Home> Health
Advertisement

ದಾನಿಗಳ ಮೂಲಕ IVF ನಿಂದ ಹುಟ್ಟುವ ಮಗುವಿನ ಅಪ್ಪನ ಹೆಸರು ದಾಖಲೆಗಳಲ್ಲಿ ಏನಿರುತ್ತೆ?

IVF baby father name: ಇಂಥ ಸಂದರ್ಭದಲ್ಲಿ IVF ಮೂಲಕ ಹುಟ್ಟಿದ ಮಗುವಿನ ತಂದೆಯ ಹೆಸರನ್ನು ಏನೆಂದು ಫಿಲ್‌ ಮಾಡಲಾಗುತ್ತದೆ ಎಂಬ ಪ್ರಶ್ನೆ ಅನೇಕ ಜನರಲ್ಲಿದೆ. 

ದಾನಿಗಳ ಮೂಲಕ IVF ನಿಂದ ಹುಟ್ಟುವ ಮಗುವಿನ ಅಪ್ಪನ ಹೆಸರು ದಾಖಲೆಗಳಲ್ಲಿ ಏನಿರುತ್ತೆ?

Rights of single mother: ನಟಿ ಭಾವನಾ In Vitro Fertilization (IVF) ಮೂಲಕ ಮದುವೆನೇ ಆಗದೇ ಅವಳಿ ಮಕ್ಕಳಿಗೆ ತಾಯಿಯಾಗುತ್ತಿದ್ದಾರೆ. ಭಾವನಾ ಈಗ ಆರು ತಿಂಗಳ ಗರ್ಭಿಣಿ. ಭಾವನಾ ಮದುವೆ ಆಗದೇ IVF ಮೂಲಕ ಗರ್ಭಿಣಿಯಾದ ಸುದ್ದಿ ಬಂದಾಗಿನಿಂದಲೂ ಆ ಬಗ್ಗೆ ಹಲವು ಪ್ರಶ್ನೆಗಳು ಜನರನ್ನು ಕಾಡುತ್ತಿವೆ. ಭಾವನಾ ಮಾತ್ರವಲ್ಲ ಕೆಲವು ನಟಿಯರು, ಅನೇಕ ಸೆಲಿಬ್ರಿಟಿಗಳು.. ಸಾಮಾನ್ಯ ಜನರೂ ಇದೇ ರೀತಿ ಮಗುವನ್ನು ಪಡೆದುಕೊಂಡಿದ್ದಾರೆ. 

ಪತಿ ಯ ವೀರ್ಯಾಣು ಮತ್ತು ಪತ್ನಿಯ ಅಂಡಾಣುಗಳನ್ನು ದೇಹದ ಹೊರಗೆ ಒಂದು ಲ್ಯಾಬ್‌ನಲ್ಲಿ ಅದರಲ್ಲಿ ಮಗು ಹುಟ್ಟಲು ಆರಂಭವಾದ ನಂತರ ಪತ್ನಿಯ ಗರ್ಭದಲ್ಲಿ ಎಂಬ್ರಿಯೋ ಹಾಕಲಾಗುತ್ತದೆ. 

ತಾಯಿ ಆಗಲು ಬಯಸುವ ಮಹಿಳೆ ಅವಿವಾಹಿತರಾಗಿದ್ದರೆ ಅಥವಾ ಇನ್ನಾವುದೋ ಕಾರಣಕ್ಕೆ ಮಹಿಳೆಯೊಬ್ಬಳೇ ಇರುವಾಗ ಆಕೆ ಮಗುವನ್ನು ಪಡೆಯಲು ಬಯಸಿದರೆ ದಾನಿಗಳ ಮೂಲಕ ವೀರ್ಯಾಣು ಪಡೆಯಲಾಗುತ್ತದೆ. ಆ ವೀರ್ಯಾಣು ಬಳಸಿ ಮಹಿಳೆಯ ಎಗ್‌ ಜೊತೆ ಡೆವಲಪ್‌ ಮಾಡಲಾಗುತ್ತದೆ. ಬಳಿಕ  ಎಂಬ್ರಿಯೋ ಮಹಿಳೆಯ ಗರ್ಭದಲ್ಲಿ ಇರಿಸಿ ಮಗು ಮಾಡಲಾಗುತ್ತದೆ. ಇಂಥ ಸಂದರ್ಭದಲ್ಲಿ IVF ಮೂಲಕ ಹುಟ್ಟಿದ ಮಗುವಿನ ತಂದೆಯ ಹೆಸರನ್ನು ಏನೆಂದು ಫಿಲ್‌ ಮಾಡಲಾಗುತ್ತದೆ ಎಂಬ ಪ್ರಶ್ನೆ ಅನೇಕ ಜನರಲ್ಲಿದೆ. 

ಇದನ್ನೂ ಓದಿ: ಈ ದೇಶದಲ್ಲಿ ಮಧ್ಯ ರಾತ್ರಿ 12 ಗಂಟೆಗೆ ಸೂರ್ಯ ಉದಯಿಸುತ್ತಾನೆ ! ಆಶ್ಚರ್ಯವಾದರೂ ಇದು ಸತ್ಯ 

ದಾನಿಯ ಮೂಲಕ ವೀರ್ಯಾಣು ಪಡೆದಿದ್ದರೂ ಹುಟ್ಟುವ ಮಗುವಿಗೆ ಅಪ್ಪ ಯಾರೆಂದು ತಿಳಿದಿರುವುದಿಲ್ಲ. ಇದಕ್ಕೆ ಕಾರಣ ದಾನಿಯ ಹೆಸರನ್ನು ಅಷ್ಟೊಂದು ಗೌಪ್ಯವಾಗಿ ಇಡಲಾಗುತ್ತದೆ. ನಮ್ಮ ಭಾರತೀಯ ಕಾನೂನಿನಲ್ಲಿ ಮಗುವಿನ ಪ್ರತಿಯೊಂದು ದಾಖಲೆಯಲ್ಲಿಯೂ ಅಪ್ಪನ ಹೆಸರು ಕಡ್ಡಾಯವಾಗಿ ಇರಲೇಬೇಕು. ಹೀಗಿದ್ದಾಗ ಈ ರೀತಿ ಜನಿಸಿದ ಮಕ್ಕಳ ದಾಖಲೆಗಳಲ್ಲಿ ತಂದೆಯ ಹೆಸರಿನ ಜಾಗದಲ್ಲಿ ಏನು ಬರೆಯುತ್ತಾರೆ.. ಈ ಬಗ್ಗೆ ಕಂಪ್ಲೀಟ್‌ ಮಾಹಿತಿ ಇಲ್ಲಿದೆ.

ದಾನಿಗಳ ಮೂಲಕ IVFನಿಂದ ಹುಟ್ಟುವ ಮಗುವಿನ ತಂದೆಯ ಹೆಸರು ಏನಿರುತ್ತೆ ಎಂದು ಅನೇಕರಲ್ಲಿ ಕುತೂಹಲವಿದೆ. IVF ಜನನದ ಸಂದರ್ಭದಲ್ಲಿ ದಂಪತಿಯ ಸ್ವಂತ ಅಂಡಾಣುಗಳು ಮತ್ತು ವೀರ್ಯದ ಮೂಲಕ ಮಗು ಗರ್ಭಧರಿಸಿದ್ದರೆ ಜನನ ಪ್ರಮಾಣಪತ್ರವು ಸಾಮಾನ್ಯವಾಗಿ ತಂದೆಯ ಹೆಸರನ್ನು ಒಳಗೊಂಡಿರುತ್ತದೆ. 

ಅದೊಂದು ವೇಳೆ ದಾನಿಯ ವೀರ್ಯವನ್ನು ಬಳಸಿದರೆ IVF ಮೂಲಕ ಮಗು ಜನಿಸಿದ್ದರೆ ತಾಯಿಯು ತಂದೆಯ ಹೆಸರಿಲ್ಲದೆ ಜನನ ಪ್ರಮಾಣಪತ್ರವನ್ನು ಪಡೆದುಕೊಳ್ಳಬಹುದು. ಆಗ ಮಹಿಳೆ ತಾನು ದಾನಿಯ ವೀರ್ಯದೊಂದಿಗೆ IVF ಮೂಲಕ ಗರ್ಭಧಾರಣೆ ನಡೆದಿದೆ ಎಂದು ಹೇಳುವ ಅಫಿಡವಿಟ್ ಅನ್ನು ಕಡ್ಡಾಯವಾಗಿ ನೀಡಲೇ ಬೇಕಾಗುತ್ತದೆ. ಆಗ ಮಾತ್ರ ಮಗುವಿನ ಜನನ ಪ್ರಮಾಣ ಪತ್ರದಲ್ಲಿ ತಂದೆ ಹೆಸರನ್ನು ತೆಗೆದು ಹಾಕಲಾಗುತ್ತದೆ. ಒಂಟಿ ತಾಯಂದಿರು ತಂದೆಯ ಗುರುತಿನ ಬಗ್ಗೆ ಗೌಪ್ಯತೆಯ ಹಕ್ಕನ್ನು ಹೊಂದಿದ್ದಾರೆ ಎಂದು ಈ ಹಿಂದೆಯೇ ಒಂದು ಪ್ರಕರಣದಲ್ಲಿ ಕೇರಳ ಹೈಕೋರ್ಟ್ ಆದೇಶಿಸಿದೆ. 

ಐವಿಎಫ್ ಮೂಲಕ ಜನಿಸಿದ ಮಗುವಿನ ಜನನ-ಮರಣ ನೋಂದಣಿಗಾಗಿ ತಂದೆಯ ಬಗ್ಗೆ ಮಾಹಿತಿ ಪಡೆಯುವುದು ಸೂಕ್ತವಲ್ಲ ಎಂದು ಕೇರಳ ಹೈಕೋರ್ಟ್ ಪ್ರಕರಣವೊಂದರ ವಿಚಾರಣೆ ನಡೆಸುತ್ತಿರುವಾಗ ಹೇಳಿದೆ. ಐವಿಎಫ್‌ನಂತಹ ನೆರವಿನ ಸಂತಾನೋತ್ಪತ್ತಿ ತಂತ್ರಗಳು ಒಂಟಿ ಮಹಿಳೆಯ ಗರ್ಭಧಾರಣೆಯನ್ನು ಗುರುತಿಸಿವೆ. ಅಂತಹ ಪರಿಸ್ಥಿತಿಯಲ್ಲಿ, ಈ ವಿಧಾನಗಳ ಮೂಲಕ ಜನಿಸಿದ ಮಕ್ಕಳ ಜನನ-ಮರಣ ನೋಂದಣಿಯಲ್ಲಿ ತಂದೆಯ ಬಗ್ಗೆ ಮಾಹಿತಿ ಪಡೆಯುವುದು ತಾಯಿ ಮತ್ತು ಆ ಮಗುವಿನ ಗೌರವದ ಹಕ್ಕಿನ ಮೇಲೆ ಖಂಡಿತವಾಗಿಯೂ ಪರಿಣಾಮ ಬೀರುತ್ತದೆ ಎಂದು ಹೈಕೋರ್ಟ್ ಹೇಳಿದೆ.

ಇಂತಹ ಪ್ರಕ್ರಿಯೆಯ ಮೂಲಕ ಜನಿಸಿದ ಮಕ್ಕಳ ಜನನ ಮತ್ತು ಮರಣ ನೋಂದಣಿಗೆ ರಾಜ್ಯವು ಸರಿಯಾದ 'ಫಾರ್ಮ್'ಗಳನ್ನು ಒದಗಿಸಬೇಕು ಎಂದು ಹೈಕೋರ್ಟ್ ಹೇಳಿದೆ. ಎಆರ್‌ಟಿ ಮೂಲಕ ತಾಯಿಯಾದ ಒಂಟಿ ಪೋಷಕರು ಅಥವಾ ಅವಿವಾಹಿತ ಮಹಿಳೆಯ ಹಕ್ಕನ್ನು ಅಂಗೀಕರಿಸಲಾಗಿದೆ ಎಂದು ಹೈಕೋರ್ಟ್ ತನ್ನ ತೀರ್ಪಿನಲ್ಲಿ ತಿಳಿಸಿದೆ. ಅಂತಹ ಪರಿಸ್ಥಿತಿಯಲ್ಲಿ, ತಂದೆಯ ಹೆಸರನ್ನು ನಮೂದಿಸುವ ಅಗತ್ಯವನ್ನು ರಹಸ್ಯವಾಗಿಡಬೇಕು. 

ವಿಶೇಷ ಸಂದರ್ಭಗಳಲ್ಲಿ ಗುರುತನ್ನು ಬಹಿರಂಗಪಡಿಸಲಾಗುತ್ತದೆ. ಅದು ಕಾನೂನುಬದ್ಧವಾಗಿ ಅಗತ್ಯವಿಲ್ಲದಿದ್ದರೆ ವೀರ್ಯದಾನಿಯ ಗುರುತನ್ನು ಬಹಿರಂಗಪಡಿಸಲಾಗುವುದಿಲ್ಲ.

ಇದನ್ನೂ ಓದಿ: Instagram ನಲ್ಲಿ ಫಾಲೋವರ್ಸ್‌ ಹೆಚ್ಚಾಗಬೇಕೆ..? ಒಂದು ಪೈಸೆ ಖರ್ಚು ಇಲ್ಲ.. ಜಸ್ಟ್‌ ಹೀಗೆ ಮಾಡಿ ಸಾಕು..

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

Read More