Before marriage tips: ಲೈಂಗಿ*ಕತೆಯ ಬಗ್ಗೆ ನಮ್ಮ ಸಮಾಜದಲ್ಲಿ ಚಿತ್ರ-ವಿಚಿತ್ರ ಕಲ್ಪನೆಗಳಿವೆ. ಮದುವೆಗೂ ಮೊದಲು ದೈಹಿಕ ಸಂಬಂಧದ ಬಗ್ಗೆ ಕೇಳಿದರೆ ಬಹುತೇಕರು ಆಶ್ಚರ್ಯಪಡಬಹುದು. ಮದುವೆಗೂ ಮುನ್ನ ದೈಹಿಕ ಸಂಬಂಧ ಬೆಳೆಸುವುದು ತಪ್ಪೇ? ಅನ್ನೋ ಪ್ರಶ್ನೆ ಅನೇಕರಲ್ಲಿ ಇರುತ್ತದೆ. ಮದುವೆಯ ಮೊದಲು ದೈಹಿಕ ಸಂಬಂಧದ ಬಗ್ಗೆ ನೋಡುವ ದೃಷ್ಟಿಕೋನಗಳು ಬಹಳಷ್ಟು ಭಿನ್ನವಾಗಿರುತ್ತವೆ. ಇದು ಸಂಸ್ಕೃತಿ, ಹಿನ್ನೆಲೆ, ನಂಬಿಕೆಗಳು, ಧರ್ಮ, ಅನುಭವ ಮತ್ತು ಪಾಲನೆಯನ್ನೂ ಸಹ ಒಳಗೊಂಡಿರುತ್ತದೆ. ಕೆಲವು ಜನರು ದೈಹಿಕ ಸಂಬಂಧ ಅಥವಾ ಪ್ರಣಯವನ್ನ ಪವಿತ್ರವೆಂದು ನೋಡುತ್ತಾರೆ. ಹೀಗಾಗಿ ಸರಿಯಾದ ಸಂಗಾತಿಯೊಂದಿಗೆ ಮತ್ತು ಸರಿಯಾದ ಸಮಯದಲ್ಲಿ ಅದು ಪರಿಪೂರ್ಣವಾಗಬೇಕೆಂದು ಅವರು ಬಯಸುತ್ತಾರೆ.
ಮತ್ತೊಂದೆಡೆ ಇತರರು ತಮ್ಮ ಆತ್ಮವನ್ನು ತಮ್ಮ ಲೈಂಗಿ*ಕ ಸಂಗಾತಿಯೊಂದಿಗೆ ಒಂದುಗೂಡಿಸುವ ಅನುಭವ ಪಡೆಯುವ ತುರ್ತು ಪ್ರಚೋದನೆ ಹೊಂದಿರುತ್ತಾರೆ. ಅವರು ಮದುವೆಗೆ ಮೊದಲು ದೈಹಿಕ ಸಂಬಂಧಗಳನ್ನು ಅನ್ವೇಷಿಸುವಲ್ಲಿ ನಂಬುತ್ತಾರೆ. ಇದು ಒಬ್ಬ ವ್ಯಕ್ತಿಯನ್ನು ಚೆನ್ನಾಗಿ ತಿಳಿದುಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಅವರ ಹೊಂದಾಣಿಕೆಯನ್ನ ನಿರ್ಧರಿಸುತ್ತದೆ ಎಂದು ಹೇಳುತ್ತಾರೆ. ಕೆಲವು ವ್ಯಕ್ತಿಗಳು ಇದು ಮದುವೆಗೆ ಮೊದಲು ಅವರಿಗೆ ಸಾಕಷ್ಟು ಲೈಂಗಿ*ಕ ಅನುಭವವನ್ನು ನೀಡುತ್ತದೆ ಎಂದು ನಂಬುತ್ತಾರೆ. ಅನೇಕ ಧರ್ಮಗಳಲ್ಲಿ ಮದುವೆಗೆ ಮೊದಲು ಗೆಳತಿ/ಸಂಗಾತಿಯೊಂದಿಗಿನ ಪ್ರಣಯ ಅಥವಾ ದೈಹಿಕ ಸಂಬಂಧವನ್ನ ಅನುಮತಿಸುವುದಿಲ್ಲ. ಮದುವೆಗೆ ಮೊದಲು ದೈಹಿಕ ಸಂಬಂಧವು ಭಾವನಾತ್ಮಕವಾಗಿ, ಮಾನಸಿಕವಾಗಿ ಮತ್ತು ದೈಹಿಕವಾಗಿ ನಮ್ಮ ಮೇಲೆ ಪರಿಣಾಮ ಬೀರುತ್ತದೆ ಎಂದು ನಂಬಲಾಗಿದೆ.
ಮದುವೆಯ ಮೊದಲು ದೈಹಿಕ ಸಂಬಂಧದ ಬಗ್ಗೆ ಅನೇಕ ದೃಷ್ಟಿಕೋನಗಳಿವೆ. ಭಾರತದಲ್ಲಿ ಮದುವೆಗೆ ಮೊದಲು ದೈಹಿಕ ಸಂಬಂಧ ಹೊಂದುವುದು ಸಾಮಾನ್ಯವಾಗಿ ಸ್ವೀಕಾರಾರ್ಹವಲ್ಲ. ಆದರೆ ಕೆಲವು ಜನರು ಇದನ್ನು ವೈಯಕ್ತಿಕ ಆಯ್ಕೆ ಎಂದು ಪರಿಗಣಿಸುತ್ತಾರೆ. ಈ ವಿಷಯದಲ್ಲಿ ಧಾರ್ಮಿಕ ಮತ್ತು ಸಾಂಸ್ಕೃತಿಕ ನಂಬಿಕೆಗಳು ಸಹ ಪ್ರಮುಖ ಪಾತ್ರವಹಿಸುತ್ತವೆ. ಮದುವೆಯ ಮೊದಲು ದೈಹಿಕ ಸಂಬಂಧ ಹೊಂದುವುದರಿಂದ ಸಂಬಂಧದಲ್ಲಿ ಭಾವನಾತ್ಮಕ ಬಂಧಗಳು ಹೆಚ್ಚಾಗುತ್ತವೆ ಎಂದು ಕೆಲವು ಜನರು ಹೇಳುತ್ತಾರೆ. ಆದರೆ ಮತ್ತೆ ಕೆಲವರು ಲೈಂಗಿಕವಾಗಿ ಹರಡುವ ರೋಗಗಳ ಬಗ್ಗೆ ಆತಂಕ ವ್ಯಕ್ತಪಡಿಸುತ್ತಾರೆ.
ಮದುವೆಗೆ ಮುಂಚಿನ ದೈಹಿಕ ಸಂಬಂಧದ ಪರ ಮತ್ತು ವಿರುದ್ಧ ವಾದಗಳು
ಪರವಾದ ವಾದಗಳು
* ದೈಹಿಕ ಸಂಬಂಧದಿಂದ ದಂಪತಿಗಳು ಒಬ್ಬರಿಗೊಬ್ಬರು ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದು Marriage.com ಹೇಳುತ್ತದೆ.
* ದೈಹಿಕ ಅನ್ಯೋನ್ಯತೆಯು ಭಾವನಾತ್ಮಕ ಬಂಧಗಳನ್ನು ಬಲಪಡಿಸುತ್ತದೆ ಎಂದು ಮಾನಸಿಕ ಚಿಕಿತ್ಸಕರು ಹೇಳುತ್ತಾರೆ.
* ದಂಪತಿಗಳು ತಮ್ಮ ಲೈಂಗಿಕ ಅಗತ್ಯಗಳನ್ನು ಪರಸ್ಪರ ಹಂಚಿಕೊಳ್ಳಲು ಪ್ರೋತ್ಸಾಹ ನೀಡಲಾಗುತ್ತದೆ. ಇದರಿಂದ ಸಂಬಂಧ ಗಟ್ಟಿಯಾಗುತ್ತದೆ ಎಂದು ನಂಬಲಾಗಿದೆ.
ವಿರುದ್ಧವಾದ ವಾದಗಳು
* ಲೈಂಗಿಕವಾಗಿ ಹರಡುವ ರೋಗಗಳ ಭಯ ಇರುತ್ತದೆ ಎನ್ನುತ್ತಾರೆ ತಜ್ಞರು.
* ಕೆಲವು ಧರ್ಮಗಳಲ್ಲಿ ಮದುವೆಯ ಮೊದಲು ದೈಹಿಕ ಸಂಬಂಧವನ್ನು ಅನುಮತಿಸುವುದಿಲ್ಲ.
* ಮದುವೆಯ ನಂತರ ದೈಹಿಕ ಸಂಬಂಧಕ್ಕೆ ಹೋಲಿಸಿದರೆ, ಮದುವೆಗೆ ಮೊದಲು ದೈಹಿಕ ಸಂಬಂಧದಲ್ಲಿ ತೊಡಗಿಸಿಕೊಂಡಾಗ ಒತ್ತಡ ಹೆಚ್ಚಾಗಬಹುದು ಎಂದು ವರದಿಗಳು ಹೇಳುತ್ತವೆ.
ಇದನ್ನೂ ಓದಿ: ಈ ತರಕಾರಿ ಮಾತ್ರ ತಿಂದು ಕೇವಲ 3 ತಿಂಗಳಲ್ಲಿ 9 ಕೆಜಿ ತೂಕ ಇಳಿಸಿಕೊಂಡ ನಟಿ ಜ್ಯೋತಿಕಾ.!
ಒಟ್ಟಾರೆ ಮದುವೆಯ ಮೊದಲು ದೈಹಿಕ ಸಂಬಂಧ ಹೊಂದುವ ನಿರ್ಧಾರವು ವ್ಯಕ್ತಿಯೊಬ್ಬನಿಗೆ ಬಿಟ್ಟಿದ್ದು. ಇದು ಅವರವರ ವೈಯಕ್ತಿಕ ಆಯ್ಕೆಯಾಗಿರುತ್ತದೆ. ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಮೊದಲು ಎರಡೂ ಬದಿಗಳನ್ನು ಅರ್ಥಮಾಡಿಕೊಳ್ಳುವುದು ಮುಖ್ಯ ಎಂದು ಮಾನಸಿಕ ತಜ್ಞರು ಹೇಳುತ್ತಾರೆ.
(ಗಮನಿಸಿರಿ: ಇಲ್ಲಿ ನೀಡಲಾಗಿರುವ ಮಾಹಿತಿ ʼಸುಖಿ ದಾಂಪತ್ಯ ಜೀವನಕ್ಕೆ ಸಲಹೆಗಳುʼ ಅನ್ನೋದರ ಮಾಹಿತಿಯನ್ನು ಆಧರಿಸಿದೆ. ಇಲ್ಲಿ ನೀಡಲಾಗಿರುವ ಮಾಹಿತಿ ನಮ್ಮ ಸ್ವಂತದ್ದಲ್ಲ. Zee Kannada News ಇದಕ್ಕೆ ಹೊಣೆಯಾಗಿರುವುದಿಲ್ಲ.)
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ