Home> Entertainment
Advertisement

ಕತ್ರಿನಾ ಕೈಫ್ ಹೆಚ್ಚಿನ ಸಮಯ ಕಳೆದದ್ದು ಪತಿ ವಿಕ್ಕಿ ಕೌಶಾಲ್ ಜೊತೆಗಲ್ಲ...ಬದಲಾಗಿ ಈ ವ್ಯಕ್ತಿ ಜೊತೆ..! ಕೊನೆಗೂ ಮೌನ ಮುರಿದ ಏಕ್ತಾ ಟೈಗರ್ ಬೆಡಗಿ..!

ಬಾಲಿವುಡ್ ನಟಿ ಕತ್ರಿನಾ ಕೈಫ್ ತಮ್ಮ ಸಹಾಯಕ ಅಶೋಕ್ ಶರ್ಮಾ ಜೊತೆ 20 ವರ್ಷಗಳ ಬಂಧವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. “ನಾನು ಅತಿ ಹೆಚ್ಚು ಸಮಯ ಕಳೆದಿರುವ ವ್ಯಕ್ತಿ ಅಶೋಕ್,” ಎಂದು ಅವರು ಬರೆದಿದ್ದಾರೆ.

ಕತ್ರಿನಾ ಕೈಫ್ ಹೆಚ್ಚಿನ ಸಮಯ ಕಳೆದದ್ದು ಪತಿ ವಿಕ್ಕಿ ಕೌಶಾಲ್ ಜೊತೆಗಲ್ಲ...ಬದಲಾಗಿ ಈ ವ್ಯಕ್ತಿ ಜೊತೆ..! ಕೊನೆಗೂ ಮೌನ ಮುರಿದ ಏಕ್ತಾ ಟೈಗರ್ ಬೆಡಗಿ..!

ಬಾಲಿವುಡ್‌ನ ಖ್ಯಾತ ನಟಿ ಕತ್ರಿನಾ ಕೈಫ್ ತಮ್ಮ ನಟನಾ ಶೈಲಿಯ ಜೊತೆಗೆ ತಮ್ಮ ಆತ್ಮೀಯ ಸಂಬಂಧಗಳಿಂದಲೂ ಸದಾ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಒಂದು ಭಾವುಕ ಪೋಸ್ಟ್‌ನಲ್ಲಿ, ಕತ್ರಿನಾ ತಮ್ಮ ವೈಯಕ್ತಿಕ ಸಹಾಯಕ ಅಶೋಕ್ ಶರ್ಮಾ ಅವರೊಂದಿಗಿನ 20 ವರ್ಷಗಳ ಸುದೀರ್ಘ ಒಡನಾಟವನ್ನು ಆತ್ಮೀಯವಾಗಿ ನೆನಪಿಸಿಕೊಂಡಿದ್ದಾರೆ.

ಕತ್ರಿನಾ ತಮ್ಮ ಪೋಸ್ಟ್‌ನಲ್ಲಿ  “ಇಂದಿಗೆ 20 ವರ್ಷಗಳು, ಶ್ರೀ ಅಶೋಕ್ ಶರ್ಮಾ. ಕಳೆದ ಇಪ್ಪತ್ತು ವರ್ಷಗಳಲ್ಲಿ ನಾನು ಅತಿ ಹೆಚ್ಚು ಸಮಯವನ್ನು ಕಳೆದಿರುವ ವ್ಯಕ್ತಿ.” ಎಂದು ಬರೆದುಕೊಂಡಿದ್ದಾರೆ. ಇನ್ನು ಮುಂದುವರೆದು ಒಟ್ಟಿಗೆ ನಗುವಿನಿಂದ ಹಿಡಿದು, ಪ್ರೇರಣೆ, ಕಾಫಿ ಕುಡಿಯುವ ವಿಷಯದಲ್ಲಿ ಜಗಳವಾಡುವುದರಿಂದ ಹಿಡಿದು, ಕೊನೆಗೆ ತಾನು ಏನು ಬಯಸುತ್ತೇನೆ ಎಂಬುದನ್ನು ಒಪ್ಪಿಸುವವರೆಗೆ ಎನ್ನುವುದನ್ನು ಅವರು ಉಲ್ಲೇಖಿಸಿದ್ದಾರೆ. ಇದನ್ನು ನೋಡಿದಾಗ ಈ ಎಲ್ಲ ಕ್ಷಣಗಳು ಇವರಿಬ್ಬರ ಒಡನಾಟದ ಸೊಗಸನ್ನು ತೋರಿಸುತ್ತವೆ.

 
 
 
 

 
 
 
 
 
 
 
 
 
 
 

A post shared by Katrina Kaif (@katrinakaif)

ಇದನ್ನೂ ಓದಿ : ವಾರದ ಯಾವ ದಿನ ಚಿನ್ನದ ಬೆಲೆ ಕಡಿಮೆ ಇರುತ್ತೆ? ಆಭರಣ ಪ್ರಿಯರಿಗೆ ಇಲ್ಲಿದೆ ಒಂದು ಮಹತ್ವದ ಮಾಹಿತಿ !

ಅಶೋಕ್‌ರ ಕಣ್ಣೀರು, ಕತ್ರಿನಾ ಜೊತೆಗಿನ ಬಂಧ:

ಕತ್ರಿನಾ ತಮ್ಮ ಪೋಸ್ಟ್‌ನಲ್ಲಿ ಒಂದು ಗಮನಾರ್ಹ ಘಟನೆಯನ್ನು ಉಲ್ಲೇಖಿಸಿದ್ದಾರೆ. ಸೆಟ್‌ನಲ್ಲಿ ಯಾರಾದರೂ ತಮ್ಮನ್ನು ಕಾಡಿದಾಗ, ಅಶೋಕ್ ಶರ್ಮಾ ಕಣ್ಣೀರಿಟ್ಟಿದ್ದರಂತೆ. “ನಾವಿಬ್ಬರೂ ಎಲ್ಲ ರೀತಿಯ ಸಂದರ್ಭಗಳನ್ನು ಒಟ್ಟಿಗೆ ದಾಟಿದ್ದೇವೆ. ಅವರ ಸ್ನೇಹಪರ ಮುಖ ಯಾವಾಗಲೂ ನನ್ನೊಂದಿಗಿತ್ತು,” ಎಂದು ಕತ್ರಿನಾ ಭಾವುಕವಾಗಿ ಬರೆದಿದ್ದಾರೆ. ಅಶೋಕ್ ತಮ್ಮ ಬಯಕೆಗಳನ್ನು ಮಾತಿನ ಮೊದಲೇ ತಿಳಿದುಕೊಳ್ಳುವ ಸ್ಥಿರ ವ್ಯಕ್ತಿಯಾಗಿದ್ದಾರೆ ಎಂದೂ, ಯಾವಾಗಲೂ ತಮ್ಮ ಮೇಲೆ ಕಾಳಜಿಯ ಕಣ್ಣಿಟ್ಟಿರುತ್ತಾರೆ ಎಂದೂ ಕತ್ರಿನಾ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ : Inspiring Story of DMart : ಸಾಮಾನ್ಯ ವ್ಯಕ್ತಿಯೊಬ್ಬ ಭಾರತದ ಚಿಲ್ಲರೆ ಮಾರುಕಟ್ಟೆಯ ದಿಗ್ಗಜನಾದ ರೋಚಕ ಕಥೆ...!

ಕತ್ರಿನಾ ತಮ್ಮ ಪೋಸ್ಟ್‌ನಲ್ಲಿ ಮುಂದಿನ 20 ವರ್ಷಗಳ ಕಾಲವೂ ಈ ಒಡನಾಟ ಮುಂದುವರಿಯಲಿ ಎಂದು ಆಶಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆಯಾಗಿ, ಅಶೋಕ್ ಶರ್ಮಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಕತ್ರಿನಾ ಅವರ ಫೋಟೋವನ್ನು ಮರು-ಹಂಚಿಕೊಂಡು, “ನಾವು ಇನ್ನೊಂದು 20 ವರ್ಷಗಳನ್ನು ಒಟ್ಟಿಗೆ ಕಳೆಯಬೇಕು,” ಎಂದು ಭಾವುಕವಾಗಿ ಬರೆದಿದ್ದಾರೆ. ಕತ್ರಿನಾ ಕೈಫ್‌ರ ಈ ಪೋಸ್ಟ್ ಅವರ ಸರಳತೆಯನ್ನು ಮತ್ತು ತಮ್ಮ ಜೊತೆಗಿರುವವರ ಬಗ್ಗೆ ಅವರಿಗಿರುವ ಕಾಳಜಿಯನ್ನು ತೋರಿಸುತ್ತದೆ. ಈ ಆತ್ಮೀಯ ಕ್ಷಣವನ್ನು ಅಭಿಮಾನಿಗಳೂ ಸಾಮಾಜಿಕ ಜಾಲತಾಣಗಳಲ್ಲಿ ಶ್ಲಾಘಿಸಿದ್ದಾರೆ, ಮತ್ತು ಕತ್ರಿನಾ-ಅಶೋಕ್‌ರ ಈ ಸುಂದರ ಬಂಧವನ್ನು ಮೆಚ್ಚಿಕೊಂಡಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

 

 

 

Read More