PHOTOS

ಜ್ಯೋತಿಷಿಯ ಮೋಡಿಗೆ ಮರುಳಾಗಿ ಸ್ವಂತ ಗಂಡನಿಗೆ ಗುಡ್‌ ಬೈ ಹೇಳಲು ಮುಂದಾದ ಕನ್ನಡದ ಖ್ಯಾತ ನಟಿ..?

Nayanthara with astrologer: ಇತ್ತೀಚಿಗೆ ನಯನತಾರಾ ಅವರ ತಮ್ಮ ಗಂಡ ವಿಘ್ನೇಶ್‌ರೊಂದಿಗೆ ವಿಚ್ಚೇದನ ಕೊಡಲು ಮುಂದಾಗಿದ್ದಾರೆ ಎಂಬ ವದಂತಿಗಳು ಸೋಷಿಯಲ್‌ ಮೀಡಿಯಾಗಳಲ್ಲಿ ಹರಡಿದ್ದವು, ಇನ್ನೂ ಈ ವದಂತಿಗಳಿಗೆ ಪರೋಕ್ಷವಾಗಿ ಬಲ ನೀಡುವಂತೆ ನಟಿ ತಮ್ಮ ಇನ್‌ಸ್ಟಾಗ್ರಾಮ್‌ ಸ್ಟೋರಿಯಲ್ಲಿ ಇತ್ತೀಚಿಗೆ  ಹಾಕಿದ ಸ್ಕ್ರೀನ್ ಶಾಟ್ ನಿಂದ ಇದು ಅಕ್ಷರಶಃ ನಿಜ ಎನುವಂತೆ ಮೇಲ್ನೋಟಕ್ಕೆ ಕಾಣಿಸುತ್ತಿದೆ.
 

Advertisement
1/6

ಸ್ಟಾರ್ ನಟಿ ನಯನತಾರಾ ತನ್ನ ಗ್ಲಾಮರ್‌ ಮತ್ತು ನಟನೆಯಿಂದ ಅತೀವ ಅಭಿಮಾನಿಗಳನ್ನು ಗಳಿಸಿದ್ದಾರೆ, ಇನ್ನು ಇವರಿಗಿರುವ ಫ್ಯಾನ್‌ ಬೇಸ್‌ ಯಾವ ಸ್ಟಾರ್‌ ನಟನಿಂಗಿಂತಲೂ ಕಡಿಮೆ ಇಲ್ಲ.ಕೇವಲ ಸಿನಿಮಾ ವಿಷಯಗಳಲ್ಲಿ ಅಷ್ಟೇ ಅಲ್ಲದೆ ನಟಿ ತಮ್ಮ ವೈಯಕ್ತಿಕ ಜೀವನದಲ್ಲಿಯೂ ಕೂಡ ಸದಾ ಸುದ್ದಿಯಲ್ಲಿ ಇರುತ್ತಾರೆ. ಇನ್ನೂ ನಯಾನತಾರಾ ಮತ್ತು ನಿರ್ದೇಶಕ ವಿಘ್ನೇಷ್‌ ಜೋಡಿಯನ್ನು ನೋಡಿ ಅವರ ಫಾಲೋವರ್ಸ್‌ಗಳು ಹಾಡಿ ಹೊಗಳುತ್ತಾರೆ.

2/6

ಈ ಜೋಡಿ ಜೂನ್ 9, 2022 ರಂದು ವಿವಾಹವಾಹವಾಗಿದ್ದು, ಅವರಿಗೆ ಉಯಿರ್ ಮತ್ತು ಉಲಕಮ್ ಎಂಬ ಇಬ್ಬರು ಮಕ್ಕಳಿದ್ದಾರೆ. ಎಲ್ಲರಿಗೂ ಮಾದರಿಯಾಗಿದ್ದ ಈ ಸೆಲಬ್ರಿಟಿ ಜೋಡಿಯ ಜೀವನದಲ್ಲಿ ಈಗ ಬಿರುಗಾಳಿ ಎದ್ದಿದೆ. ನಾಯನಾತಾರಾ ಮತ್ತು ವಿಘ್ನೇಷ್‌  ಬೇರೆಯಾಗುತ್ತಿದ್ದಾರೆ ಎಂಬ ವದಂತಿಗಳು ಕೇಳಿಬರುತ್ತಿವೆ. ಸೋಷಿಯಲ್‌ ಮೀಡಿಯಾದಲ್ಲಿ ಈ ಸುದ್ದಿ ಹರಿದಾಡುತ್ತಿದೆ. ಕೆಲವು ದಿನಗಳ ಹಿಂದೆ ನಟಿ ತಮ್ಮ ಇನ್‌ಸ್ಟಾಗ್ರಾಮ್‌ ಸ್ಟೋರಿಯಲ್ಲಿ ಶಾಕಿಂಗ್‌ ವಿಚಾರಯೊಂದನ್ನ ಹಂಚಿಕೊಂಡಿದ್ದಾರೆ. "ಮದುವೆ ಒಂದು ತಪ್ಪು. ನನ್ನ ಗಂಡನ ಕೃತ್ಯಗಳಿಗೆ ನಾನು ಜವಾಬ್ದಾರಿ ತೆಗೆದುಕೊಳ್ಳುವ ಅಗತ್ಯವಿಲ್ಲ. ನನ್ನನ್ನು ಬಿಟ್ಟುಬಿಡಿ.  ನಿನ್ನಿಂದಾಗಿ ನಾನು ಈಗಾಗಲೇ ಸಾಕಷ್ಟು ನೋವು ಅನುಭವಿಸಿದ್ದೇನೆ" ಎಂಬ ಪಠ್ಯದ ಸ್ಕ್ರೀನ್‌ಶಾಟ್‌ನಲ್ಲಿ ಹಂಚಿಕೊಂಡಿದ್ದರು. ಇದನ್ನು ನೋಡಿದ ನೆಟ್ಟಿಗರು ಇದು ವಿಚ್ಛೇದನ ನೀಡುವುದು  ನಿಜವಿರಬಹುದೆಂದು ಮಾತನಾಡಿಕೊಳ್ಳುತ್ತಿದ್ದಾರೆ.

3/6

ಈ ವಿಷಯದ ಕುರಿತು ತಮಿಳು ಚಲನಚಿತ್ರ ಪತ್ರಕರ್ತ ಅಂತನಾನ್  ಮಾತನಾಡುತ್ತಿದ್ದಾರೆ. ಅವರು ತಮ್ಮ ಯೂಟ್ಯೂಬ್‌ ಚಾನಲ್‌ ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಇವರು ಹೇಳುವಂತೆ, ಈಗ ನಯನತಾರಾ ಜ್ಯೋತಿಷಿಯ ಹಿಡಿತಕ್ಕೆ ಸಿಲುಕಿದ್ದಾಳೆ. ನಟಿ ಪಳನಿ ಮತ್ತು ಇತರ ಸ್ಥಳಗಳಿಗೆ ಹೋದಾಗ ಯಾವಾಗಲೂ ಒಬ್ಬ ಎತ್ತರದ ವ್ಯಕ್ತಿಯ ಜೊತೆ ಇದ್ದದ್ದನ್ನು ಅವರು ಗಮನಿಸಿದ್ದಾರೆ.  ಅಷ್ಟೇ ಅಲ್ಲದೆ ನಯನತಾರಾ ಅವರ ಪೇಸ್ ಬುಕ್‌ ಅಕೌಂಟ್‌ನಲ್ಲಿಯೂ ಈತನೊಂದಿಗೆ ಇದ್ದ ಫೋಟೋಗಳನ್ನ ಹಂಚಿಕೊಂಡಿದ್ದಾರೆ.   

4/6

ಈ ಹಿಂದೆ ನಟ ಅಜಿತ್ ಕುಮಾರ್‌ಗೆ ವಿಪತ್ತು ಸಂಭವಿಸುತ್ತದೆ ಎಂದು ಇದೇ ಜೋತಿಷಿ  ಭವಿಷ್ಯ ನುಡಿದಿದ್ದರು. ಅದು ನಿಖರವಾಗಿ 18 ದಿನಗಳಲ್ಲಿ ಸಂಭವಿಸಿತು. ಅದೇ ರೀತಿ ನಯನತಾರಾಗೂ ಸಹ ಕೆಲವು ಕಂಟಕಗಳಿವೆ ಎಂದು ಹೇಳಿದ್ದಾರಂತೆ ಈ ಜ್ಯೋತಿಷಿ. 

5/6

ನಯನತಾರಾ ದಾಂಪತ್ಯ ಜೀವನದ ಕುರಿತು ಮುಂದೆ ಇವರಿಬ್ಬರ ನಡುವೆ ದೊಡ್ಡ ಜಗಳವಾಗುತ್ತದೆ ಮತ್ತು ಅನಾಹುತ ಸಂಭವಿಸಲಿದೆ ಎಂದು ಅವರು ಭವಿಷ್ಯ ನುಡಿದಿದ್ದಾರೆ. ಈ ಜೋತಿಷಿ ದೊಡ್ಡ ಸೆಲೆಬ್ರಿಟಿಗಳಿಗೆ  ಭವಿಷ್ಯ ಹೇಳುತ್ತಾರೆ.  ಆದರೆ ನಯನತಾರಾ ಅವರ ಜೀವನದಲ್ಲಿ ನಡೆಯುತ್ತಿರುವ ಅನೇಕ ವಿಷಯಗಳ ಹಿಂದೆ ಈ ಜ್ಯೋತಿಷಿ  ಇದ್ದಾರೆ  ಎಂಬ ಅನುಮಾನ ಬಲವಾಗಿ ಇದೆ ಎಂದು ಅಂತನಾನ್ ಹೇಳುತ್ತಾರೆ.  

6/6

ನಯನತಾರಾ ದೊಡ್ಡ ದೈವಭಕ್ತಿಯುಳ್ಳವಳಾಗಿದ್ದು, ಕ್ರಿಶ್ಚಿಯನ್ ಆಗಿದ್ದ ನಟಿ ನಂತರ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ ಎಂಬುವುದು ಎಲ್ಲರಿಗೂ ಗೊತ್ತಿರುವ ಸಂಗತಿ.  ಏತನ್ಮಧ್ಯೆ ನಯನತಾರಾ ಅಥವಾ ವಿಘ್ನೇಶ್ ಶಿವನ್ ಇಬ್ಬರೂ ತಮ್ಮ ವಿಚ್ಛೇದನದ ವದಂತಿಗಳಿಗೆ ಅಧಿಕೃತವಾಗಿ ಪ್ರತಿಕ್ರಿಯಿಸಿಲ್ಲ.





Read More