Home> Entertainment
Advertisement

ಪ್ರಭುದೇವ ಅಂತಹ ವ್ಯಕ್ತಿನಾ..ಯಪ್ಪೋ..!! 14 ವರ್ಷಗಳ ನಂತರ ಶಾಕಿಂಗ್‌ ವಿಚಾರ ಬಿಚ್ಚಿಟ್ಟ ನಟನ ಮಾಜಿ ಪತ್ನಿ

Prabhudeva ex wife : 14 ವರ್ಷಗಳ ವಿಚ್ಛೇದನದ ನಂತರ, ಪ್ರಭುದೇವ ಅವರ ಮಾಜಿ ಪತ್ನಿ ಕೊನೆಗೂ ತಮ್ಮ ಸಂಬಂಧದ ಬಗ್ಗೆ ಮೌನ ಮುರಿದಿದ್ದಾರೆ. ನಟಿ ನಯನತಾರಾ ಅವರೊಂದಿಗಿನ ಪ್ರೇಮ ಸಂಬಂಧದಿಂದಾಗಿ ಪ್ರಭುದೇವ ಮತ್ತು ರಾಮಲತಾ ವಿಚ್ಛೇದನ ಪಡೆದರು ಎಂಬ ವದಂತಿಗಳು ಹಬ್ಬಿದ್ದವು... ಇದೀಗ ರಾಮಲತಾ ಶಾಕಿಂಗ್‌ ವಿಚಾರ ಬಿಚ್ಚಿಟ್ಟಿದ್ದಾರೆ..

ಪ್ರಭುದೇವ ಅಂತಹ ವ್ಯಕ್ತಿನಾ..ಯಪ್ಪೋ..!! 14 ವರ್ಷಗಳ ನಂತರ ಶಾಕಿಂಗ್‌ ವಿಚಾರ ಬಿಚ್ಚಿಟ್ಟ ನಟನ ಮಾಜಿ ಪತ್ನಿ

Ramalatha on Prabhudeva : ಪ್ರಭುದೇವ ಸಿನಿ ಜಗತ್ತಿನ ಬಹು ದೊಡ್ಡ ತಾರೆ. ಒಬ್ಬ ಉತ್ತಮ ಡಾನ್ಸರ್‌ ಮತ್ತು ನೃತ್ಯ ಸಂಯೋಜಕರಾಗಿ ಸಾಕಷ್ಟು ಹೆಸರು ಮಾಡಿದ್ದಾರೆ. ಜೊತೆಗೆ, ಚಲನಚಿತ್ರ ನಿರ್ದೇಶಕರಾಗಿಯೂ ಹಲವು ಸಿನಿಮಾಗೆ ಆಕ್ಷನ್‌ ಕಟ್‌ ಹೇಳಿದ್ದಾರೆ.. ಇವುಗಳ ಹೊರತಾಗಿಯೂ ತಮ್ಮ ಖಾಸಗಿ ಜೀವನದ ಕಾರಣದಿಂದಾಗಿ ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ. 

ಅಂದಹಾಗೆ ಪ್ರಭುದೇವ ಅವರು 1995 ರಲ್ಲಿ ರಾಮಲತಾ ಅವರನ್ನು ವಿವಾಹವಾದರು. ಆದರೆ ಅವರ ದಾಂಪತ್ಯ ಹೆಚ್ಚು ಕಾಲ ಉಳಿಯಲಿಲ್ಲ. 2011 ರಲ್ಲಿ ಇಬ್ಬರೂ ಬೇರ್ಪಟ್ಟರು. ವಿಚ್ಛೇದನ ಪಡೆದು 14 ವರ್ಷಗಳಾಗಿವೆ. ಇದೀಗ ಹಲವು ವರ್ಷಗಳ ನಂತರ ಮೊದಲ ಬಾರಿಗೆ ಪ್ರಭುದೇವ ಅವರ ಮಾಜಿ ಪತ್ನಿ ವಿಚ್ಛೇದನದ ಬಗ್ಗೆ ಮೌನ ಮುರಿದಿದ್ದಾರೆ. 

ಇದನ್ನೂ ಓದಿ:ಆ ಮಹಿಳಾ ಅಘೋರಿ ನನ್ನ ಜೊತೆ S*X..! "ಲೇಡಿ ಅಘೋರಿ" ರಹಸ್ಯ ಬಯಲು ಮಾಡಿದ ಲವರ್‌

ತಮಿಳು ಯೂಟ್ಯೂಬ್ ಚಾನೆಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ, ರಾಮಲತಾ ತಮ್ಮ ಭಾವನೆಗಳನ್ನು ಮುಕ್ತವಾಗಿ ವ್ಯಕ್ತಪಡಿಸಿದ್ದಾರೆ. ಇಂದಿಗೂ ಪ್ರಭುದೇವ ತಮ್ಮ ಮಕ್ಕಳನ್ನು ತುಂಬಾ ಪ್ರೀತಿಸುತ್ತಾರೆ ಎಂದು ಹೇಳಿಕೊಂಡಿದ್ದಾರೆ. ಅವರಿಗೆ ಮಕ್ಕಳ ಮೇಲಿನ ಪ್ರೀತಿ ಇನ್ನೂ ಬದಲಾಗಿಲ್ಲ ಎಂದು ಹೇಳಿದರು.  

ಪ್ರಭುದೇವ ಅವರು ಮಕ್ಕಳೊಂದಿಗೆ ತುಂಬಾ ಬಾಂಧವ್ಯ ಹೊಂದಿದ್ದಾರೆ. ಯಾವುದೇ ಪರಿಸ್ಥಿತಿಯಲ್ಲಿಯೂ ಅವರು ಪರಸ್ಪರ ಮಾತನಾಡದೆ ಒಂದು ದಿನವೂ ಕಳೆಯುತ್ತಿರಲಿಲ್ಲ. ವಿಚ್ಛೇದನದ ನಂತರ ಪ್ರಭುದೇವ ನನಗೆ ತುಂಬಾ ಬೆಂಬಲ ನೀಡಿದರು. ನಮ್ಮ ಮಕ್ಕಳನ್ನೂ ಸಹ ಬೆಂಬಲಿಸಿದರು ಎಂದರು.

ಇದನ್ನೂ ಓದಿ:ಬೀದಿಗೆ ಬಂತು "ಕಾಟೇರ" ಚಿತ್ರದ ವಿಲನ್‌ ಬದುಕು..! ಸ್ಟಾರ್‌ ಹೀರೋ ಆಗಿ ಮೆರೆದಿದ್ದ ನಟನ ಈ ಸ್ಥಿತಿಗೆ ಕಾರಣವೇನು..?

ಇಂದಿಗೂ ಅವರು ತಂದೆಯಾಗಿ ತಮ್ಮ ಎಲ್ಲಾ ಜವಾಬ್ದಾರಿಗಳು ಮತ್ತು ಕರ್ತವ್ಯಗಳನ್ನು ಪೂರೈಸುತ್ತಾರೆ. ನಮ್ಮ ಮಕ್ಕಳ ಭವಿಷ್ಯದ ಬಗ್ಗೆ ನಾವು ಒಟ್ಟಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ. ವಿಚ್ಛೇದನದ ನಂತರವೂ ಅವರು ಯಾವಾಗಲೂ ನನ್ನನ್ನು ಗೌರವದಿಂದ ನಡೆಸಿಕೊಳ್ಳುತ್ತಾರೆ. ಎಂದಿಗೂ ನನ್ನ ಬಗ್ಗೆ ನಕಾರಾತ್ಮಕವಾಗಿ ಮಾತನಾಡಿಲ್ಲ ಎಂದು ರಾಮಲತಾ ತಿಳಿಸಿದರು.

ದಕ್ಷಿಣ ನಟಿ ನಯನತಾರಾ ಜೊತೆ ಪ್ರಭುದೇವ ಸಂಬಂಧ ಹೊಂದಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ನಯನತಾರಾ ಕಾರಣದಿಂದಾಗಿ ಅವರ ಮದುವೆ ಮುರಿದುಬಿತ್ತು ಎಂದು ಹೇಳಲಾಗುತ್ತದೆ. ಪ್ರಭುದೇವ ಮತ್ತು ನಯನತಾರಾ ಒಂದು ಕಾಲದಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದರು ಎಂಬ ವದಂತಿಗಳು ಹಬ್ಬಿದ್ದವು.. ಆದರೆ ಈ ಕುರಿತು ಸ್ಪಷ್ಟತೆ ಇಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ

Read More