Home> Career
Advertisement

ಲಕ್ಷ ಲಕ್ಷ ಫೀಸ್ ಕಟ್ಟಬೇಕಿಲ್ಲ!ಈ ಕಾಲೇಜಿನಲ್ಲಿ MBBSಗೆ ಕೇವಲ 70,000 ರೂ. ಶುಲ್ಕ !ಬಡವರ ಮಕ್ಕಳೂ ಇಲ್ಲಿ ವೈದ್ಯರಾಗಬಹುದು

ಅಗ್ಗದ ಬೆಲೆಯಲ್ಲಿ ವೈದ್ಯಕೀಯ ಶಿಕ್ಷಣವನ್ನು ನೀಡುವ ಸಂಸ್ಥೆ ಒಂದಿದೆ. ಇಲ್ಲಿ  MBBS ಫೀಸ್ ಕೇವಲ 60 ಸಾವಿರ ರೂಪಾಯಿ .
 

ಲಕ್ಷ ಲಕ್ಷ ಫೀಸ್ ಕಟ್ಟಬೇಕಿಲ್ಲ!ಈ ಕಾಲೇಜಿನಲ್ಲಿ MBBSಗೆ ಕೇವಲ  70,000 ರೂ. ಶುಲ್ಕ !ಬಡವರ ಮಕ್ಕಳೂ ಇಲ್ಲಿ ವೈದ್ಯರಾಗಬಹುದು

ನೀಟ್, ಜೆಇಇ ಪರೀಕ್ಷೆಗಳ ಫಲಿತಾಂಶ ಬಂದಾಗಿದೆ. ಎಂಜಿನಿಯರ್, ಡಾಕ್ಟರ್ ಆಗುವ ಕನಸು ಹೊತ್ತ ವಿದ್ಯಾರ್ಥಿಗಳು ಬೆಸ್ಟ್ ಎಂಜಿನಿಯರಿಂಗ್, ಮೆಡಿಕಲ್ ಕಾಲೇಜಿನ ಹುಡುಕಾಟದಲ್ಲಿದ್ದಾರೆ. ಆದರೆ ಎಲ್ಲರಿಗೂ ತಿಳಿದಿರುವಂತೆ  ವೈದ್ಯಕೀಯ ಕೋರ್ಸ್ ಬಲು ದುಬಾರಿ. ಲಕ್ಷ ಲಕ್ಷ ಫೀಸ್ ಕಟ್ಟಿದರೆ ಮಾತ್ರ ವೈದ್ಯರಾಗುವ ಕನಸು ನನಸಾಗಿಸಬಹುದು. ಆದರೆ ಇದರ ಮಧ್ಯೆ, ಅಗ್ಗದ ಬೆಲೆಯಲ್ಲಿ ವೈದ್ಯಕೀಯ ಶಿಕ್ಷಣವನ್ನು ನೀಡುವ ಸಂಸ್ಥೆ ಒಂದಿದೆ. ಇಲ್ಲಿ  MBBS ಫೀಸ್ ಕೇವಲ 60 ಸಾವಿರ ರೂಪಾಯಿ .

ಸಶಸ್ತ್ರ ಪಡೆಗಳ ವೈದ್ಯಕೀಯ ಕಾಲೇಜು (AFMC) :
ಈ ಕಾಲೇಜು ಆರಂಭವಾಗಿದ್ದು 1948ರಲ್ಲಿ. ದೇಶದ ಸಶಸ್ತ್ರ ಪಡೆಗಳಿಗೆ ಹೆಚ್ಚಿನ ವೈದ್ಯಕೀಯ ಸಿಬ್ಬಂದಿಯನ್ನು ಒದಗಿಸುವ ಜವಾಬ್ದಾರಿ ಈ ಸಂಸ್ಥೆಯದ್ದು. ಇದು ಸರ್ಕಾರಿ ಸಂಸ್ಥೆ. ಹಾಗಾಗಿ ಇಲ್ಲಿ ಎಂಬಿಬಿಎಸ್ ಶುಲ್ಕ ಕಡಿಮೆ ಅಂದರೆ  ವಾರ್ಷಿಕ 60,000 ರಿಂದ 70,000 ರೂ.ಗಳವರೆಗೆ ಮಾತ್ರ. ಅಂದ ಹಾಗೆ ಈ ಕಾಲೇಜು ಇರುವುದು ಪುಣೆ ಕಂಟೋನ್ಮೆಂಟ್‌ನಲ್ಲಿ. ಸಶಸ್ತ್ರ ಪಡೆಗಳ ವೈದ್ಯಕೀಯ ಕಾಲೇಜು ಸಂಪೂರ್ಣ ವಸತಿ ಕ್ಯಾಂಪಸ್ . NIRF 2024 ರ ವೈದ್ಯಕೀಯ ಕಾಲೇಜು 30ನೇ ಶ್ರೇಯಾಂಕದೊಂದಿಗೆ, ಭಾರತದ ವೈದ್ಯಕೀಯ ವಿದ್ಯಾರ್ಥಿಗಳಿಗೆ ಉನ್ನತ ಆಯ್ಕೆಯಾಗಿದೆ. ಎಂಡಿ ಮತ್ತು ಎಂಎಸ್‌ನಂತಹ ಪಿಜಿ ಪ್ರೋಗ್ರಾಮ್ ಗಳಿಗೆ ಶುಲ್ಕಗಳು ಸಾಮಾನ್ಯವಾಗಿ ಹೆಚ್ಚಿರುತ್ತವೆ.

ಇದನ್ನೂ ಓದಿ : CUSAT CAT 2025 ಫಲಿತಾಂಶ ಪ್ರಕಟ: ರಿಸಲ್ಟ್ ಪರಿಶೀಲಿಸುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ..!

AFMC ಪುಣೆಯಲ್ಲಿ ಜನರಲ್/ಇಡಬ್ಲ್ಯೂಎಸ್ ವಿಭಾಗದ NEET UG 2024 ರ ಕಟ್-ಆಫ್ ಶ್ರೇಣಿ 720 ಮತ್ತು 164 ರ ನಡುವೆ ಇತ್ತು.ಸಶಸ್ತ್ರ ಪಡೆಗಳ ವೈದ್ಯಕೀಯ ಕಾಲೇಜು ಪುಣೆಯ ವಾನೋವ್ರಿಯಲ್ಲಿದೆ. ಈ ಕಾಲೇಜಿನ ಬಗ್ಗೆ  ಯಾವುದೇ ರೀತಿಯ ಮಾಹಿತಿ ಬೇಕಾದರೆ, 020-26333572, 020-26334209 ಈ ಸಂಖ್ಯೆಗಳಿಗೆ ಕರೆ ಮಾಡಬಹುದು ಅಥವಾ www.afmc.nic.in ಗೆ ಭೇಟಿ ನೀಡಬಹುದು.

ಉತ್ತಮ ಶ್ರೇಯಾಂಕ ಹೊಂದಿರುವ ಇನ್ನೊಂದು ಕಾಲೇಜು ಇದೆ. ಆದರೆ ಇಲ್ಲಿ ಫೀಸ್ ಕಡಿಮೆ ಎನ್ನುವ ಹಾಗಿಲ್ಲ. ಆದ್ರೆ ಬೆಸ್ಟ್ ಶಿಕ್ಷಣ ಸಂಸ್ಥೆ. ಹೌದು, ನಾವಿಲ್ಲಿ ಹೇಳುತ್ತಿರುವುದು ದತ್ತ ಮೇಘೆ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ. ದತ್ತ ಮೇಘೆ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯನ್ನು ಹಿಂದೆ ದತ್ತ ಮೇಘೆ ವೈದ್ಯಕೀಯ ವಿಜ್ಞಾನ ಸಂಸ್ಥೆ (DMIMS) ಎಂದು ಕರೆಯಲಾಗುತ್ತಿತ್ತು. ಈ ಡೀಮ್ಡ್-ಟು-ಬಿ ಯುನಿವರ್ಸಿಟಿ ಎರಡು ವೈದ್ಯಕೀಯ ಕಾಲೇಜುಗಳನ್ನು ಹೊಂದಿದೆ. ಅದುವೇ ಜವಾಹರಲಾಲ್ ನೆಹರು ವೈದ್ಯಕೀಯ ಕಾಲೇಜು, ವಾರ್ಧಾ ಮತ್ತು ದತ್ತ ಮೇಘೆ ವೈದ್ಯಕೀಯ ಕಾಲೇಜು ಆಫ್ ಕ್ಯಾಂಪಸ್, ವನಡೋಂಗ್ರಿ, ನಾಗ್ಪುರ.

ಇದನ್ನೂ ಓದಿ : ದೀಕ್ಷಾ ವೇದಾಂತು ಸಂಸ್ಥೆಯ ದಕ್ಷ್ ತಯಾಲಿಯಾ ಜೆಇಇ ಅಡ್ವಾನ್ಸ್ಡ್‌ನಲ್ಲಿ ಕರ್ನಾಟಕ ಟಾಪರ್‌: AIR 15 ಮತ್ತು ಗಣಿತದಲ್ಲಿ 120ಕ್ಕೆ 120 ಅಂಕ

NIRF 2024 ರ ಪ್ರಕಾರ, ಇದು ಒಟ್ಟಾರೆ ವಿಭಾಗದಲ್ಲಿ 71 ನೇ ಶ್ರೇಣಿಯನ್ನು ಹೊಂದಿದೆ. ಇದು ವಿಶ್ವವಿದ್ಯಾಲಯ ವಿಭಾಗದಲ್ಲಿ 42 ನೇ ಸ್ಥಾನದಲ್ಲಿದೆ ಮತ್ತು ದಂತ ಕಾಲೇಜುಗಳ ವಿಭಾಗದಲ್ಲಿ 24 ನೇ ಸ್ಥಾನದಲ್ಲಿದೆ. ಶುಲ್ಕದ ಬಗ್ಗೆ ಹೇಳುವುದಾದರೆ, ಇಲ್ಲಿ MBBS ಶುಲ್ಕ ವಾರ್ಷಿಕ 20,75,000 ರೂ. NEET UG ಕಟ್-ಆಫ್ ನೋಡುವುದಾದರೆ ದತ್ತ ಮೇಘೆ ಸಂಸ್ಥೆಯ NEET UG 2024 ರ ಕಟ್-ಆಫ್ ಅನ್ನು ಸಾಮಾನ್ಯ AI ವಿಭಾಗದಲ್ಲಿ 4ನೇ ಸುತ್ತಿನ ಸೀಟು ಹಂಚಿಕೆಯಲ್ಲಿ 1,05,591 ಕ್ಕೆ ನಿಗದಿಪಡಿಸಿತ್ತು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ

Read More