Telangana murder case: ಇತ್ತೀಚಿಗೆ ನವವಿವಾಹಿತ ಗಂಡು ಮಕ್ಕಳ ಕೊಲೆ ಪ್ರಕರಣಗಳು ಹೆಚ್ಚುತ್ತಿವೆ. ಮದುವೆ ಬಳಿಕ ಅಕ್ರಮ ಸಂಬಂಧ ಇಟ್ಟುಕೊಂಡ ಪತ್ನಿಯರು ಪ್ರಿಯಕರನ ಜೊತೆ ಸೇರಿ ಗಂಡನನ್ನೇ ಭೀಕರವಾಗಿ ಕೊಲೆ ಮಾಡಿರುವ ಹಲವಾರು ಘಟನೆಗಳು ನಡೆದಿವೆ. ಕಳೆದ ಕೆಲವು ದಿನಗಳ ಹಿಂದಷ್ಟೇ ಮೇಘಾಲಯಕ್ಕೆ ಹನಿಮೂನ್‌ಗೆಂದು ತೆರಳಿದ್ದ ರಾಜಾ ರಘುವಂಶಿಯ ಕೊಲೆ ಪ್ರಕರಣ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಇದೀಗ ಅಂತಹದ್ದೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.
ನೆರೆಯ ತೆಲಂಗಾಣ ರಾಜ್ಯದ ಗಡ್ವಾಲ್‌ನಲ್ಲಿ ಮನೆಯಿಂದ ನಾಪತ್ತೆಯಾಗಿದ್ದ ನವವಿವಾಹಿತನೊಬ್ಬ ನಂದ್ಯಾಲ್ ಜಿಲ್ಲೆಯ ಪನ್ಯಂ ಪೊಲೀಸ್ ಠಾಣೆ ವ್ಯಾಪ್ತಿಯ ಪಿನ್ನಾಪುರಂ ಬಳಿ ಶವವಾಗಿ ಪತ್ತೆಯಾಗಿದ್ದಾನೆ. ಮೃತನ ಪತ್ನಿ ಕರ್ನೂಲಿನ ಬ್ಯಾಂಕ್ ಮ್ಯಾನೇಜರ್ ಜೊತೆ ವಿವಾಹೇತರ ಸಂಬಂಧ ಹೊಂದಿದ್ದಾಳೆಂದು ಕುಟುಂಬಸ್ಥರು ಶಂಕಿಸಿದ್ದಾರೆ. ಮೃತ ವ್ಯಕ್ತಿ ಕೇವಲ ಒಂದು ತಿಂಗಳ ಹಿಂದಷ್ಟೇ ವಿವಾಹವಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಈ ಪ್ರಕರಣವು ಮೇಘಾಲಯದಲ್ಲಿ ನಡೆದ ರಾಜಾ ರಘುವಂಶಿ ಕೊಲೆಯನ್ನ ನೆನಪಿಸುತ್ತದೆ. ಗಡ್ವಾಲ್ ಪಟ್ಟಣದ ಗುಂಟಾ ಬೀದಿಯ 32 ವರ್ಷದ ಸರ್ವೇಯರ್ ತೇಜೇಶ್ವರ್ ಶವ ಸುಗಲಿಮೆಟ್ಟದ HNSS ಕಾಲುವೆಯ ಬಳಿ ಪತ್ತೆಯಾಗಿದೆ. ಆತನ ಪತ್ನಿಯ ಮೇಲೆ ಕೊಲೆ ಶಂಕೆ ವ್ಯಕ್ತವಾಗಿದೆ.
ಇದನ್ನೂ ಓದಿ: ಮೆಟ್ರೋದ ಲೇಡೀಸ್ ಕೋಚ್‌ನಲ್ಲಿ ಹಾವಿನ ಭಯದಿಂದ ಬೆದರಿದ ಮಹಿಳೆಯರು..! ವೈರಲ್ ವಿಡಿಯೋ
ತೇಜೇಶ್ವರ್ ಕರ್ನೂಲಿನ ಐಶ್ವರ್ಯ ಎಂಬಾಕೆಯನ್ನ ಪ್ರೀತಿಸಿ ಕಳೆದ ಒಂದು ತಿಂಗಳ ಹಿಂದಷ್ಟೇ ಮದುವೆಯಾಗಿದ್ದರು. ಆದರೆ ಜೂನ್ 17ರಂದು ತೇಜೇಶ್ವರ್ ನಾಪತ್ತೆಯಾಗಿದ್ದರು. ಅವರ ಕುಟುಂಬಸ್ಥರು ಮರುದಿನ ಗಡ್ವಾಲ್ ಪೊಲೀಸರಿಗೆ ದೂರು ನೀಡಿದ್ದರು. ನಾಪತ್ತೆ ಪ್ರಕರಣದ ತನಿಖೆ ನಡೆಸಿದ ಗಡ್ವಾಲ್ ಪೊಲೀಸರು ಸಿಸಿಟಿವಿ ವಿಡಿಯೋಗಳನ್ನ ಪರಿಶೀಲಿಸಿದಾಗ ತೇಜೇಶ್ವರ್ ಕರ್ನೂಲ್ ಜಿಲ್ಲೆಯ ಕಡೆಗೆ ಕಾರಿನಲ್ಲಿ ಹೊಗಿರುವುದು ಕಂಡುಬಂದಿದೆ. ಬಳಿಕ ಅವರ ಮೊಬೈಲ್ ಟ್ರ್ಯಾಕ್ ಮಾಡಿದ ಪೊಲೀಸರು ಜೂನ್ 21ರಂದು ಕಾಲುವೆಯ ಬಳಿ ಶವವನ್ನು ಪತ್ತೆ ಮಾಡಿದ್ದರು. ಪತ್ನಿಯೇ ಪ್ರಿಯಕರನ ಜೊತೆ ಸೇರಿ ಸುಪಾರಿ ಕೊಟ್ಟು ಪತಿ ತೇಜೇಶ್ವರ್‌ನನ್ನ ಕೊಲೆ ಮಾಡಿಸಿದ್ದಾಳೆಂದು ಶಂಕಿಸಲಾಗಿದೆ.
ಐಶ್ವರ್ಯಾ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದು, ಆಕೆ ಬ್ಯಾಂಕ್ ಮ್ಯಾನೇಜರ್ ಜೊತೆ ವಿವಾಹೇತರ ಸಂಬಂಧ ಹೊಂದಿದ್ದಾಳೆಂದು ಆರೋಪಿಸಲಾಗಿದೆ. ತೇಜೇಶ್ವರ್ ತಮ್ಮ ಸಂಬಂಧಕ್ಕೆ ಅಡ್ಡಿಯಾಗಬಹುದು ಅಂತಾ ಭಾವಿಸಿ ಆತನನ್ನ ಕೊಲ್ಲಲು ಸಂಚು ರೂಪಿಸಿದ್ದಳೆಂದು ತೇಜೇಶ್ವರ್ ಸಹೋದರ ಆರೋಪಿಸಿದ್ದಾರೆ. ಐಶ್ವರ್ಯಗೆ ಆಗಾಗ ಪದೇ ಪದೇ ಕರೆಗಳು ಬರುತ್ತಿದ್ದವು. ಅಲ್ಲದೆ ಆಕೆ ಕದ್ದುಮುಚ್ಚಿ ಮಾತನಾಡುತ್ತಿರುವುದನ್ನ ಗಮನಿಸುತ್ತಿದ್ದ ಪತಿ ತೇಜೇಶ್ವರ್, ʼಯಾರ ಜೊತೆಗೆ ಮಾತನಾಡುತ್ತಿದ್ದಿಯಾ?ʼ ಎಂದು ಪ್ರಶ್ನಿಸಿದಾಗ, ʼನನ್ನ ತಾಯಿ ಜೊತೆಗೆ ಮಾತನಾಡುತ್ತಿದ್ದೇನೆʼ ಅಂತಾ ಹೇಳಿ ಪಾರಾಗುತ್ತಿದ್ದಳಂತೆ.
ಇದನ್ನೂ ಓದಿ: ಕಾರಿನ ಚಕ್ರದಡಿ ಸಿಲುಕಿ ವೃದ್ಧ ಅಪ್ಪಚ್ಚಿ : ಕೈ ಬೀಸಿ ಹೊರಟ ಮಾಜಿ ಸಿಎಂ..!
ಜಮೀನಿನ ಸಮೀಕ್ಷೆ ನಡೆಸುವ ನೆಪದಲ್ಲಿ ತೇಜೇಶ್ವರ್ ಅವರನ್ನು ಐಶ್ವರ್ಯಾಳ ಪ್ರಿಯಕರ ಬ್ಯಾಂಕ್ ಮ್ಯಾನೇಜರ್ ಕರೆದುಕೊಂಡು ಹೋಗಲು ಕಾರನ್ನು ಕಳುಹಿಸಿದ್ದಾರೆ. ಬಳಿಕ ಅವರನ್ನು ಪಿನ್ನಾಪುರಕ್ಕೆ ಕರೆದೊಯ್ದು ಕೊಲೆ ಮಾಡಿದ್ದಾರೆ. ಈ ಹತ್ಯೆಯ ಯೋಜನೆಯಲ್ಲಿ ಪತ್ನಿಯೂ ಭಾಗಿಯಾಗಿದ್ದಾರೆಂದು ತೇಜೇಶ್ವರ್ ಅವರ ಸಹೋದರ ಆರೋಪಿಸಿದ್ದಾರೆ. ಪ್ರಕರಣ ಸಂಬಂಧ ತೇಜೇಶ್ವರ್ ಪತ್ನಿ ಸೇರಿದಂತೆ ಮೂವರನ್ನ ಬಂಧಿಸಲಾಗಿದೆ ಎಂದು ಗಡ್ವಾಲ್ ಪೊಲೀಸರು ತಿಳಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ