Bigg Boss contestants: ಬಿಗ್ ಬಾಸ್ ಸ್ಪರ್ಧಿಗಳ ಪಟ್ಟಿ ವೈರಲ್ ಆಗಿದೆ. ಹಿಂದಿನ ಸೀಸನ್‌ಗಳಂತೆ ಈ ಬಾರಿಯೂ ವಿಭಿನ್ನ ಕಲ್ಪನೆ ಮತ್ತು ವಿಶೇಷವಾದ ಬಿಗ್ ಬಾಸ್ ಸೆಟ್ ಇರಲಿದೆ.
Bigg Boss Contestant List Leaked : ಕಿರುತೆರೆಯ ಪ್ರಸಿದ್ಧ ರಿಯಾಲಿಟಿ ಶೋ ಬಿಗ್ ಬಾಸ್. ಇದೀಗ ಬಿಗ್ ಬಾಸ್ ಹೊಸ ಸೀಸನ್ ಆರಂಭಕ್ಕೆ ಸಿದ್ಧತೆ ಶುರುವಾಗಿದೆ. ಈ ಬಾರಿಯೂ ಆ ನಟನೇ ನಿರೂಪಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಈ ಮಧ್ಯೆ ಬಿಗ್ ಹೊಸ ಸೀಸನ್ ಸ್ಪರ್ಧಿಗಳ ಹೆಸರು ವೈರಲ್ ಆಗುತ್ತಿದೆ.
ಮಾಹಿತಿ ಪ್ರಕಾರ, ಬಿಗ್ ಬಾಸ್ ಹೊಸ ಸೀಸನ್ 2025 ರ ಆಗಸ್ಟ್ ಕೊನೆಯ ವಾರದಲ್ಲಿ ಪ್ರಾರಂಭವಾಗುವ ನಿರೀಕ್ಷೆಯಿದೆ. ಹಿಂದಿನ ಸೀಸನ್‌ಗಳಂತೆ ಈ ಬಾರಿಯೂ ವಿಭಿನ್ನ ಕಲ್ಪನೆ ಮತ್ತು ವಿಶೇಷವಾದ ಸೆಟ್ ಇರಲಿದೆ. ಇದರ ಜೊತೆಗೆ ಪ್ರೇಕ್ಷಕರನ್ನು ಆಕರ್ಷಿಸುವ ರೀತಿಯಲ್ಲಿ ಸ್ಪರ್ಧಿಗಳ ಆಯ್ಕೆ ನಡೆಯುತ್ತಿದೆ.
ಬಿಗ್ ಬಾಸ್ ಹೊಸ ಸೀಸನ್ ಸ್ಪರ್ಧಿಗಳು ಯಾರಾಗಬಹುದು ಎಂಬ ವಿಚಾರ ಈಗಾಗಲೇ ಸೋಷಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ. ಕೆಲವು ನಟ - ನಟಿಯರ ಹೆಸರುಗಳು ಕೇಳಿಬರುತ್ತಿವೆ. ಸಾಮಾಜಿಕ ಮಾಧ್ಯಮಗಳಲ್ಲಿ ಹಲವಾರು ಹೆಸರುಗಳು ಚರ್ಚೆಯಾಗುತ್ತಿವೆ.
ನಟಿ ಜ್ಯೋತಿ ರೈ ಬಿಗ್ ಬಾಸ್ ಹೊಸ ಸೀಸನ್ ಹೋಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಜ್ಯೋತಿ ರೈ ಬಿಗ್ ಬಾಸ್‌ಗೆ ಬರುತ್ತಾರೆಂಬ ಊಹಾಪೋಹಗಳು ಕಳೆದ ಸೀಸನ್ ಸಮಯದಲ್ಲೂ ಕೇಳಿ ಬಂದಿತ್ತು. ಆದರೆ ಜ್ಯೋತಿ ರೈ ಬಿಗ್ ಬಾಸ್‌ಗೆ ಬರಲಿಲ್ಲ. ಈ ಬಾರಿಯೂ ಮತ್ತೆ ಜ್ಯೋತಿ ರೈ ಹೆಸರು ಮುನ್ನೆಲೆಯಲ್ಲಿದೆ. ಆದರೆ ಇದನ್ನು ವಾಹಿನಿ ಆಗಲಿ, ಜ್ಯೋತಿ ರೈ ಅವರಾಗಲಿ ಖಾತರಿ ಪಡಿಸಿಲ್ಲ.
ಜ್ಯೋತಿ ರೈ ಅವರ ಜೊತೆ ಸಾಯಿಕಿರಣ್, ಯೂಟ್ಯೂಬರ್ ಶ್ರಾವಣಿ ವರ್ಮ, ಆರ್‌ಜೆ ರಾಜ್ ಮುಂತಾದವರು ಬಿಗ್ ಬಾಸ್ ತೆಲುಗು ಸೀಸನ್ 9 ರ ಸ್ಪರ್ಧಿಗಳಾಗಿ ಆಯ್ಕೆಯಾಗಿದ್ದಾರೆ ಎಂಬ ಪ್ರಚಾರ ನಡೆಯುತ್ತಿದೆ.
ತೇಜಸ್ವಿನಿ, ಕಲ್ಪಿಕಾ ಗಣೇಶ್, ಕಾವ್ಯ, ಟಿವಿ ಕಲಾವಿದೆ ನವ್ಯ ಸ್ವಾಮಿ, ಟಾಲಿವುಡ್ ನಟ ಛತ್ರಪತಿ ಶೇಖರ್, ಕಿರುತೆರೆ ನಟ ಮುಖೇಶ್ ಗೌಡ ಈ ಬಾರಿ ಬಿಗ್ ಬಾಸ್ ತೆಲುಗು ಸೀಸನ್ 9 ರ ಮನೆಯಲ್ಲಿ ಇರಬಹುದು ಎಂದು ಹೇಳಲಾಗುತ್ತಿದೆ.
ಬಿಗ್ ಬಾಸ್ ತೆಲುಗು ಸೀಸನ್ 9 ಶೀಘ್ರದಲ್ಲೇ ಶುರುವಾಗಲಿದೆ. ನಟ ಅಕ್ಕಿನೇನಿ ನಾಗಾರ್ಜುನ ಈ ಬಾರಿಯೂ ನಿರೂಪಣೆ ಮಾಡಲಿದ್ದಾರೆ. ಬಿಗ್ ಬಾಸ್ ಹೊಸ ಸೀಸನ್ ಸೆಟ್‌ಗಳು ಪೂರ್ಣಗೊಂಡ ನಂತರ ಅಧಿಕೃತವಾಗಿ ಬಿಗ್ ಬಾಸ್ 9 ಲಾಂಚ್ ದಿನಾಂಕವನ್ನು ಘೋಷಿಸುವ ಸಾಧ್ಯತೆಯಿದೆ.