ಇನ್ನೇನು ಹಾರ್ಟ್ ಅಟ್ಯಾಕ್ ಆಗಲಿದೆ ಎನ್ನುವಾಗ ದೇಹದ ಈ ಭಾಗದಲ್ಲಿ ನೋವು ಕಾಣಿಸಿಕೊಳ್ಳುತ್ತದೆ

Ranjitha R K
Jul 09, 2025

Ranjitha R K

ಹಾರ್ಟ್ ಅಟ್ಯಾಕ್
ಹಾರ್ಟ್ ಟ್ಯಾಕ್ ಸಾಮಾನ್ಯ ಸಮಸ್ಯೆಯಂತೆ ಬಹುತೇಕ ಮಂದಿಯನ್ನು ಕಾಡುತ್ತಿದೆ. ಹಾರ್ಟ್ ಅಟ್ಯಾಕ್ ಆಗುವುದಕ್ಕೆ ಮುನ್ನ ದೇಹ ಕೆಲವೊಂದು ಸೂಚನೆಗಳನ್ನು ನೀಡುತ್ತದೆ.

ಆಂಜಿಯೋಪ್ಲ್ಯಾಸ್ಟಿ
ಹೃದಯಕ್ಕೆ ರಕ್ತ ಪೂರೈಕೆಯಲ್ಲಿ ಅಡಚಣೆ ಉಂಟಾಗುವ ಪರಿಧಮನಿ ಕಾಯಿಲೆಯ ಚಿಕಿತ್ಸೆಯಲ್ಲಿ ಆಂಜಿಯೋಪ್ಲ್ಯಾಸ್ಟಿಯನ್ನು ವಿಶೇಷವಾಗಿ ಬಳಸಲಾಗುತ್ತದೆ. ಇದು ಅಪಧಮನಿಯನ್ನು ತೆರೆಯಲು ಬಳಸುವ ಒಂದು ಸಣ್ಣ ಶಸ್ತ್ರಚಿಕಿತ್ಸೆ.

ಆಂಜಿಯೋಪ್ಲ್ಯಾಸ್ಟಿ ಯಾವಾಗ ಅಗತ್ಯ? :
ಅಪಧಮನಿಯಲ್ಲಿನ ಅಡಚಣೆಯಿಂದಾಗಿ ರಕ್ತವು ಹೃದಯವನ್ನು ಸರಿಯಾಗಿ ತಲುಪಲು ಸಾಧ್ಯವಾಗದಿದ್ದಾಗ ಆಂಜಿಯೋಪ್ಲ್ಯಾಸ್ಟಿ ಮಾಡಲಾಗುತ್ತದೆ. ಅದರ ಅಗತ್ಯವನ್ನು ಕಂಡುಹಿಡಿಯಲು, ಆಂಜಿಯೋಗ್ರಾಮ್, ಒತ್ತಡ ಪರೀಕ್ಷೆ ಮತ್ತು ಇಸಿಜಿಯಂತಹ ಕೆಲವು ಪರೀಕ್ಷೆಗಳನ್ನು ಮಾಡಲಾಗುತ್ತದೆ.

ಎದೆ ನೋವು :
ಎದೆಯಲ್ಲಿ ಪದೇ ಪದೇ ಸುಡುವ ಅನುಭವ ಅಥವಾ ಒತ್ತಡ ಬಿದ್ದ ಹಾಗೆ ಆಗುತ್ತಿದ್ದರೆ ಅದು ಹೃದಯ ಅಪಧಮನಿಗಳಲ್ಲಿ ಅಡಚಣೆಯ ಸಂಕೇತವಾಗಿರಬಹುದು. ಅಂತಹ ಸಂದರ್ಭಗಳಲ್ಲಿ, ಆಂಜಿಯೋಪ್ಲ್ಯಾಸ್ಟಿ ಮಾಡಲಾಗುತ್ತದೆ.

ಕಾಲುಗಳಲ್ಲಿ ನೋವು :
ಹೃದಯ ಕಾಯಿಲೆಯ ಪರಿಣಾಮಗಳು ಕಾಲುಗಳನ್ನೂ ತಲುಪಬಹುದು. ನಡೆಯುವಾಗ ಅಥವಾ ಸೈಕ್ಲಿಂಗ್ ಮಾಡುವಾಗ ಸ್ನಾಯು ಸೆಳೆತ ಮತ್ತು ನೋವು ಉಂಟಾಗಬಹುದು. ಇದು ಬಾಹ್ಯ ಅಪಧಮನಿ ಕಾಯಿಲೆಯ ಸಂಕೇತವಾಗಿದೆ.

ದೌರ್ಬಲ್ಯ ಮತ್ತು ಆಯಾಸ :
ಸದಾ ದಣಿಯುತ್ತಿದ್ದರೆ ವಿಶೇಷವಾಗಿ ಸ್ವಲ್ಪ ಕೆಲಸದ ನಂತರ ಅಥವಾ ಮೆಟ್ಟಿಲುಗಳನ್ನು ಹತ್ತಿದ ನಂತರ ವಿಪರೀತ ಸುಸ್ತಾಗುತ್ತಿದ್ದರೆ ಇದು ಹೃದ್ರೋಗದ ಲಕ್ಷಣವಾಗಿರಬಹುದು.

ರಕ್ತದೊತ್ತಡದಲ್ಲಿನ ಏರಿಳಿತಗಳು :
ನಿರಂತರ ಅಧಿಕ ರಕ್ತದೊತ್ತಡವು ಹೃದಯದ ಅಪಧಮನಿಗಳನ್ನು ಗಟ್ಟಿಯಾಗಿ ಮತ್ತು ದಪ್ಪವಾಗಿಸುತ್ತದೆ. ಇದು ಹೃದಯಾಘಾತ ಮತ್ತು ಪಾರ್ಶ್ವವಾಯು ಅಪಾಯವನ್ನು ಹೆಚ್ಚಿಸುತ್ತದೆ.

ಒಸಡುಗಳಲ್ಲಿ ರಕ್ತಸ್ತ್ರಾವ :
ವಸಡಿನ ಕಾಯಿಲೆಗೂ ಹೃದಯ ಕಾಯಿಲೆಗೂ ಸಂಬಂಧವಿದೆ. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಒಸಡುಗಳು ಊದಿಕೊಂಡರೆ ಅಥವಾ ಪದೇ ಪದೇ ರಕ್ತಸ್ರಾವವಾಗುತ್ತಿದ್ದರೆ, ಹೃದಯದ ಆರೋಗ್ಯದ ಬಗ್ಗೆ ಎಚ್ಚರಿಕೆಯಾಗಿರಬಹುದು.


ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ದೃಢೀಕರಿಸುವುದಿಲ್ಲ.

Read Next Story