Home> Health
Advertisement

ಬೋಳುತಲೆ ಸಮಸ್ಯೆಗೆ ಹೇರ್‌ ಟ್ರಾನ್ಸ್ಫಾರ್ಮೇಷನ್ ಮಾಡಿಸುವ ಮುನ್ನ ಎಚ್ಚರ..! ಮೊದಲು ಇದರ ಬಗ್ಗೆ ತಿಳಿದುಕೊಳ್ಳಿ..!

ಹೇರ್ಫಾಲ್‌ ಮತ್ತು ಬೋಳುತಲೆ ಸಮಸ್ಯೆಗೆ ಹೇರ್‌ ಟ್ರಾನ್ಸ್ಫಾರ್ಮೇಷನ್ ಮಾಡಿಸುವ ಮುನ್ನ ಅಥವಾ ನಂತರ ಕೆಲವು ಪ್ರಮುಖ ಅಂಶಗಳ ಬಗ್ಗೆ ತಿಳಿದುಕೊಳ್ಳುವುದು ಮುಖ್ಯ.
 

ಬೋಳುತಲೆ ಸಮಸ್ಯೆಗೆ ಹೇರ್‌ ಟ್ರಾನ್ಸ್ಫಾರ್ಮೇಷನ್ ಮಾಡಿಸುವ ಮುನ್ನ ಎಚ್ಚರ..! ಮೊದಲು ಇದರ ಬಗ್ಗೆ ತಿಳಿದುಕೊಳ್ಳಿ..!

Hair transplant side effects: ಹೇರ್‌ ಟ್ರಾನ್ಸ್ಫಾರ್ಮೇಷನ್ ಮಾಡಿಸಿಕೊಳ್ಳುವುದು ಹೇರ್ ಫಾಲ್‌ ಗೆ ಒಳ್ಳೆಯ ಮತ್ತು ಪರಿಣಾಮಕಾರಿ  ಪರಿಹಾರ ಆದರೆ ಇದು ಎಲ್ಲರಿಗೂ ಅನ್ವಯಿಸುವುದಿಲ್ಲ. ಕೂದಲು ಕಸಿ ಮಾಡಿಸಿಕೊಳ್ಳುವ ಮೊದಲು ನಿಮಗೆ ಈ ಪ್ರಮುಖ ವಿಷಯಗಳ ಬಗ್ಗೆ ತಿಳುವಳಿಕೆ ಇರಲಿ.

ವಿಪರೀತ ಕೂದಲು ಉದುರುವಿಕೆಯಿಂದ ಉಂಟಾದ ಬೋಳುತಲೆ ಸಮಸ್ಯೆಯನ್ನು ನಿವಾರಿಸಿಕೊಳ್ಳಲು ಜನ ಕೂದಲು ಕಸಿಮಾಡಿಸಿಕೊಳ್ಳಲು ಮುಂದಾಗುತ್ತಾರೆ. ಇದು ಶಾಶ್ವತ ಪರಿಹಾರವಾದ್ದರಿಂದ ಎಲ್ಲರೂ ಇದರ ಮೇಲೆ ಅವಲಂಬಿತರಾಗಿರುತ್ತಾರೆ, ಆದರೆ ಹೇರ್‌ ಟ್ರಾನ್ಸ್ಫಾರ್ಮೇಷನ್ ಮಾಡಿಸಿಕೊಳ್ಳುವ ಮುನ್ನ ಕೆಲವು ಆರೋಗ್ಯ ಸಲಹೆಗಳನ್ನು ಪಾಲಿಸುವುದು ಮುಖ್ಯ.

ಹೇರ್‌ ಟ್ರಾನ್ಸ್ಫಾರ್ಮೇಷನ್:

ಹೇರ್‌ ಟ್ರಾನ್ಸ್ಫಾರ್ಮೇಷನ್ ಎಂದರೆ  ಭವಿಷ್ಯದಲ್ಲಿ ಮುಂದೆ ಕೂದಲು ಉದುರುವುದನ್ನು ತಡೆಗಟ್ಟಲು ಅಥವಾ ಕ್ಲಿನಿಕಲ್ ಪರಿಣತಿಯೊಂದಿಗೆ  ಹೇರ್‌ ಫಾಲ್‌ ತಡೆಯಲು ವೈದ್ಯಕೀಯವಾಗಿ ಕೈಗೊಳ್ಳುವ ಕಾಸ್ಮೆಟಿಕ್ ವಿಧಾನವಾಗಿದೆ.ಮೊದಲೆಲ್ಲ ಬರೀ ಸೆಲೆಬ್ರಿಟಿಗಳಷ್ಟೇ ಈ  ರೀತಿ ಕೂದಲು ಕಸಿಮಾಡಿಸಿಕೊಳ್ಳುತ್ತಿದ್ದರು, ಏಕೆಂದರೆ ಇದು ಆವಾಗ ಬಹಳ ಖರ್ಚಿನ ಚಿಕಿತ್ಸೆಯಾಗಿತ್ತು ಆದರೆ ಈಗ ಪ್ರತಿಯೊಬ್ಬರೂ ಈ ವಿಧಾನದ ಉಪಯೋಗ ತೆಗೆದುಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: ಸರ್ಕಾರಿ ನೌಕರರಿಗೆ ಭರ್ಜರಿ ಗುಡ್‌ ನ್ಯೂಸ್‌: ಜುಲೈನಲ್ಲಿ ಶೇ.4ರಷ್ಟು DA ಹೆಚ್ಚಳ, ಸಂಪೂರ್ಣ ಮಾಹಿತಿ ಇಲ್ಲಿದೆ

ಹೇರ್‌ ಟ್ರಾನ್ಸ್ಫಾರ್ಮೇಷನ್ ಮಾಡಿಸುವ ಮೊದಲು ತೆಗೆದುಕೊಳ್ಳಬೇಕಾದ ಸುರಕ್ಷಿತ ಸಲಹೆಗಳು:

ತಜ್ಞರ ಸಲಹೆ ಪಡೆಯಿರಿ: 

ಈ ಚಿಕಿತ್ಸೆಗು ಮೊದಲು ನಿಮಗೆ ಯಾವ ತರಹದ ಕೂದಲು (ತೈಲಯುಕ್ತ, ಒಣ, ಸೂಕ್ಷ್ಮ, ದಪ್ಪ) ಇದೆ ಎಂಬುದರ ಟೆಸ್ಟ್‌ ಮಾಡಿಸಿ ಅದರ  ಆಧಾರದ ಮೇಲೆ ತಜ್ಞರಿಂದ ಸಮಗ್ರ ಸಲಹೆ ಪಡೆಯುವುದು ಮುಖ್ಯ. ತಜ್ಞರ ಸಲಹೆಗೆ ಆಧಾರವಾಗಿ  ಕೂದಲು ಕಸಿ ಮಾಡಿಸಿಕೊಳ್ಳುವುದು ಒಳ್ಳೆಯದು. ಇದರಿಂದ ನೀವು ಪರಿಣಾಮಕಾರಿ ಪಲಿತಾಂಶಗಳನ್ನು ಕಾಣಬಹುದಾಗಿದೆ.

ಅಂಗೀಕೃತ ಮತ್ತು ಅನುಭವ ಹೊಂದಿದ ತಜ್ಞರನ್ನು ಆಯ್ಕೆಮಾಡಿ: ಹೇರ್‌ ಟ್ರಾನ್ಸ್ಫಾರ್ಮೇಷನ್  ಮಾಡಿಸುವಾಗ ಸರಿಯಾದ ತಂತ್ರಜ್ಞಾನ, ಅನುಭವ ಮತ್ತು ಗುಣಮಟ್ಟದ ಉತ್ಪನ್ನಗಳ ಬಳಕೆ ಇರುವ  ಕ್ಲಿನಿಕ್‌ನ್ನು ಆರಿಸಿ. ಕ್ವಾಲಿಟಿ ಕಡಿಮೆ ಇರುವ ಸ್ಥಳಗಳಲ್ಲಿ ಮಾಡಿಸಿದರೆ ಕೂದಲು ಹಾಳಾಗುವ ಸಾಧ್ಯತೆ ಇದೆ.

ಪೂರ್ವ ಪರೀಕ್ಷೆ ಮಾಡಿಸಿ: ಯಾವುದೇ ಕ್ರೀಮ್ ಅಥವಾ ಬಣ್ಣವನ್ನೂ ತಲೆಯ ಮೇಲೆ ಹಚ್ಚುವ ಮೊದಲು  ಪ್ಯಾಚ್‌ ಟೆಸ್ಟ್‌  (patch test) ಮಾಡಿಸಿ ಇದರಿಂದ ಯಾವುದೇ ರೀತಿಯ ಅಲರ್ಜಿ ಅಥವಾ ಚರ್ಮದ ಸೊಂಕನ್ನು ತಡೆಯಬಹುದು. 

ಕೂದಲಿಗೆ ಬಳಸುವ ರಸಾಯನಿಕಗಳ ಬಗ್ಗೆ ಸೂಕ್ತ ಮಾಹಿತಿ:

ನೀವು ಬಳಸುವ ಯಾವ ಉತ್ಪನ್ನಗಳಲ್ಲಿ ಯಾವ ರಾಸಾಯನಿಕಗಳಿವೆ, ಅವುಗಳು ನಿಮ್ಮ ಕೂದಲು ಅಥವಾ ತ್ವಚೆಗೆ ಏನು ಪ್ರಭಾವ ಬೀರಬಹುದು ಎಂಬುದನ್ನು ತಿಳಿದುಕೊಳ್ಳಿ. ಹೆಚ್ಚಿನ ಕಠಿಣ ಕ್ರೀಮ್‌ಗಳು ಕೂದಲನ್ನು ಹಾಳು  ಮಾಡಬಹುದು ಅಥವಾ ಕೂದಲು ಉದುರಲು ಕಾರಣವಾಗಬಹುದು.

ತಕ್ಷಣದ ಫಲಿತಾಂಶ ಬಯಸಬೇಡಿ: 

ಕೆಲವು ಟ್ರಾನ್ಸ್ಫಾರ್ಮೇಷನ್‌ಗಳು ಸಮಯ ಹಿಡಿಯುತ್ತವೆ. ತಾತ್ಕಾಲಿಕ ಅಡ್ಡ ಪರಿಣಾಮಗಳನ್ನು ತಪ್ಪಿಸಲು ಹಾಗೂ ಸಹಜವಾಗಿ ಬದಲಾವಣೆಗಳಾಗಬೇಕಾದರೆ ಹೆಚ್ಚು ಸಮಯ ಹಿಡಿಯುತ್ತದೆ. 

ಚಿಕಿತ್ಸೆ ನಂತರದ ಆರೈಕೆ ಮುಖ್ಯ:

ಟ್ರಾನ್ಸ್ಫಾರ್ಮೇಷನ್ ಮಾಡಿದ ನಂತರ ನಿರಂತರ ಆರೈಕೆ ಬೇಕು — ಸರಿಯಾದ ಶಾಂಪೂ, ತೈಲ, ಕಂಡೀಷನರ್, ಹೇರ್‌ ಮಾಸ್ಕ್‌ ಇತ್ಯಾದಿಗಳನ್ನು ಬಳಸಬೇಕು. ಇಲ್ಲದಿದ್ದರೆ  ಚಿಕಿತ್ಸೆ ಫಲಿಸುವುದಿಲ್ಲ.

ಸೂಚನೆ: ಈ ಮಾಹಿತಿಯನ್ನು ಸಾಮಾನ್ಯ ಜ್ಞಾನಕ್ಕಾಗಿ ನೀಡಲಾಗಿದೆ. ಇದನ್ನು ಅಳವಡಿಸಿಕೊಳ್ಳುವ ಮೊದಲು ತಜ್ಞರನ್ನು ಸಂಪರ್ಕಿಸಿ.ಜೀ ಕನ್ನಡ ನ್ಯೂಸ್ ಇದನ್ನು ಧೃಡಿಕರಿಸುವುದಿಲ್ಲ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

 

Read More