Operation Sindoor: ಜಮ್ಮು-ಕಾಶ್ಮೀರದ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ ಪಾಕಿಸ್ತಾನ ಮತ್ತು ಉಗ್ರರ ವಿರುದ್ಧ ಭಾರತೀಯ ಸೇನೆ ನಡೆಸಿದ ʼಆಪರೇಷನ್ ಸಿಂದೂರ್ʼ ಕಾರ್ಯಾಚರಣೆಯಲ್ಲಿ 100ಕ್ಕೂ ಹೆಚ್ಚು ಉಗ್ರರು ಹತರಾಗಿದ್ದಾರೆಂದು ದೇಶದ ಸೇನಾ ಕಾರ್ಯಾಚರಣೆಗಳ ಮಹಾನಿರ್ದೇಶಕರು (DGMO) ತಿಳಿಸಿದ್ದಾರೆ. ದೆಹಲಿಯಲ್ಲಿ ಭಾನುವಾರ ನಡೆದ ನೌಕಾಪಡೆ, ವಾಯುಪಡೆಯ ಅಧಿಕಾರಿಗಳು ಜಂಟಿ ಪತ್ರಿಕಾಗೋಷ್ಠಿಯಲ್ಲಿ 'ಆಪರೇಷನ್ ಸಿಂದೂರ' ಕಾರ್ಯಾಚರಣೆ ಬಗ್ಗೆ ನೀಡಿದರು.
ಈ ವೇಳೆ ಮಾತನಾಡಿದ ಡಿಜಿಎಂಒ ಲೆಫ್ಟಿನೆಂಟ್ ಜನರಲ್ ರಾಜೀವ್ ಫಾಯ್, 'ಭಯೋತ್ಪಾದಕರ ನೆಲೆಗಳನ್ನ ಧ್ವಂಸಗೊಳಿಸುವುದೇ ನಮ್ಮ ಮುಖ್ಯ ಗುರಿಯಾಗಿತ್ತು. ಅದೇ ರೀತಿ ನಾವು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಾದ್ಯಂತ (POK) ಇದ್ದ 9 ಉಗ್ರರ ನೆಲೆಗಳನ್ನ ನಾಶ ಮಾಡಿದ್ದೇವೆ. ನಿಷೇಧಿತ ಲಷ್ಕರ್-ಎ-ತಯಬಾ, ಜೈಷ್-ಎ-ಮೊಹಮ್ಮದ್ ಉಗ್ರ ಸಂಘಟನೆಗಳ ತರಬೇತಿ ಕೇಂದ್ರಗಳನ್ನೂ ಧ್ವಂಸಗೊಳಿಸಿದ್ದೇವೆ. ಹತ್ಯೆಯಾದವರಲ್ಲಿ ಯೂಸುಫ್ ಅಜರ್, ಅಬ್ದುಲ್ ಮಲಿಕ್ ರೌಫ್ ಮತ್ತು ಮುದಾಸೀರ್ ಅಹ್ಮದ್‌ನಂತಹ ಕುಖ್ಯಾತ ಭಯೋತ್ಪಾದಕರು ಸೇರಿದ್ದಾರೆಂದು ತಿಳಿಸಿದ್ದಾರೆ.
#WATCH | Delhi: DGMO Lieutenant General Rajiv Ghai says "...Those strikes across those nine terror hubs left more than 100 terrorists killed, including high value targets such as Yusuf Azhar, Abdul Malik Rauf and Mudasir Ahmed that were involved in the hijack of IC814 and the… pic.twitter.com/IeH6Je6STE
— ANI (@ANI) May 11, 2025
ಇದನ್ನೂ ಓದಿ: Tension on Indo-Pakistan: ಆಪರೇಷನ್ ಸಿಂದೂರ್ ಇನ್ನೂ ಮುಂದುವರಿದಿದೆ ಎಂದ ಭಾರತೀಯ ವಾಯುಸೇನೆ
#WATCH | Delhi: DGMO Lieutenant General Rajiv Ghai says "You are all by now familiar with the brutality and the dastardly manner in which 26 innocent lives were prematurely terminated at Pahalgam on 22nd April. When you combine those horrific scenes and the pain of the families… pic.twitter.com/82cWWkl0aE
— ANI (@ANI) May 11, 2025
ರಾವಲ್ಪಿಂಡಿಯ ನೂರ್‌ಖಾನ್, ಪಂಜಾಬ್‌ನ ಶೋರ್ಕೋಟ್‌ನಲ್ಲಿರುವ ರಫೀಕಿ ಮತ್ತು ಪಂಜಾಬ್‌ನ ಚಕ್ವಾಲ್‌ನಲ್ಲಿರುವ ಮುರಿಯದ್, ಸುಕ್ಕೂರ್, ಚುನ್ಲಿಯನ್‌ನ ಸೇನಾ ನೆಲೆಗಳು ಹಾಗೂ ಪಸ್ತೂರ್, ಸಿಯಾಲ್‌ಕೋಟ್ ವಾಯು ನೆಲೆಗಳನ್ನು ಗುರಿಯಾಗಿಸಿ ಕಾರ್ಯಾಚರಣೆ ನಡೆಸಿ ದಾಳಿ ಮಾಡಲಾಗಿದೆ. ಈ ದಾಳಿಯಲ್ಲಿ ಈ ಎಲ್ಲಾ ವಾಯುನೆಲೆಗಳಿಗೆ ದೊಡ್ಡಮಟ್ಟದ ಹಾನಿಯುಂಟಾಗಿದೆ ಎಂದು ಅವರು ತಿಳಿಸಿದ್ದಾರೆ. ಭಾರತದ ಪ್ರತಿದಾಳಿಯಲ್ಲಿ ಪಾಕಿಸ್ತಾನದ 35-40 ಯೋಧರು ಮೃತಪಟ್ಟಿದ್ದು, ಪಾಕ್‌ನ ಕೆಲವು ಸೇನಾಧಿಕಾರಿಗಳೂ ಸಾವಿಗೀಡಾಗಿದ್ದಾರೆ. ಗಡಿ ನಿಯಂತ್ರಣ ರೇಖೆ ಬಳಿ ನಮ್ಮ ಸೇನೆಯ ಐವರು ಯೋಧರು ಹುತಾತ್ಮರಾಗಿದ್ದಾರೆಂದು ರಾಜೀವ್ ಘಾಯ್ ತಿಳಿಸಿದ್ದಾರೆ.
#WATCH | Delhi: DGMO Lieutenant General Rajiv Ghai says "...In those strikes across 9 terror hubs left more than 100 terrorists killed..." pic.twitter.com/lPjM4BQSgc
— ANI (@ANI) May 11, 2025
ಗಡಿ ಭಾಗದ 26 ಪ್ರದೇಶಗಳ ಮೇಲೆ ಪಾಕ್ ಸೇನೆ ನಡೆಸಿದ ಕ್ಷಿಪಣಿ ಹಾಗೂ ಡ್ರೋನ್ ದಾಳಿಯನ್ನು ಭಾರತೀಯ ಸೇನೆಯು ವಿಫಲಗೊಳಿಸಿದೆ. 700ಕ್ಕೂ ಹೆಚ್ಚು ಪಾಕ್ ಡ್ರೋನ್‌ಗಳನ್ನ ಯಶಸ್ವಿಯಾಗಿ ಹೊಡೆದುರುಳಿಸಲಾಗಿದೆ. ಪಾಕ್ ಸೇನೆಯು ಶ್ರೀನಗರ, ಅವಂತಿಪುರ ಮತ್ತು ಉಧಂಪುರ ವಾಯುನೆಲೆಗಳಲ್ಲಿನ ಮೆಡಿಕೇರ್ ಕೇಂದ್ರ ಮತ್ತು ಶಾಲಾ ಆವರಣ, ಧಾರ್ಮಿಕ ಸ್ಥಳಗಳ ಮೇಲೆ ದಾಳಿ ಮಾಡಿದೆ. ಆದರೆ ನಾವು ಪಾಕ್ ಸೈನಿಕರು, ನಾಗರಿಕರನ್ನು ಗುರಿಯಾಗಿಸಿ ಯಾವುದೇ ದಾಳಿ ಮಾಡಿಲ್ಲವೆಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ: ವಿಶ್ವದ ಅತ್ಯಂತ ಶಕ್ತಿಶಾಲಿ ಮಿಲಿಟರಿಗಳು: ಟಾಪ್ 10ರಲ್ಲಿ ಭಾರತ ಸ್ಥಾನ ಪಡೆದಿದೆಯೇ? ಪಾಕಿಸ್ತಾನಕ್ಕೆ ಎಷ್ಟನೇ ಸ್ಥಾನ?
ʼಆಪರೇಷನ್ ಸಿಂದೂರ್ ʼಮೂಲಕ ಪಾಕಿಸ್ತಾನ 11 ವಾಯುನೆಲೆಗಳನ್ನ ಭಾರತೀಯ ಸೇನೆಯು ಧ್ವಂಸಗೊಳಿಸಿದೆ. ಈ ಮೂಲಕ ಪಹಲ್ಗಾಮ್ ಸಂತ್ರಸ್ತರಿಗೆ ನ್ಯಾಯ ಒದಗಿಸಿದ್ದೇವೆ. ನಾವು ನಡೆಸಿದ ಪ್ರತಿಯೊಂದು ದಾಳಿಗೂ ಸಾಕ್ಷಿ ಇದೆ. ಪಾಕಿಸ್ತಾನದ ಡಿಜಿಎಂಒ ಶನಿವಾರ ಮಧ್ಯಾಹ್ನ 3.30ಕ್ಕೆ ನಮಗೆ ಕರೆ ಮಾಡಿ ತುರ್ತು ಕದನ ವಿರಾಮಕ್ಕೆ ಮೊದಲು ಮನವಿ ಮಾಡಿದ್ದರು ಎಂದು ತಿಳಿಸಿದರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.