PHOTOS

ಬರೋಬ್ಬರಿ 30ವರ್ಷಗಳ ಬಳಿಕ ಶನಿಯಿಂದ ವಿಶೇಷ ದಶಾಂಕ ಯೋಗ, ಈ ರಾಶಿಯವರಿಗೆ ಮಣ್ಣೂ ಹೊನ್ನಾಗುವ ಸಮಯ

Dashank Yog: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶನಿ ಮಹಾತ್ಮ ಕೇವಲ ಕೆಟ್ಟ ಫಲಗಳನ್ನು ಮಾತ್ರ ನೀಡುವುದಿಲ್ಲ. ಶುಭ ಫಲಗಳನ್ನು ಸಹ ನೀಡುತ್ತಾರೆ. ಜೀವನದಲ್ಲಿ ಸಾಡೇಸಾತಿಯಿಂದ ಕಾಡುವ ಶನಿ ದೇವ ಶುಭವಾಗಿದ್ದಾಗ ಅಷ್ಟೈಶ್ವರ್ಯವನ್ನು ಸಹ ಕರುಣಿಸುತ್ತಾನೆ. 

Advertisement
1/6
ಶನಿ ಶುಕ್ರರ ಸಂಯೋಗ
ಶನಿ ಶುಕ್ರರ ಸಂಯೋಗ

ಪ್ರಸ್ತುತ, ಮೀನ ರಾಶಿಯಲ್ಲಿರುವ ಕರ್ಮಫಲದಾತ ಶನಿ ಮಹಾತ್ಮ ಹಾಗೂ ಐಷಾರಾಮಿ ಜೀವನದ ಅಂಶ ಶುಕ್ರ ಇಬ್ಬರೂ ಇತ್ತೀಚೆಗೆಪರಸ್ಪರ 36ಡಿಗ್ರಿಗಳ  ಕೋನೀಯ ಸ್ಥಾನದಲ್ಲಿ  ಸಂಧಿಸಿದ್ದಾರೆ. ಇದರಿಂದಾಗಿ ವಿಶೇಷ ದಶಾಂಕ ಯೋಗ ರಚನೆಯಾಗಿದೆ. 

2/6
ದಶಾಂಕ ಯೋಗ ಪ್ರಭಾವ
ದಶಾಂಕ ಯೋಗ ಪ್ರಭಾವ

ಮೂವತ್ತು ವರ್ಷಗಳ ಬಳಿಕ ಶನಿ ಶುಕ್ರರ ವಿಶೇಷ ಸಂಯೋಗದಿಂದ ನಿರ್ಮಾಣವಾಗಿರುವ ದಶಾಂಕ ಯೋಗದ ಪ್ರಭಾವದಿಂದಾಗಿ ಕೆಲವು ರಾಶಿಯವರ ಬದುಕಿನಲ್ಲಿ ಶನಿ ಶುಕ್ರರ ಮಹಾದಶ ಆರಂಭವಾಗಲಿದ್ದು ಇದರಿಂದ ದಿಢೀರ್ ಧನಲಾಭ, ಕಷ್ಟದ ದಿನಗಳು ಕಳೆದು ಆಚ್ಛೇದಿನ್ ಆರಂಭವಾಗಿದೆ. ಅಂತಹ ಅದೃಷ್ಟದ ರಾಶಿಗಳೆಂದರೆ... 

3/6
ಮಿಥುನ ರಾಶಿ
ಮಿಥುನ ರಾಶಿ

ಶನಿ ಶುಕ್ರರಿಂದ ರಚನೆಯಾಗಿರುವ ದಶಾಂಕ ಯೋಗವು ಈ ರಾಶಿಯವರಿಗೆ ಹಲವು ಆಯಾಮಗಳಲ್ಲಿ ಶುಭ ಫಲಿತಾಂಶಗಳನ್ನು ನೀಡಲಿದೆ. ಉದ್ಯೋಗ ಸ್ಥಳದಲ್ಲಿ ಬಡ್ತಿ ಸಂಭವವಿದ್ದು ಮಹತ್ವದ ಜವಾಬ್ದಾರಿ ಹೆಗಲೇರಬಹುದು. ವ್ಯವಹಾರದಲ್ಲಿ ನಿಮ್ಮ ಸ್ಮಾರ್ಟ್ ವರ್ಕ್ ನಿಂದಾಗಿ ಬಂಪರ್ ಆದಾಯವನ್ನು ಗಳಿಸುವಿರಿ. 

4/6
ಕರ್ಕಾಟಕ ರಾಶಿ
ಕರ್ಕಾಟಕ ರಾಶಿ

ಶನಿ ಶುಕ್ರರಿಂದ ನಿರ್ಮಾಣವಾಗಿರುವ ದಶಾಂಕ ಯೋಗವು ಈ ರಾಶಿಯವರ ಬದುಕಿನಲ್ಲಿ ಭೌತಿಕ ಸುಖ-ಸೌಕರ್ಯಗಳನ್ನು ಹೆಚ್ಚಿಸಲಿದೆ. ವೃತ್ತಿಪರರಿಗೆ ಕೆಲಸದ ಒತ್ತಡ ಹೆಚ್ಚಾಗಬಹುದು. ಆದರೂ, ನಿಮ್ಮ ಕೆಲಸಗಳಿಗೆ ಸೂಕ್ತ ಮನ್ನಣೆ ದೊರೆಯಲಿದೆ. 

5/6
ಕನ್ಯಾ ರಾಶಿ
ಕನ್ಯಾ ರಾಶಿ

ದಶಾಂಕ ಯೋಗದಿಂದ ಈ ರಾಶಿಯವರಿಗೆ ಹೊಸ ಯೋಜನೆಗಳಲ್ಲಿ ಭಾರೀ ಯಶಸ್ಸು ದೊರೆಯಲಿದೆ. ಜೀವನದಲ್ಲಿ ಪ್ರಗತಿಯ ಹಾದಿಗಳು ತೆರೆಯಲಿವೆ. ವೃತ್ತಿ ರಂಗದಲ್ಲಿ ಶುಭ ಫಲಗಳನ್ನು ನಿರೀಕ್ಷಿಸಬಹುದು. ಆದಾಯವೂ ಅಧಿಕವಾಗಲಿದ್ದು ಹಣಕಾಸಿನ ಸ್ಥಿತಿ ಮೊದಲಿಗಿಂತ ಹೆಚ್ಚು ಸುಧಾರಿಸಲಿದೆ. 

6/6
ಕುಂಭ ರಾಶಿ
ಕುಂಭ ರಾಶಿ

ಶನಿ ಶುಕ್ರರಿಂದ ರೂಪುಗೊಂಡಿರುವ ದಶಾಂಕ ಯೋಗವು ಈ ರಾಶಿಯವರಿಗೆ ವಿದೇಶ ವ್ಯಾಸಂಗ, ವ್ಯವಹಾರಕ್ಕೆ ಸಂಬಂಧಿಸಿದಂತೆ ಶುಭದಾಯಕವಾಗಿದೆ. ಉದ್ಯೋಗ ರಂಗದಲ್ಲಿ ಭಾಗ್ಯದ ಬಾಗಿಲುಗಳು ತೆರೆಯಲಿವೆ. ಕೆಲಸದಲ್ಲಿ ಕಠಿಣ ಪರಿಶ್ರಮದ ಸಂಪೂರ್ಣ ಫಲವನ್ನು ಪಡೆಯುವಿರಿ. 

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.  





Read More