಗಳಲ್ಲಿ ದಿಢೀರನೆ ಪ್ರಯಾಣ ಕೈಗೊಳ್ಳಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಎಲ್ಲರಿಗೂ ವಿಮಾನ ಪ್ರಯಾಣ ಸಾಧ್ಯವಾಗುವುದಿಲ್ಲ. ಹಾಗಂತ ದೂರದ ಊರುಗಳಿಗೆ ರಸ್ತೆ ಮಾರ್ಗವಾಗಿ (ಬಸ್/ಸ್ವಂತ ವಾಹನ) ಹೋಗುವುದು ಸಹ ಆರಾಮದಾಯಕವಾಗಿರುವುದಿಲ್ಲ. ಇಂತಹ ಸಂದರ್ಭದಲ್ಲಿ ಟ್ರೈನ್ ನಲ್ಲಿಯೇ ಪ್ರಯಾಣಿಸಲು ಬಯಸುವವರಿಗಾಗಿ ಭಾರತೀಯ ರೈಲ್ವೆ ವಿಶೇಷ ಸೇವೆಯನ್ನು ಒದಗಿಸುತ್ತದೆ. 

ಇದನ್ನೂ ಓದಿ- New Tax Regime Deductions: ತೆರಿಗೆದಾರರಿಗೆ ಹೊಸ ತೆರಿಗೆ ವ್ಯವಸ್ಥೆಯಲ್ಲೂ ಸಿಗುತ್ತೆ 3 ರೀತಿಯ ಕಡಿತದ ಪ್ರಯೋಜನ..!

ಐ‌ಆರ್‌ಸಿ‌ಟಿ‌ಸಿಯ ಈ ವಿಶೇಷ ಸೇವೆಯಡಿ ಪ್ರಯಾಣಿಕರು ರೈಲು ಹೊರಡುವ ಸ್ವಲ್ಪ ಸಮಯ ಮೊದಲು ಕೂಡ  ಟ್ರೈನ್ ಟಿಕೆಟ್‌ಗಳನ್ನು ಬುಕ್ ಮಾಡಬಹುದು. ಅದೂ ಸಹ ದೃಢೀಕೃತ ಟ್ರೈನ್ ಟಿಕೆಟ್ ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗಬಹುದು. ಭಾರತೀಯ ರೈಲ್ವೆ ಒದಗಿಸುವ ಈ ವಿಶೇಷ ಸೌಲಭ್ಯವನ್ನು ರೈಲ್ವೇಯ ಕರೆಂಟ್ ಟಿಕೆಟ್ ಸೇವೆ (ಪ್ರಸ್ತುತ ಟಿಕೆಟ್ ಬುಕಿಂಗ್ ಆನ್‌ಲೈನ್) ಎಂದು ಹೆಸರಿಸಲಾಗಿದೆ. 

ರೈಲ್ವೆ ಪ್ರಯಾಣಿಕರ ಅನುಕೂಲತೆಯನ್ನು ಗಮನದಲ್ಲಿಟ್ಟುಕೊಂಡು ಭಾರತೀಯ ರೈಲ್ವೆಯು "ರೈಲ್ವೇಯ ಕರೆಂಟ್ ಟಿಕೆಟ್ ಸೇವೆ" ಅನ್ನು ಆರಂಭಿಸಿದೆ. ಈ ಸೇವೆಯಡಿ ರೈಲಿನಲ್ಲಿ ಸೀಟುಗಳು ಖಾಲಿ ಉಳಿದಿದ್ದರೆ ರೈಲು ಹೊರಡುವ ಸ್ವಲ್ಪ ಸಮಯದ ಮೊದಲು ಸಹ ದೃಢೀಕೃತ ಟಿಕೆಟ್‌ಗಳನ್ನು ನೀಡಲಾಗುತ್ತದೆ. ಈ ಸೇವೆಯು ಕೊನೆ ಕ್ಷಣದಲ್ಲಿ ರೈಲಿನಲ್ಲಿ ಪ್ರಯಾಣಿಸಲು ಯೋಜಿಸುವವರಿಗೆ ಪ್ರಯೋಜನಕಾರಿ ಆಗಿದೆ. 

ಇದನ್ನೂ ಓದಿ- New PF System: ಇಪಿ‌ಎಫ್‌ಒ ಚಂದಾದಾರರು UPI ಮೂಲವೇ ಪಿ‌ಎಫ್ ಹಣ ವಿತ್ ಡ್ರಾ ಮಾಡಬಹುದು, ಇಲ್ಲಿದೆ ಸಿಂಪಲ್ ಟ್ರಿಕ್

ರೈಲ್ವೇಯ ಕರೆಂಟ್ ಟಿಕೆಟ್ ಸೇವೆ ಸೌಲಭ್ಯವನ್ನು ಪಡೆಯುವುದು ಹೇಗೆ? 
ಐ‌ಆರ್‌ಸಿ‌ಟಿ‌ಸಿ ವೆಬ್‌ಸೈಟ್‌ನಿಂದ ಆನ್‌ಲೈನ್‌ನಲ್ಲಿ ಟಿಕೆಟ್‌ಗಳನ್ನು ಬುಕ್ ಮಾಡುವ ಮೂಲಕ ಅಥವಾ ಟಿಕೆಟ್ ಕೌಂಟರ್‌ಗೆ ಭೇಟಿ ನೀಡುವ ಮೂಲಕ  "ರೈಲ್ವೇಯ ಕರೆಂಟ್ ಟಿಕೆಟ್ ಸೇವೆ" ಸೇವೆಯನ್ನು ಪಡೆಯಬಹುದು. ಗಮನಾರ್ಹವಾಗಿ ರೈಲು ಹೊರಡುವ ನಾಲ್ಕು ಗಂಟೆಗಳ ಮೊದಲು ಪ್ರಸ್ತುತ ನಿಮ್ಮ ಗಮ್ಯಸ್ಥಾನಕ್ಕೆ  ಸ್ಸಿಟ್ ಸಿಗುತ್ತದೆಯೇ ಅಥವಾ ಇಲ್ಲವೇ ಎಂಬುದನ್ನೂ ಪರಿಶೀಲಿಸಿ ಟಿಕೆಟ್ ಬುಕ್ ಮಾಡಬಹುದು. 

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More