IT ಕೆಲಸ ಬಿಟ್ಟು ರಿಯಾಲಿಟಿ ಶೋಗೆ ಬಂದ ಗಗನಾ... ಈಕೆ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತಾ?

Bhavishya Shetty
Jul 06, 2025

Bhavishya Shetty

ಗಗನಾ ಭಾರಿ
ಮಹಾನಟಿ ರಿಯಾಲಿಟಿ ಶೋ ಮೂಲಕ ಖ್ಯಾತಿ ಪಡೆದು, ಆ ಬಳಿಕ ಕನ್ನಡದ ಅನೇಕ ಇತರ ಕಾರ್ಯಕ್ರಮಗಳಲ್ಲಿ ಮಿಂಚುತ್ತಿರುವ ಪ್ರತಿಭೆ ಗಗನಾ ಭಾರಿ.

ಪ್ರತಿಭಾನ್ವಿತೆ
ಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್‌, ಮಹಾನಟಿ ಮತ್ತು ಭರ್ಜರಿ ಬ್ಯಾಚುಲರ್ಸ್‌ ರಿಯಾಲಿಟಿ ಶೋಗಳಲ್ಲಿ ಸರ್ಧಿಸಿದ್ದಾರೆ ಗಗನಾ.

ಓದಿದ್ದು...
ಮೂಲತಃ ಚಿತ್ರದುರ್ಗದವರಾದ ಗಗನಾ, ಓದಿದ್ದೆಲ್ಲಾ ಬಳ್ಳಾರಿಯಲ್ಲಿ.

ಐಟಿ ಕಂಪನಿ
ಶಿಕ್ಷಣ ಮುಗಿಸಿದ ಬಳಿಕ ಐಟಿ ಕಂಪನಿಯಲ್ಲಿ ದುಡಿಯುತ್ತಿದ್ದ ಗಗನಾ, ನಟನೆ ಮೇಲಿನ ಆಸಕ್ತಿಯಿಂದ ಮಹಾನಟಿ ಆಡೀಷನ್‌ ನೀಡಿದ್ದರು.

ಆಡಿಷನ್‌
ಆಡಿಷನ್‌ಗೆ ಹೋಗುತ್ತಿದ್ದ ಬಗ್ಗೆ ಅಪ್ಪ ಅಮ್ಮನಿಗೂ ಹೇಳಿರಲಿಲ್ಲವಂತೆ ಗಗನಾ. ಏಕೆಂದರೆ ಅವರು ವಿಲೇಜ್‌ ಪೇರೆಂಟ್ಸ್‌, ತುಂಬಾ ಭಯ ಇದೆ ಅವರಿಗೆ. ಮೆಗಾ ಅಡಿಷನ್‌ಗೆ ಹೋಗುವಾಗ ಹೇಳಿದ್ದೆ ಎಂದು ಸ್ವತಃ ಅವರೇ ಹೇಳಿದ್ದಾರೆ.

ಸಂಭಾವನೆ
ಇನ್ನು ರಿಯಾಲಿಟಿ ಶೋಗೆ ಬಂದಾಗ ಗಗನಾ ಅವರಿಗೆ ಹತ್ತು ಸಾವಿರ ರುಪಾಯಿ ಸಂಭಾವನೆ ಕೊಟ್ಟಿದ್ದರು ಎಂದು ಬಹಿರಂಗಪಡಿಸಿದ್ದಾರೆ.

Read Next Story