Home> Business
Advertisement

ಟ್ರಂಪ್ ʼಸುಂಕʼದಿಂದ ವಿಶ್ವದ GDPಯಲ್ಲಿ 3% ಕುಸಿತಕ್ಕೆ ಕಾರಣ; ಭಾರತದ ಮೇಲೆ ಯಾವ ರೀತಿಯ ಪರಿಣಾಮ?

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚೀನಾ ಹೊರತುಪಡಿಸಿ ಹೆಚ್ಚಿನ ದೇಶಗಳ ಮೇಲೆ 90 ದಿನಗಳವರೆಗೆ 'ಪ್ರತೀಕಾರದ ಸುಂಕ'ಗಳನ್ನು ಮುಂದೂಡಿದ್ದಾರೆ. ಅಮೆರಿಕದಿಂದ ಆಮದು ಮಾಡಿಕೊಳ್ಳುವ ಸರಕುಗಳ ಮೇಲೆ ಶೇ.125ರಷ್ಟು ಸುಂಕ ವಿಧಿಸಲು ಚೀನಾ ನಿರ್ಧರಿಸಿದೆ.

ಟ್ರಂಪ್ ʼಸುಂಕʼದಿಂದ ವಿಶ್ವದ GDPಯಲ್ಲಿ 3% ಕುಸಿತಕ್ಕೆ ಕಾರಣ; ಭಾರತದ ಮೇಲೆ ಯಾವ ರೀತಿಯ ಪರಿಣಾಮ?

Trump tariffs update: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ವಿವಿಧ ದೇಶಗಳ ಮೇಲೆ ವಿಧಿಸಿರುವ ಸುಂಕಗಳ ಮೌಲ್ಯಮಾಪನ ನಡೆಯುತ್ತಿದೆ. ಈ ಮಧ್ಯೆ ಟ್ರಂಪ್ ಹಲವು ದೇಶಗಳ ಮೇಲಿನ ಸುಂಕ ಹೆಚ್ಚಿಸುವ ನಿರ್ಧಾರವನ್ನು 90 ದಿನಗಳವರೆಗೆ ಮುಂದೂಡಿದ್ದಾರೆ. ಆದರೆ ʼದೊಡ್ಡಣ್ಣʼ ಚೀನಾದ ಮೇಲೆ ಶೇ.145ರಷ್ಟು ಸುಂಕ ವಿಧಿಸಿದ್ದಾರೆ. ಏತನ್ಮಧ್ಯೆ, ಪ್ರಪಂಚದಾದ್ಯಂತದ ಅರ್ಥಶಾಸ್ತ್ರಜ್ಞರು ಈ ಸುಂಕವು ವಿಶ್ವ ಆರ್ಥಿಕತೆಯ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ? ಅನ್ನೋದರ ಬಗ್ಗೆ ಚರ್ಚಿಸುತ್ತಿದ್ದಾರೆ. ವಿಶ್ವಸಂಸ್ಥೆಯ ಪ್ರಮುಖ ಅರ್ಥಶಾಸ್ತ್ರಜ್ಞರ ಪ್ರಕಾರ, ಅಮೆರಿಕ ವಿಧಿಸಿರುವ ಹೊಸ ಸುಂಕಗಳಿಂದ ಜಾಗತಿಕ ವ್ಯಾಪಾರವು ಸುಮಾರು 3%ರಷ್ಟು ಕುಸಿಯಬಹುದು ಎಂದು ಅಂದಾಜಿಸಲಾಗಿದೆ. ಈ ಕುಸಿತದಿಂದ ಅಮೆರಿಕ ಮತ್ತು ಚೀನಾದಂತಹ ದೊಡ್ಡ ಮಾರುಕಟ್ಟೆಗಳಿಂದ ರಫ್ತುಗಳು ಈಗ ಭಾರತ, ಕೆನಡಾ ಮತ್ತು ಬ್ರೆಜಿಲ್‌ನಂತಹ ದೇಶಗಳಿಗೆ ಸ್ಥಳಾಂತರಗೊಳ್ಳಬಹುದು. ಇದರರ್ಥ ಈ ಸುಂಕ ಸಮರದಲ್ಲಿ ಭಾರತವು ಹೆಚ್ಚಿನ ಲಾಭ ಪಡೆಯುವ ನಿರೀಕ್ಷೆಯಿದೆ. 

ಹೊಸ ವ್ಯಾಪಾರ ಮಾದರಿಗಳು ಮತ್ತು ಆರ್ಥಿಕ ಏಕೀಕರಣದಲ್ಲಿನ ಬದಲಾವಣೆಗಳು ಜಾಗತಿಕ ವ್ಯಾಪಾರವನ್ನು 3%ರಷ್ಟು ಕಡಿಮೆ ಮಾಡಬಹುದು ಎಂದು ಜಿನೀವಾದಲ್ಲಿರುವ ಅಂತಾರಾಷ್ಟ್ರೀಯ ವ್ಯಾಪಾರ ಕೇಂದ್ರದ ಕಾರ್ಯನಿರ್ವಾಹಕ ನಿರ್ದೇಶಕಿ ಪಮೇಲಾ ಕೋಕ್-ಹ್ಯಾಮಿಲ್ಟನ್ ಹೇಳಿದ್ದಾರೆ. ʼಉದಾಹರಣೆಗೆ ಮೆಕ್ಸಿಕೊದಿಂದ ರಫ್ತುಗಳು ಈಗ ಅಮೆರಿಕ, ಚೀನಾ, ಯುರೋಪ್ ಮತ್ತು ಇತರ ಲ್ಯಾಟಿನ್ ಅಮೇರಿಕನ್ ಮಾರುಕಟ್ಟೆಗಳಿಂದ ದೂರ ಸರಿಯುತ್ತಿರುವುದನ್ನು ಕಾಣಬಹುದು. ಇದು ಕೆನಡಾ ಮತ್ತು ಬ್ರೆಜಿಲ್‌ಗೆ ರಫ್ತುಗಳಲ್ಲಿ ಸಾಧಾರಣ ಬೆಳವಣಿಗೆಯನ್ನು ಉಂಟುಮಾಡುತ್ತಿದೆ ಮತ್ತು ಭಾರತಕ್ಕೆ ಸ್ವಲ್ಪ ಮಟ್ಟಿಗೆ ಕಡಿಮೆ ಪ್ರಮಾಣದಲ್ಲಿದೆ" ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: EPFO: ನಿಮ್ಮ UAN ಸಂಖ್ಯೆಯನ್ನು ಮರೆತಿದ್ದೀರಾ? ಅದನ್ನು ಸುಲಭವಾಗಿ ಪಡೆಯುವ ಮಾರ್ಗ ಇಲ್ಲಿದೆ..!

2029ರ ವೇಳೆಗೆ US ರಫ್ತು ವಾರ್ಷಿಕ $3.3 ಬಿಲಿಯನ್ ಕಡಿಮೆಯಾಗಬಹುದು!

ವಿಯೆಟ್ನಾಂನ ರಫ್ತುಗಳು ಅಮೆರಿಕ, ಮೆಕ್ಸಿಕೊ ಮತ್ತು ಚೀನಾಕ್ಕಿಂತ ಹೆಚ್ಚಾಗಿ ಪಶ್ಚಿಮ ಏಷ್ಯಾ, ಉತ್ತರ ಆಫ್ರಿಕಾ (MENA), EU, ದಕ್ಷಿಣ ಕೊರಿಯಾ ಮತ್ತು ಇತರ ಮಾರುಕಟ್ಟೆಗಳಿಗೆ ಹೋಗುತ್ತಿವೆ ಎಂದು ಅವರು ಹೇಳಿದ್ದಾರೆ. ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಆರ್ಥಿಕ ಚಟುವಟಿಕೆ ಮತ್ತು ಉದ್ಯೋಗ ಸೃಷ್ಟಿಗೆ ಉಡುಪು ಉದ್ಯಮದ ಉದಾಹರಣೆಯನ್ನ ಉಲ್ಲೇಖಿಸಿದ ಅವರು, ಈ ವಲಯವು ನಿರ್ಣಾಯಕವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಒಂದು ವೇಳೆ ಸುಂಕ ವಿಧಿಸಿದರೆ ವಿಶ್ವದ ಎರಡನೇ ಅತಿದೊಡ್ಡ ಉಡುಪು ರಫ್ತುದಾರ ರಾಷ್ಟ್ರವಾದ ಬಾಂಗ್ಲಾದೇಶವು ಶೇ.37ರಷ್ಟು ಪ್ರತೀಕಾರದ ಸುಂಕವನ್ನು ಎದುರಿಸಬೇಕಾಗುತ್ತದೆ, ಇದು 2029ರ ವೇಳೆಗೆ ಅಮೆರಿಕದ ರಫ್ತಿನಲ್ಲಿ ವಾರ್ಷಿಕ $3.3 ಬಿಲಿಯನ್ ನಷ್ಟಕ್ಕೆ ಕಾರಣವಾಗಬಹುದು ಅಂತಾ ಅಂದಾಜಿಸಲಾಗಿದೆ.

ಜಾಗತಿಕ ಬಿಕ್ಕಟ್ಟುಗಳನ್ನು ನಿಭಾಯಿಸಲು ಅಭಿವೃದ್ಧಿಶೀಲ ರಾಷ್ಟ್ರಗಳು ವೈವಿಧ್ಯೀಕರಣ, ಮೌಲ್ಯವರ್ಧನೆ ಮತ್ತು ಪ್ರಾದೇಶಿಕ ಏಕೀಕರಣದತ್ತ ಗಮನಹರಿಸಬೇಕು. ಅದು COVID ಸಾಂಕ್ರಾಮಿಕ, ಹವಾಮಾನ ಬದಲಾವಣೆ ಅಥವಾ ನೀತಿ ಬದಲಾವಣೆಗಳಾಗಿರಬಹುದು ಎಂದು ಅವರು ಒತ್ತಿ ಹೇಳಿದ್ದಾರೆ. "ಅನಿಶ್ಚಿತತೆಯ ಸಮಯದಲ್ಲೂ ಸಹ ಈ ದೇಶಗಳು ಬಿಕ್ಕಟ್ಟನ್ನು ಎದುರಿಸಲು ಮಾತ್ರವಲ್ಲದೆ ದೀರ್ಘಾವಧಿಯ ಸಿದ್ಧತೆಗೆ ಅವಕಾಶಗಳನ್ನು ಸಹ ಕಂಡುಕೊಳ್ಳಬಹುದು" ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. 90 ದಿನಗಳ ಸುಂಕ ವಿರಾಮ ಮತ್ತು ಚೀನಾದ ಮೇಲೆ ಹೆಚ್ಚುವರಿ ಸುಂಕಗಳನ್ನು ವಿಧಿಸುವ ಮೊದಲು ದತ್ತಾಂಶವನ್ನು ಆಧರಿಸಿ ಫ್ರೆಂಚ್ ಅರ್ಥಶಾಸ್ತ್ರ ಸಂಶೋಧನಾ ಸಂಸ್ಥೆ CEPII ಸಹಯೋಗದೊಂದಿಗೆ ಈ ಮುನ್ಸೂಚನೆಗಳನ್ನ ಸಿದ್ಧಪಡಿಸಲಾಗಿದೆ ಎಂದು ಅವರು ಹೇಳಿದ್ದಾರೆ. 

ಇದನ್ನೂ ಓದಿ: BIG Decision On DA Hike: ತುಟ್ಟಿಭತ್ಯೆ ಹೆಚ್ಚಳದ ಕುರಿತಾಗಿ ಮಹತ್ವದ ನಿರ್ಧಾರ..! ನಿಮ್ಮ ತುಟ್ಟಿಭತ್ಯೆ ಹೆಚ್ಚಳ ಎಷ್ಟು ಗೊತ್ತಾ?

೨೦೪೦ರ ವೇಳೆಗೆ ಜಾರಿಗೆ ತರಲಾದ 'ಪ್ರತೀಕಾರದ' ಸುಂಕಗಳು ಮತ್ತು ಆರಂಭಿಕ ಪ್ರತಿಕ್ರಮಗಳು ಜಾಗತಿಕ ಒಟ್ಟು ದೇಶೀಯ ಉತ್ಪನ್ನವನ್ನು (GDP) ಸುಮಾರು ಶೇ.೦.೭ರಷ್ಟು ಕಡಿಮೆ ಮಾಡಬಹುದು ಎಂದು ಅವರು ಅಂದಾಜಿಸಿದ್ದಾರೆ. ಅಮೆರಿಕ ಜೊತೆಗೆ ಮೆಕ್ಸಿಕೊ, ಚೀನಾ, ಥೈಲ್ಯಾಂಡ್ ಮತ್ತು ದಕ್ಷಿಣ ಆಫ್ರಿಕಾದಂತಹ ದೇಶಗಳು ಹೆಚ್ಚು ಪರಿಣಾಮ ಬೀರುತ್ತವೆ.

ಚೀನಾ ಕೂಡ ವ್ಯಾಪಾರ ಯುದ್ಧದಲ್ಲಿ ಸಕ್ರಿಯವಾಗಿದೆ

ವಾಷಿಂಗ್ಟನ್ ಡಿಸಿ ಮೂಲದ ಏಷ್ಯಾ ಸೊಸೈಟಿ ಪಾಲಿಸಿ ಇನ್‌ಸ್ಟಿಟ್ಯೂಟ್ (ASPI)ನ ಉಪಾಧ್ಯಕ್ಷೆ ಮತ್ತು ವ್ಯವಸ್ಥಾಪಕ ನಿರ್ದೇಶಕಿ ವೆಂಡಿ ಕಟ್ಲರ್ ಪ್ರಕಾರ, ಅಮೆರಿಕದ ಆಮದುಗಳ ಮೇಲಿನ ಸುಂಕವನ್ನು ಹೆಚ್ಚಿಸುವ ಚೀನಾದ ಘೋಷಣೆಯು ಚೀನಾ ಸಹ ವ್ಯಾಪಾರ ಯುದ್ಧದಲ್ಲಿ ಸಕ್ರಿಯವಾಗಿರುತ್ತದೆ ಎಂಬುದನ್ನು ಸ್ಪಷ್ಟಪಡಿಸುತ್ತದೆ. ಚೀನಾ ಈಗ ದೀರ್ಘ ಯುದ್ಧವನ್ನು ಎದುರಿಸಲು ಸಿದ್ಧವಾಗಿದೆ. ಅಮೆರಿಕ ತೆಗೆದುಕೊಂಡ ಹೆಚ್ಚುವರಿ ಕ್ರಮಗಳಿಗೆ ಪ್ರತಿಕ್ರಿಯೆಯಾಗಿ ತನ್ನ ಬಳಿ ಇರುವ ಇತರ ಕ್ರಮಗಳನ್ನು ಸಹ ಸಕ್ರಿಯಗೊಳಿಸಬಹುದು ಎಂದು ಅದು ಸೂಚಿಸಿದೆʼ ಅಂತಾ ಹೇಳಿದ್ದಾರೆ. ಪ್ರಸ್ತುತ ಅಮೆರಿಕಕ್ಕೆ ಚೀನಾದ ಆಮದುಗಳು ಶೇ.145ರಷ್ಟು ಭಾರೀ ಸುಂಕವನ್ನು ಎದುರಿಸುತ್ತಿವೆ ಮತ್ತು ಚೀನಾ ಅಮೆರಿಕದ ಆಮದುಗಳ ಮೇಲೆ ಶೇ.125 ರಷ್ಟು ಸುಂಕವನ್ನು ವಿಧಿಸುತ್ತಿದೆ, ಇದು ವಿಶ್ವದ ಎರಡು ದೊಡ್ಡ ಆರ್ಥಿಕತೆಗಳ ನಡುವಿನ ಸರಕು ವ್ಯಾಪಾರದ ಮೇಲೆ ಭಾರೀ ಪರಿಣಾಮ ಬೀರಬಹುದು ಎಂದು ಕಟ್ಲರ್ ಅಭಿಪ್ರಾಯಪಟ್ಟಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

Read More