PM Narendra Modi: ʼಆಪರೇಷನ್ ಸಿಂದೂರ್ʼ ಬಳಿಕ ಮೊದಲ ಬಾರಿಗೆ ಗುಜರಾತ್ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿಯವರು ಮಂಗಳವಾರ ನಡೆದ ಸಾರ್ವಜನಿಕ ಸಭೆಯಲ್ಲಿ ಪಾಕಿಸ್ತಾನದ ಜನತೆಗೆ ಶಾಂತಿಯಿಂದ ಬದುಕಿ ಎನ್ನುವ ಸಂದೇಶ ನೀಡಿದ್ದಾರೆ. ತಮ್ಮ ಎರಡನೇ ದಿನ ಗಾಂಧಿನಗರದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಪಾಕಿಸ್ತಾನಕ್ಕೆ ಖಡಕ್ ಸಂದೇಶ ನೀಡಿದ್ದಾರೆ. ʼಪಾಕಿಸ್ತಾನದ ಜನತೆ ಅದರಲ್ಲೂ ಪ್ರಮುಖವಾಗಿ ಯುವ ಸಮುದಾಯ ನನ್ನ ಮಾತನ್ನು ಕೇಳಿ. ನಿಮ್ಮ ಸರ್ಕಾರ ನಿಮ್ಮ ಬದುಕುನ್ನು ನರಕಕ್ಕೆ ತಳ್ಳುತ್ತಿದೆ. ಸುಖಕರ ಜೀವನವನ್ನ ನೀವು ಬಯಸಿದ್ದರೆ ರೋಟಿ ತಿನ್ನಿ, ಇಲ್ಲದಿದ್ದರೆ ನನ್ನ ಗೋಲಿ ತಿನ್ನಿ" ಅಂತಾ ಖಡಕ್ ಎಚ್ಚರಿಕೆ ಸಂದೇಶನ್ನ ರವಾನಿಸಿದ್ದಾರೆ.
ʼಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ಅಮಾಯಕ ನಾಗರಿಕರ ಮೇಲೆ ದಾಳಿ ನಡೆಯಿತು. ಪಾಕಿಸ್ತಾನ ಸರ್ಕಾರ ಭಯೋತ್ಪಾದನೆಯ ವಿರುದ್ದ ಕ್ರಮ ತೆಗೆದುಕೊಳ್ಳುತ್ತದೆ ಅಂತಾ ನಾವು 15 ದಿನ ಕಾದೆವು. ಪಾಕಿಸ್ತಾನದ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬರದ ಹಿನ್ನಲೆ ನಾವು ʼಆಪರೇಷನ್ ಸಿಂದೂರ್ʼ ಕಾರ್ಯಾಚರಣೆಗೆ ಇಳಿಯಬೇಕಾಯಿತು. ಭಯೋತ್ಪಾದಕರನ್ನ ಬೆಂಬಲಿಸಿದ್ದಕ್ಕೆ ನಾವು ಪಾಕಿಸ್ತಾನದ ಮೇಲೆ ದಾಳಿ ಮಾಡಬೇಕಾಯಿತು. ನಮ್ಮ ದಾಳಿಯಿಂದ ಪಾಕಿಸ್ತಾನದ ಕೆಲವೊಂದು ವಾಯುನೆಲೆಗಳು ಇನ್ನೂ ಐಸಿಯು ಸ್ಥಿತಿಯಲ್ಲಿದೆʼ ಅಂತಾ ಪ್ರಧಾನಿ ಮೋದಿ ಕುಟುಕಿದ್ದಾರೆ.
ಇದನ್ನೂ ಓದಿ: ಲಷ್ಕರ್ ಉಗ್ರರ ಉಡಾವಣಾ ಕೇಂದ್ರಗಳನ್ನು ಧ್ವಂಸಗೊಳಿಸಿದ ಬಿಎಸ್ಎಫ್..!
Eat Roti with peace or else get ready to eat our Bullets - PM Modi to Pakistan 🤣🤣🤣
pic.twitter.com/WYISWJ8lsc— Mr Sinha (@MrSinha_) May 26, 2025
ʼದೇಹವು ಎಷ್ಟೇ ಆರೋಗ್ಯಕರವಾಗಿದ್ದರೂ, ಮುಳ್ಳು ಚುಚ್ಚಿದರೆ ಇಡೀ ದೇಹಕ್ಕೆ ತೊಂದರೆಗೊಳಗಾಗುತ್ತದೆ. ಹೀಗಾಗಿ ಆ ಮುಳ್ಳನ್ನು ತೆಗೆದುಹಾಕಬೇಕೆಂದು ನಾವು ನಿರ್ಧರಿಸಿದ್ದೇವೆ. ಭಾರತವು ಪಾಕಿಸ್ತಾನವನ್ನು ಮೂರು ಬಾರಿ ಯುದ್ಧಗಳಲ್ಲಿ ಸೋಲಿಸಿದೆ. ನಾವು ನಮ್ಮ ನೆರೆಹೊರೆಯವರಿಗೂ ಸಂತೋಷ ಮತ್ತು ಶಾಂತಿಯನ್ನು ಬಯಸುತ್ತೇವೆ. ಇದು ಸಾವಿರಾರು ವರ್ಷಗಳಿಂದ ನಮ್ಮ ಕಾಳಜಿಯಾಗಿದೆ, ಆದರೆ ನಮ್ಮ ಶಕ್ತಿಗೆ ಮತ್ತೆ ಮತ್ತೆ ಸವಾಲು ಎದುರಾದಾಗ, ಈ ದೇಶವು ವೀರರ ನಾಡು ಕೂಡ ಆಗಿದೆ. ಪಾಕಿಸ್ತಾನ ಯುದ್ಧ ಮಾಡುತ್ತಿದೆಯೇ ಹೊರತು ಪರೋಕ್ಷ ಯುದ್ಧವಲ್ಲ. ನಾವು ಮುಜಾಹಿದ್ದೀನ್‌ಗಳನ್ನು ಮೊದಲೇ ಕೊಂದಿದ್ದರೆ ಈ ದಿನವನ್ನು ನೋಡಬೇಕಾಗುತ್ತಿರಲಿಲ್ಲ. ನಾವು ಭಯೋತ್ಪಾದನೆಯ ಮುಳ್ಳನ್ನು ತೆಗೆದುಹಾಕುತ್ತೇವೆʼ ಎಂದು ಎಚ್ಚರಿಸಿದ್ದಾರೆ.
ಪಾಕಿಸ್ತಾನಕ್ಕೆ ಮೋದಿ ಎಚ್ಚರಿಕೆ
"ಮೇ 6ರ ನಂತರ ಯುದ್ಧದಲ್ಲಿ ಸಾವನ್ನಪ್ಪಿದವರಿಗೆ ಪಾಕಿಸ್ತಾನದಲ್ಲಿ ಸರ್ಕಾರಿ ಗೌರವ ನೀಡಲಾಗುತ್ತಿದ್ದರಿಂದ ನಾವು ಇದನ್ನು ಪ್ರಾಕ್ಸಿ ಯುದ್ಧವೆಂದು ಕರೆಯಲು ಸಾಧ್ಯವಿಲ್ಲ. ಅವರ ಶವಪೆಟ್ಟಿಗೆಯ ಮೇಲೆ ಪಾಕಿಸ್ತಾನಿ ಧ್ವಜಗಳನ್ನು ಹೊದಿಸಲಾಯಿತು. ಪಾಕಿಸ್ತಾನ ಸೈನ್ಯವು ಅವರಿಗೆ ನಮಸ್ಕರಿಸಿತು. ಈ ಭಯೋತ್ಪಾದಕ ಚಟುವಟಿಕೆಗಳು ಕೇವಲ ಪ್ರಾಕ್ಸಿ ಯುದ್ಧಗಳಲ್ಲ, ಇದು ಅವರ ಕಡೆಯಿಂದ ಚೆನ್ನಾಗಿ ಯೋಚಿಸಿದ ಯುದ್ಧ ತಂತ್ರವಾಗಿದೆ ಎಂಬುದಕ್ಕೆ ಸಾಕ್ಷಿ. ಅವರು (ಪಾಕಿಸ್ತಾನ) ಯುದ್ಧದಲ್ಲಿ ಭಾಗಿಯಾಗಿದ್ದರೆ, ಅದಕ್ಕೆ ತಕ್ಕಂತೆ ಪ್ರತಿಕ್ರಿಯೆ ಇರುತ್ತದೆ. ʼಆಪರೇಷನ್ ಸಿಂದೂರ್ʼನ ಘರ್ಜನೆಯನ್ನು ಇಡೀ ಜಗತ್ತು ಕೇಳಿದೆ. ದೇಶವನ್ನು ನಿರ್ಮಿಸಬೇಕು ಮತ್ತು ಉಳಿಸಬೇಕು ಎಂದಾದರೆ, ʼಆಪರೇಷನ್ ಸಿಂದೂರ್ʼ 140 ಕೋಟಿ ಜನರ ಜವಾಬ್ದಾರಿಯಾಗಿದೆ. ಅದನ್ನು ಮಿಲಿಟರಿ ಬಲದಿಂದ ಪ್ರಾರಂಭಿಸಲಾಯಿತು, ಅದನ್ನು ಜನಶಕ್ತಿಯಿಂದ ಗೆಲ್ಲಬೇಕು" ಎಂದು ಹೇಳಿದರು.
ಇದನ್ನೂ ಓದಿ: ಭಾರತದಲ್ಲಿ ಈ ಬಾರಿ ಸಾಮಾನ್ಯಕ್ಕಿಂತ ಹೆಚ್ಚು ಮಳೆ: ಹವಾಮಾನ ಇಲಾಖೆ
ಪ್ರಧಾನಿ ಮೋದಿ ಖಡಕ್ ಸಂದೇಶದಲ್ಲಿ ಏನಿದೆ?
ತಮ್ಮ ಭಾಷಣದಲ್ಲಿ ಪ್ರಧಾನಿ ಮೋದಿಯವರು ಪಾಕಿಸ್ತಾನದ ಹೆಸರನ್ನು 12 ಬಾರಿ, ಭಯೋತ್ಪಾದನೆಯನ್ನು 11 ಬಾರಿ, ಪಾಕಿಸ್ತಾನ ಸೇನೆಯನ್ನು 10 ಬಾರಿ, ಪಾಕಿಸ್ತಾನಿ ಜನರನ್ನು 7 ಬಾರಿ, ಭಾರತೀಯ ಸೇನೆಯ ಶೌರ್ಯವನ್ನು 11 ಬಾರಿ ಮತ್ತು ʼಆಪರೇಷನ್ ಸಿಂದೂರ್ʼ ಅನ್ನು 9 ಬಾರಿ ಉಲ್ಲೇಖಿಸಿದರು. ಭಯೋತ್ಪಾದನೆಯ ವಿರುದ್ಧ ಭಾರತದ ಹೋರಾಟ ಮುಂದುವರಿಯುತ್ತದೆ. ಭಯೋತ್ಪಾದನೆ ನಿರ್ಮೂಲನೆಯಾಗುವವರೆಗೂ ಭಾರತ ಈ ಹೋರಾಟವನ್ನು ಮುಂದುವರಿಸುತ್ತದೆ ಎಂದು ಪಾಕಿಸ್ತಾನಕ್ಕೆ ಸ್ಪಷ್ಟಪಡಿಸಿದ ಪ್ರಧಾನಿ ಮೋದಿ, ಈಗ ಭಯೋತ್ಪಾದನೆ ಮತ್ತು ಪಿಒಕೆ ವಿಷಯಗಳ ಬಗ್ಗೆ ಮಾತ್ರ ಮಾತುಕತೆ ನಡೆಯಲಿದೆ. ಬೇರೆ ಯಾವುದೇ ವಿಷಯದ ಬಗ್ಗೆ ಪಾಕಿಸ್ತಾನ ಮತ್ತು ಭಾರತ ನಡುವೆ ಮಾತುಕತೆ ಇರುವುದಿಲ್ಲʼವೆಂದು ಹೇಳಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ