ಸಚಿವರ ವಿರುದ್ಧ ಸಮರ ಸಾರಿದ್ದ ಶಾಸಕರ ಅಸಮಾಧಾನ ಶಮನಕ್ಕೆ ಹೈಕಮಾಂಡ್ ಮುಂದಾಗಿದೆ. ಶಾಸಕರ ಸಮಾಧಾನಪಡಿಸುವ ಹೊಣೆ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಹೆಗಲಿಗೇರಿದೆ.ಹೀಗಾಗಿ ಬೆಂಗಳೂರಿಗೆ ಆಗಮಿಸಿರುವ ಪ್ರಧಾನ ಕಾರ್ಯದರ್ಶಿ ಮೂರು ದಿನಗಳ ಕಾಲ ಮ್ಯಾರಥಾನ್ ಸಭೆಯನ್ನ ನಡೆಸ್ತಿದ್ದಾರೆ.ಇಂದು ಸುಮಾರು ೭ ಶಾಸಕರ ಜೊತೆ ಒನ್ ಟು ಒನ್ ಚರ್ಚೆ ನಡೆಸಿದ್ದಾರೆ. ಅವರ ಅಹವಾಲುಗಳನ್ನ ಆಲಿಸಿದ್ದಾರೆ.
ಇದನ್ನೂ ಓದಿ: ಖಾಲಿ ಹೊಟ್ಟೆಯಲ್ಲಿ ಈ ಎಲೆ ತಿಂದ್ರೆ, ಜೀರ್ಣಕ್ರಿಯೆ ಸರಿಯಾಗಿ, ವಾರದಲ್ಲೇ ತೂಕ ಕಳೆದುಕೊಳ್ಳುತ್ತೀರ..!
ಅಳಂದ ಕ್ಷೇತ್ರದ ಶಾಸಕ ಬಿ.ಆರ್.ಪಾಟೀಲ್‌ರ ಆಡಿಯೋ ವೈರಲ್ ಬಳಿಕ ರಾಜ್ಯ ಕೈ ಸರ್ಕಾರದಲ್ಲಿ ಬಿರುಗಾಳಿ ಎದ್ದಿತ್ತು. ಪಾಟೀಲರ ಹೇಳಿಕೆಯಿಂದ ಪ್ರೇರಣೆ ಪಡೆದು ಕಾಗವಾಡ ಶಾಸಕ ರಾಜುಕಾಗೆ, ಮೊಳಕಾಕ್ಮೂರು ಶಾಸಕ ಎನ್.ವೈ.ಗೋಪಾಲ ಕೃಷ್ಣ,ಬೇಳೂರು ಗೋಪಾಲಕೃಷ್ಣ ಸೇರಿದಂತೆ ಹಲವರು ಶಾಸಕರು ಅಸಮಾಧಾನ ಕಿಡಿಗೆ ತುಪ್ಪ ಸುರಿದರು.ಸ್ವಪಕ್ಷೀಯ ಶಾಸಕರ ಮಾತಿನ ಕಿಡಿಗಳು ಸರ್ಕಾರದ ಬುಡಕ್ಕೆ ಬಿಸಿ ಹೆಚ್ಚಾಗುವಂತೆ ಮಾಡಿತು. ಶಾಸಕರ ಆಕ್ರೋಷದ ನುಡಿಗಳು ಪಕ್ಷ ಮತ್ತು ಸರ್ಕಾರದ ವರ್ಚಸ್ಸಿಗೆ ಧಕ್ಕೆತಂದಿತು.ಪರಿಸ್ಥಿತಿ ಕೈಮೀರುವುದನ್ನು ಅರಿತು ಕೈ ಕಮಾಂಡ್ ಎಂಟ್ರಿ ಕೊಟ್ಟಿದೆ.
ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ರಾಜ್ಯಕ್ಕೆ ಕಳಿಸಿ ಶಾಸಕರ ಬಾಯಿಗೆ ಬೀಗ ಹಾಕೋಕೆ ಸೂಚಿಸಿದ್ದಾರೆ. ಹೀಗಾಗಿ ಬೆಂಗಳೂರಿಗೆ ಆಗಮಿಸಿರುವ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಇಂದಿನಿಂದ ಮೂರು ದಿನಗಳ ಕಾಲ ಶಾಸಕರ ಒನ್ ಟು ಒನ್ ಸಭೆ ನಡೆಸ್ತಿದ್ದಾರೆ. ಇಂದು ಸುಮಾರು ೮ ಶಾಸಕರಲ್ಲಿ ೭ ಜನರ ಜತೆ ಚರ್ಚಿಸಿ ಸಮಸ್ಯೆ ಆಲಿಸಿದ್ದಾರೆ.
ಆರಂಭದಲ್ಲಿಯೇ ಅಳಂದ ಶಾಸಕ ಬಿಆರ್.ಪಾಟೀಲರ ಜತೆ ಮೊದಲು ಭೇಟಿ ಮಾಡಿ ಅವರ ಅಹವಾಲು ಕೇಳಿದರು.ಅಂದಾಜು ಅರ್ಧ ತಾಸು ಒನ್ ಟು ಒನ್ ಮಾತುಕತೆ ನಡೆಸಿ ಇಡಿ ಘಟನೆಗಳ ಪುನರಾವರ್ತಿತ ವರದಿ ಪಡಕೊಂಡ್ರು. ಈ ವೇಳೆ ವಸತಿ ಇಲಾಖೆಯ ಲ್ಲಿನ ಮನೆಗಳ ಹಂಚಿಕೆ ಲಂಚದ ಬಗ್ಗೆ ಪಾಟೀಲರು ವಿವರಿಸಿದ್ರು. ತಮ್ಮ ಮಾತುಗಳನ್ನು ಸಮರ್ಥಿಸಿಕೊಂಡಿರುವ ಪಾಟೀಲ್, ಮನೆ ನೀಡುವಂತೆ ಸಚಿವರಿಗೆ ಪತ್ರ ನೀಡಿದೆ ಆದರೆ ಸಚಿವರು ಮನೆ ಕೊಡಲಿಲ್ಲ,ಗ್ರಾಮಪಂಚಾಯ್ತಿ ಅಧ್ಯಕ್ಷರು ಲೆಟರ್ ಕೊಟ್ರೆ ಮನೆ ಕೊಡ್ತಾರೆ. ನಾವು ಶಾಸಕರಾಗಿ ಏಕಿರಬೇಕು.ಪ್ರಕರಣದ ಬಗ್ಗೆ ಸಿಎಂ,ಡಿಸಿಎಂ,ಸಚಿವರ ಬಗ್ಗೆ ಚೆರ್ಚಿಸಲಿಲ್ಲ. ಸರ್ಕಾರ- ಪಕ್ಷಕ್ಕೆ ಮುಜುಗರವನ್ನೂ ತಂದಿಲ್ಲ.ಮುಂದೆ ಆಗಬಹುದಾದ ಪ್ರಮಾದದಿಂದ ಸರ್ಕಾರವನ್ನ ಎಚ್ಚರಿಸಿದ್ದೆನ್ನಷ್ಟೇ.ಇದನ್ನೇ ಕೆಲವರು ಬೇರೆ ಬೇರೆ ರೀತಿ ತಿಳಿದುಕೊಂಡ್ರು.ಸಿಎಂ,ಡಿಸಿಎಂ ಇಬ್ರೂ ಕರೆದು ಮಾತನಾಡಿದ್ರು.ಅವರು ಭರವಸೆ ಕೊಟ್ಟಿದ್ದಾರೆ. ಇದನ್ನ ಹೊರತುಪಡಿಸಿ ಬೇರೇನಿಲ್ಲ ಅಂತ ವಿವರಿಸಿದ್ರು. ಅನುದಾನದ ಸಮಸ್ಯೆ ಕೆಲವು ಗೊಂದಲಗಳ ಬಗ್ಗೆಯೂ ಪಾಟೀಲರು ಪ್ರಸ್ತಾಪಿಸಿದ್ರು. ಸಮಸ್ಯೆ ಸರಿಪಡಿಸ್ತೇವೆ, ಸರ್ಕಾರದ ವಿರುದ್ಧ ಮತ್ತೆ ಧ್ವನಿ ಎತ್ತಬೇಡಿ ಎಂದು ಸುರ್ಜೇವಾಲಾ ತಾಕೀತು ಮಾಡಿದ್ದಾರೆ.
ಬಂಗಾರಪೇಟೆ ಶಾಸಕ ನಾರಾಯಣಸ್ವಾಮಿ ಗ್ಯಾರೆಂಟಿಗಳಿಂದ ಜನರಿಗೆ ಒಳ್ಳೆಯದಾಗಿದೆ.ಗ್ಯಾರಂಟಿಗೆ ಹೆಚ್ಚಿನ ಹಣ ವಿನಿಯೋಗ ಆಗ್ತಿದೆ ಶಾಸಕರ ಅನುದಾನಕ್ಕೆ ಕಡಿತವಾಗಿದೆ.ಕೆಲವು ಸಚಿವರು ಅಧಿಕಾರಿಗಳ ಹೊಂದಾಣಿಕೆಯಿಂದ ಸರ್ಕಾರಕ್ಕೆ ಕೆಟ್ಟ ಹೆಸರು ಬರ್ತಿದೆ.ನನಗೆ ನೀನು.ನಿನಗೆ ನಾನು ಎನ್ನವಂತಿದ್ದರ ಕಷ್ಟಸಾಧ್ಯವೆಂದರು.
ಇದೇ ವೇಳೆ ನಾನು ಮೂರು ಭಾರಿ ಶಾಸಕನಾಗಿದ್ದು ಸಂಪುಟ ಪುನಾರಚನೆ ವೇಳೆ ತಮ್ಮನ್ನ ಪರಿಗಣಿಸುವಂತೆ ಬೇಡಿಕೆ ಇಟ್ಟಿದ್ದಾರೆ.ಇದನ್ನ ವರಿಷ್ಠರ ಮುಂದಿಡುವುದಾಗಿ ಸುರ್ಜೇವಾಲಾ ನೋಟ್ ಮಾಡಿಕೊಂಡಿದ್ದಾರೆ.ಇನ್ನು ಪ್ರದೀಪ್ ಈಶ್ವರ್ ತಾವು ಕ್ಷೇತ್ರದಲ್ಲಿ ಮಾಡಿರುವ ಸಾಧನೆಯ ಬಗ್ಗೆ ಪ್ರಸ್ತಾಪಿಸಿದ್ದಾರೆ. ಜನಸಾಮಾನ್ಯರಿಗಾಗಿ ಕೆಲವು ಸುಧಾರಣೆಗಳು, ಸ್ವಂತ ಹಣದಿಂದ ಯೋಜನೆ ತಂದಿರುವುದಾಗಿ ವಿವರಿಸಿದ್ದಾರೆ. ಇದಕ್ಕೆ ಸುರ್ಜೇವಾಲಾ ಅಭಿನಂದಿಸಿದ್ದಾರೆಂಬ ಮಾಹಿತಿ ಹೊರಬಿದ್ದಿವೆ.
ಇದನ್ನೂ ಓದಿ: ಮೆಹಂದಿ ಕೇವಲ ಮೇಕಪ್ ಅಲ್ಲ..ನಿಮ್ಮ ಅದೃಷ್ಟವನ್ನೇ ಬದಲಾಯಿಸಲಿದೆ ಈ ಮೆಹಂದಿ ವಿನ್ಯಾಸ..!
ಇನ್ನು ಕೆಜಿಎಫ್ ಶಾಸಕಿ ರೂಪಾ ಶಶಿಧರ್ ಹಾಗೂ ಬಾಗೇಪಲ್ಲಿ ಶಾಸಕ ಸುಬ್ಬಾರೆಡ್ಡಿ,ಗೌರಿಬಿದನೂರು ಪಕ್ಷೇತರದ ಶಾಸಕ ಪುಟ್ಟಸ್ವಾಮಿ ಗೌಡ ಅನುದಾನ ಹೆಚ್ಚಳಕ್ಕೆ ಮನವಿ ಮಾಡಿದ್ದಾರೆ. ಕೋವಿಡ್ ನಂತರದಲ್ಲಿ ತಾವು ಎದುರಿಸಿದ ಯಾತನೆ, ಜನಸಾಮಾನ್ಯರಿಗೆ ಸ್ಪಂದಿಸಿದ್ದು, ಎಲ್ಲದಕ್ಕೂ ಕಷ್ಟವಾಯ್ತು.ಗ್ಯಾರೆಂಟಿಗಳಿಂದ ಜನರಿಗೆ ಅನುಕೂಲ ಆಗಿದೆ.ನಮಗೂಲಾಭ ವಾಗಿದೆ.ಆದರೆ ಜನಸಾಮಾನ್ಯರಿಗೆ ನಾವು ಚುನಾವಣೆ ಪೂರ್ವದಲ್ಲಿ ಹಲವು ಭರವಸೆ ಕೊಟ್ಟಿದ್ದು, ಅವುಗಳನ್ನ ಈಡೇರಿಸ ಬೇಕಾಗುತ್ತದೆ.ಅದಕ್ಕೆ ಸಂಪನ್ಮೂಲವೂ ಬೇಕಾಗುತ್ತದೆ. ಹೀಗಾಗಿ ಅನುದಾನವನ್ನ ಸ್ವಲ್ಪ ಹೆಚ್ಚು ಮಾಡಿದರೆ ಉತ್ತಮ ಎಂದು ಅಭಿಪ್ರಾಯ ಹೊರ ಹಾಕಿದ್ದಾರೆ.ಜೊತೆಗೆ ಸರ್ಕಾರ ಪಕ್ಷದ ಮಟ್ಟದಲ್ಲಿ ಕೆಲವು ಗೊಂದಲಗಳು ಇದ್ದು ಅದನ್ನ ಸರಿಪಡಿಸುವಂತೆ ಮನವಿ ಮಾಡಿದ್ದಾರೆಂಬ ಮಾಹಿತಿಗಳಿವೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ