PHOTOS

ಲಕ್ಷಾಂತರ ಸರ್ಕಾರಿ ನೌಕರರಿಗೆ ಆಘಾತ !8ನೇ ವೇತನ ಆಯೋಗದ ಬಗ್ಗೆ ಹೊರ ಬಿತ್ತು ಹೊಸ ಮಾಹಿತಿ

ಬೆಂಗಳೂರು :ಕೇಂದ್ರ ಸರ್ಕಾರವು ಈ ವರ್ಷದ ಜನವರಿಯಲ್ಲಿ 8ನೇ ವೇತನ ಆಯೋಗವನ್ನು ಅನುಮೋದಿಸಿತ್ತು. ನಂತರ ಆಯೋಗದ ಸದಸ್ಯರ ಕೆಲಸದ ಆರಂಭಕ್ಕೆ ಸಂಬಂಧಿಸಿದ ನಿಯಮಗಳು (TOR) ಮತ್ತು ವಿಧಾನಗಳನ್ನು ಅಂತಿಮಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚೆ ಕೂಡಾ ಪ್ರಾರಂಭಿಸಲಾಯಿತು. 

Advertisement
1/5
ಏನಿದು ಹೊಸ ಮಾಹಿತಿ
ಏನಿದು ಹೊಸ ಮಾಹಿತಿ

ಕೇಂದ್ರ ಸರ್ಕಾರವು ಈ ವರ್ಷದ ಜನವರಿಯಲ್ಲಿಯೇ 8ನೇ ವೇತನ ಆಯೋಗವನ್ನು ಅನುಮೋದಿಸಿತ್ತು.ಇದಾದ ಬಳಿಕ ಆಯೋಗದ ಸದಸ್ಯರ ಕೆಲಸದ ಆರಂಭಕ್ಕೆ ಸಂಬಂಧಿಸಿದ ನಿಯಮಗಳು ಮತ್ತು ವಿಧಾನಗಳನ್ನು ಅಂತಿಮಗೊಳಿಸುವ ಬಗ್ಗೆ  ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚೆ ಪ್ರಾರಂಭಿಸಲಾಯಿತು. 

2/5
ಏನಿದು ಹೊಸ ಮಾಹಿತಿ
ಏನಿದು ಹೊಸ ಮಾಹಿತಿ

ಆದರೆ ಆಯೋಗದ ಅಧ್ಯಕ್ಷರು ಮತ್ತು ಇತರ ಸದಸ್ಯರ ನೇಮಕಾತಿಯನ್ನು ಸರ್ಕಾರ ಇನ್ನೂ ಅಧಿಕೃತವಾಗಿ ಘೋಷಿಸಿಲ್ಲ. ಕಳೆದ ತಿಂಗಳು ಈ ಬಗ್ಗೆ ಸುತ್ತೋಲೆ ಹೊರಡಿಸಲಾಗಿತ್ತು. ಅದರಲ್ಲಿ ಸರ್ಕಾರಿ ನಿಯೋಜನೆಯ ಆಧಾರದ ಮೇಲೆ ಸುಮಾರು 35 ಹುದ್ದೆಗಳನ್ನು ಭರ್ತಿ ಮಾಡುವ ಪ್ರಸ್ತಾವನೆಯ ಬಗ್ಗೆ ಮಾಹಿತಿ ನೀಡಲಾಗಿತ್ತು. ಈ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಸರ್ಕಾರಿ ನೌಕರರಿಂದ ಅರ್ಜಿಗಳನ್ನು ಕೂಡಾ ಆಹ್ವಾನಿಸಲಾಗಿತ್ತು.

3/5
ಏನಿದು ಹೊಸ ಮಾಹಿತಿ
ಏನಿದು ಹೊಸ ಮಾಹಿತಿ

ಮೇ ತಿಂಗಳು ಕೂಡಾ ಮುಗಿದಿದ್ದು, ಜನವರಿ 1, 2026 ರ ಗಡುವಿಗೆ ಕೇವಲ 7 ತಿಂಗಳುಗಳು ಉಳಿದಿವೆ. ಪ್ರಸ್ತುತ 7ನೇ ವೇತನ ಆಯೋಗದ ಅವಧಿ ಡಿಸೆಂಬರ್ 31, 2025 ರಂದು ಕೊನೆಗೊಳ್ಳುತ್ತದೆ. ಇಲ್ಲಿಯವರೆಗೆ ಸಾಧಿಸಿದ ಪ್ರಗತಿಯನ್ನು ಗಮನಿಸಿದರೆ, ಸರ್ಕಾರವು 8ನೇ ವೇತನ ಆಯೋಗವನ್ನು ಸಮಯಕ್ಕೆ ಸರಿಯಾಗಿ ಕಾರ್ಯಗತಗೊಳಿಸುವುದು ಕಷ್ಟ ಸಾಧ್ಯ.     

4/5
ಏನಿದು ಹೊಸ ಮಾಹಿತಿ
ಏನಿದು ಹೊಸ ಮಾಹಿತಿ

 ಹೀಗಾದಾಗ ಒಬ್ಬ ಉದ್ಯೋಗಿ ಜನವರಿ 1, 2026 ರಂದು ಅಥವಾ ನಂತರ ನಿವೃತ್ತರಾದರೆ,ಅಲ್ಲಿಯವರೆಗೆ 8ನೇ ವೇತನ ಆಯೋಗದ ಶಿಫಾರಸುಗಳು ಜಾರಿಗೆ ಬರದೇ ಹೋದರೆ ಅವನಿಗೆ ಪ್ರಯೋಜನ ಸಿಗುತ್ತದೆಯೇ? ಎನ್ನುವ ಪ್ರಶ್ನೆ ಎದುರಾಗುತ್ತದೆ. ಇದಕ್ಕೆ ಉತ್ತರ ಹೌದು.ಅಂತಹ ಎಲ್ಲಾ ಉದ್ಯೋಗಿಗಳು ಬಾಕಿ ರೂಪದಲ್ಲಿ ವೇತನ ಪರಿಷ್ಕರಣೆಯ ಪ್ರಯೋಜನವನ್ನು ಪಡೆಯುತ್ತಾರೆ.7ನೇ ವೇತನ ಆಯೋಗದ ಸಮಯದಲ್ಲಿಯೂ ಅನುಷ್ಠಾನ ಸುಮಾರು ಒಂದು ವರ್ಷ ವಿಳಂಬವಾಗಿತ್ತು. ಆದರೆ ಎಲ್ಲಾ ಉದ್ಯೋಗಿಗಳು ಮತ್ತು ಪಿಂಚಣಿದಾರರಿಗೆ ಬಾಕಿ ಹಣವನ್ನು ನೀಡಲಾಗಿತ್ತು.

5/5
ಏನಿದು ಹೊಸ ಮಾಹಿತಿ
ಏನಿದು ಹೊಸ ಮಾಹಿತಿ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟವು ಜನವರಿ 16, 2025 ರಂದು 8 ನೇ ವೇತನ ಆಯೋಗದ ರಚನೆಗೆ ಅನುಮೋದನೆ ನೀಡಿದೆ. ಸುಮಾರು 50 ಲಕ್ಷ ಕೇಂದ್ರ ನೌಕರರು ಮತ್ತು 65 ಲಕ್ಷ ಪಿಂಚಣಿದಾರರ ವೇತನ ಮತ್ತು ಪಿಂಚಣಿಗಳನ್ನು ನಿರ್ಧರಿಸುವುದು ಇದರ ಉದ್ದೇಶವಾಗಿದೆ.  





Read More