Home> Entertainment
Advertisement

ಕನ್ನಡಿಗರ ವಿರುದ್ಧವೇ ಮಾತನಾಡಿದ್ದ ಈ ಚೆಲುವೆಗೆ ಸಿಕ್ತು ಬಿಗ್ ಬಾಸ್ ಹೊಸ ಸೀಸನ್‌ಗೆ ಹೋಗುವ ಚಾನ್ಸ್‌.!

Bigg Boss contestants: ಬಿಗ್ ಬಾಸ್ ಸ್ಪರ್ಧಿಗಳ ಪಟ್ಟಿ ವೈರಲ್ ಆಗಿದೆ. ಹಿಂದಿನ ಸೀಸನ್‌ಗಳಂತೆ ಈ ಬಾರಿಯೂ ವಿಭಿನ್ನ ಕಲ್ಪನೆ ಮತ್ತು ವಿಶೇಷವಾದ ಬಿಗ್ ಬಾಸ್ ಸೆಟ್‌ ಇರಲಿದೆ.

ಕನ್ನಡಿಗರ ವಿರುದ್ಧವೇ ಮಾತನಾಡಿದ್ದ ಈ ಚೆಲುವೆಗೆ ಸಿಕ್ತು ಬಿಗ್ ಬಾಸ್ ಹೊಸ ಸೀಸನ್‌ಗೆ ಹೋಗುವ ಚಾನ್ಸ್‌.!

Bigg Boss Contestant List Leaked : ಬಿಗ್ ಬಾಸ್ ಹೊಸ ಸೀಸನ್‌ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಕಿರುತೆರೆಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಎಂದು ಪರಿಗಣಿಸಲಾಗಿದೆ. ಈ ಬಾರಿ ಬಿಗ್ ಬಾಸ್ ಹಿಂದಿ ಸೀಸನ್ 19 ಪ್ರಸಾರವಾಗಲಿದ್ದು, ಇದರ ಬಗ್ಗೆ ಕಳೆದ ಕೆಲವು ಸಮಯದಿಂದ ಚರ್ಚೆಗಳು ನಡೆಯುತ್ತಿವೆ.

ಬಿಗ್ ಬಾಸ್ 19 ಗೆ ಸೇರುವ ಸ್ಪರ್ಧಿಗಳ ಬಗ್ಗೆ ಪ್ರತಿದಿನ ಹೊಸ ಹೆಸರುಗಳು ಹೊರಬರುತ್ತಿವೆ. ಈಗ ಈ ವಿವಾದಾತ್ಮಕ ಚೆಲುವೆ ಬಿಗ್ ಬಾಸ್ ಸೀಸನ್ 19 ಗೆ ಪ್ರವೇಶಿಸಲು ಸಿದ್ಧವಾಗಿದ್ದಾರೆ ಎಂಬ ಸುದ್ದಿ ವೈರಲ್‌ ಆಗಿದೆ.  

ವರದಿಗಳ ಪ್ರಕಾರ, ದಿ ರೆಬೆಲ್ ಕಿಡ್ ಅಂದರೆ ಅಪೂರ್ವ ಮುಖಿಜಾ ಸಲ್ಮಾನ್ ಖಾನ್ ಅವರ ರಿಯಾಲಿಟಿ ಶೋ ಬಿಗ್ ಬಾಸ್ 19 ಮನೆಗೆ ಹೋಗಬಹುದು ಎಂದು ಹೇಳಲಾಗುತ್ತಿದೆ. ಇನ್ನೂ ಅಧಿಕೃತ ದೃಢೀಕರಣವನ್ನು  ಆಗಿಲ್ಲ. ಅಪೂರ್ವ ಅವರ ಹೆಸರು ಹಿಂದೆ ಸಾಕಷ್ಟು ವಿವಾದಗಳಲ್ಲಿತ್ತು. ಇದರಿಂದಾಗಿ ಅವರು ಬಿಗ್ ಬಾಸ್ ಸೀಸನ್ 19 ಗೆ ಸೇರುವ ಸಾಧ್ಯತೆಗಳು ತುಂಬಾ ಹೆಚ್ಚಿವೆ.

ಬಿಗ್ ಬಾಸ್ 19 ಕ್ಕಿಂತ ಮೊದಲು, ಅಪೂರ್ವ ಮುಖಿಜಾ ಚಲನಚಿತ್ರ ನಿರ್ಮಾಪಕ ಕರಣ್ ಜೋಹರ್ ಅವರ ಇತ್ತೀಚಿನ ರಿಯಾಲಿಟಿ OTT ಶೋ ದಿ ಟ್ರೇಟರ್ಸ್‌ನಲ್ಲಿ ಕಾಣಿಸಿಕೊಂಡಿದ್ದರು. 

ಇದನ್ನೂ ಓದಿ: ರಾಜಮೌಳಿ ಕುಟುಂಬದಲ್ಲಿ ಘೋರ ದುರಂತ.. ಸಿನಿರಂಗಕ್ಕೆ ಬಿಗ್‌ ಶಾಕ್‌!

ವಾಸ್ತವವಾಗಿ ಅಪೂರ್ವ ಮುಖಿಜಾ ಸೋಷಿಯಲ್‌ ಮೀಡಿಯಾ ಇನ್‌ಫ್ಲುಯೆನ್ಸರ್‌ ಆಗಿದ್ದು, ಅವರು ತಮ್ಮ ನೇರ ಮಾತಿನ ಶೈಲಿಗೆ ಹೆಸರುವಾಸಿಯಾಗಿದ್ದಾರೆ. ಸ್ಟ್ಯಾಂಡ್ ಅಪ್ ಹಾಸ್ಯನಟ ಸಮಯ್ ರೈನಾ ಅವರ ಇಂಡಿಯಾಸ್ ಗಾಟ್ ಲ್ಯಾಟೆಂಟ್ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಾಗ ಹೆಚ್ಚು ಚರ್ಚೆಗೆ ಒಳಗಾಯಿತು. ಈ ಸಮಯದಲ್ಲಿ, ಅವರು ಅಶ್ಲೀಲ ಪದಗಳನ್ನು ಬಳಸಿದರು, ಇದರಿಂದಾಗಿ ಅಪೂರ್ವ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಅಪೂರ್ವ ಮುಖಿಜಾ ಉತ್ತರ ಭಾರತದಲ್ಲಿ ದಿ ರೆಬಲ್ ಕಿಡ್ ಎಂದೇ ಖ್ಯಾತಿ ಪಡೆದಿದ್ದಾರೆ. ಅಪೂರ್ವ ಮುಖಿಜಾ ಹಿಂದೊಮ್ಮೆ "ಬದುಕಲು ಬೆಂಗಳೂರು ಯೋಗ್ಯವಾದ ಊರಲ್ಲ" ಎಂದು ಹೇಳಿದ್ದರು. ಅಪೂರ್ವ ಮುಖಿಜಾ ಬೆಂಗಳೂರಿನಲ್ಲಿ ಒಂದಿಷ್ಟು ಕಾಲ ವಾಸವಿದ್ದರು. ಬೆಂಗಳೂರಿನಲ್ಲಿ ಡೆಲ್ ಕಂಪನಿಯಲ್ಲಿ ಅಪೂರ್ವ ಮುಖಿಜಾ ಕೆಲಸ ಮಾಡುತ್ತಿದ್ದರು. 

"ಬೆಂಗಳೂರಿಗೆ ಆತ್ಮ ಇಲ್ಲ.. ಕನ್ನಡ ಗೊತ್ತಿಲ್ಲ ಎಂದು ಆಟೋ ಚಾಲಕ ನನ್ನ ಜೊತೆ ಮಾತನಾಡಲಿಲ್ಲ. ಬೆಂಗಳೂರನ್ನು ನಾನು ಯಾವತ್ತು ಇಷ್ಟ ಪಡುವುದಿಲ್ಲ" ಎಂದು ಅಪೂರ್ವ ಮುಖಿಜಾ ಹೇಳಿಕೆ ನೀಡಿದ್ದರು. ಅಪೂರ್ವ ಮುಖಿಜಾ ಅವರ ಈ ಹೇಳಿಕೆ ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿತ್ತು.

ಈ ಅಪೂರ್ವ ಮುಖಿಜಾ ಈ ಬಾರಿಯ ಹಿಂದಿ ಬಿಗ್ ಬಾಸ್‌ ಗೆ ಹೋಗಲಿದ್ದಾರೆ ಎನ್ನುವ ವದಂತಿ ಶುರುವಾಗಿದೆ. ಸಂದರ್ಶನದಲ್ಲಿ ಮಾತನಾಡಿರುವ ಅಪೂರ್ವ ಮುಖಿಜಾ, ಬಿಗ್ ಬಾಸ್‌ದಿಂದ ಆಫರ್ ಬಂದಿದ್ದು ನಿಜಾ ಆದರೆ ಆ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಸುಲಭದ ಮಾತಲ್ಲ ತುಂಬಾ ಸ್ಟ್ರಾಂಗ್ ಆಗಿರಬೇಕು ಎಂದು ಹೇಳಿದ್ದಾರೆ. ಬಂದಿರುವ ಅವಕಾಶವನ್ನು ಕೂಡ ನಿರಾಕರಿಸಿಲ್ಲ. ನಾನು ತುಂಬಾ ಯೋಚನೆ ಮಾಡುತ್ತೇನೆ. ಹಣ ಎಲ್ಲದಕ್ಕಿಂತ ಮುಖ್ಯ. ಹೆಚ್ಚಿನ ಹಣ ನನಗೆ ಕೊಡಲು ಸಿದ್ಧರಿದ್ದರೆ ನಾನು ಭಾಗವಹಿಸಲು ಸಿದ್ದ ಎಂದು ಹೇಳಿದ್ದಾರೆ.

ಇದನ್ನೂ ಓದಿ: ದೇವಸ್ಥಾನದಲ್ಲಿ ನಡೆದಿತ್ತು ಗೌಪ್ಯ ಮದುವೆ.. ಆ ವ್ಯಕ್ತಿಯ ಜೊತೆ ತಡರಾತ್ರಿ 10:30 ರಲ್ಲಿ ಸಪ್ತಪದಿ ತುಳಿದಿದ್ದರು ನಟಿ ರೇಖಾ  

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

Read More