Bigg Boss contestants: ಬಿಗ್ ಬಾಸ್ ಸ್ಪರ್ಧಿಗಳ ಪಟ್ಟಿ ವೈರಲ್ ಆಗಿದೆ. ಹಿಂದಿನ ಸೀಸನ್‌ಗಳಂತೆ ಈ ಬಾರಿಯೂ ವಿಭಿನ್ನ ಕಲ್ಪನೆ ಮತ್ತು ವಿಶೇಷವಾದ ಬಿಗ್ ಬಾಸ್ ಸೆಟ್ ಇರಲಿದೆ
ಬಿಗ್ ಬಾಸ್ ಕನ್ನಡ ಆರಂಭಕ್ಕೆ ಸಿದ್ಧತೆ ಶುರುವಾಗಿದೆ. ಆಗಸ್ಟ್ ಅಥವಾ ಸೆಪ್ಟೆಂಬರ್ ತಿಂಗಳಲ್ಲಿ ಬಿಗ್ ಬಾಸ್ ಕನ್ನಡ ಸೀಸನ್ 12 ಗ್ರ್ಯಾಂಡ್ ಓಪನಿಂಗ್ ನಿರೀಕ್ಷೆಯಿದೆ. ಈ ಬೆನ್ನಲ್ಲೇ ಕೆಲವು ಸ್ಪರ್ಧಿಗಳನ್ನು ಬಿಗ್ ಬಾಸ್ ಟೀಮ್ ಅಪ್ರೋಚ್ ಮಾಡಿದೆ ಎಂಬ ಸಂಗತಿ ಹರಿದಾಡುತ್ತಿದೆ.
ಬಿಗ್ ಬಾಸ್ ತಂಡದ ಕಡೆಯಿಂದ 4 ಜನರಿಗೆ ಫೋನ್ ಕಾಲ್ ಹೋಗಿದೆಯಂತೆ. ಹಾಗಾದರೆ, ಆ ಐವರು ಯಾರು? ಬಿಗ್ ಬಾಸ್ ನಲ್ಲಿ ಸ್ಪರ್ಧಿಸುವಂತೆ ಯಾರಿಗೆ ಈಗಾಗಲೇ ಕರೆ ಮಾಡಲಾಗಿದೆ ಎಂಬ ಮಾಹಿತಿ ಇಲ್ಲಿದೆ.
ಶ್ರೀರಸ್ತು ಶುಭಮಸ್ತು ಸೀರಿಯಲ್ ನಟ ಶ್ರೀ ಮಹಾದೇವ್ ಅವರಿಗೂ ಬಿಗ್ ಬಾಸ್ ಕಡೆಯಿಂದ ಕರೆ ಹೋಗಿದ್ಯಂತೆ ಎಂಬ ವದಂತಿ ಇದೆ. ಇದು ಅಂತೆ ಕಂತೆ ಮಾತು.
ಬಿಗ್ ಬಾಸ್ ಮನೆಗೆ ಬರಲು ಪ್ರಿಯಾಂಕಾ ಉಪೇಂದ್ರ ಅವರಿಗೆ ಬುಲಾವ್ ಹೋಗಿದೆ ಎಂಬ ಬಹುದೊಡ್ಡ ವದಂತಿ ಹಬ್ಬಿದೆ. ನಟ ಉಪೇಂದ್ರ ಮಡದಿ ನಟಿ ಪ್ರಿಯಾಂಕಾ ಅವರಿಗೆ ಬಿಗ್ ಬಾಸ್ ಆಫರ್ ಕೊಟ್ಟಿದ್ದಾರಾ? ಇದು ನಿಜವೋ ಸುಳ್ಳೋ ಗೊತ್ತಿಲ್ಲ. ಇಂಥದ್ದೊಂದು ಗುಲ್ಲು ಹಬ್ಬಿದೆ.
ಕಳೆದ ಕೆಲವು ವರ್ಷಗಳಿಂದ ಡಾ ಬ್ರೋ ಬಿಗ್ ಬಾಸ್‌ಗೆ ಬರಲಿದ್ದಾರೆ ಎಂಬ ವದಂತಿ ಇದೆ. ಡಾ ಬ್ರೋ ಅಲಿಯಾಸ್ ಗಗನ್ ಶ್ರೀನಿವಾಸ್ ಅವರಿಗೆ ಬಿಗ್ ಬಾಸ್ ಟೀಮ್ ಕಾಲ್ ಮಾಡಿದ್ರಾ? ಇದಕ್ಕೆ ಅವರು ಏನಂದ್ರು? ಎಲ್ಲವೂ ನಿಗೂಢವಾಗಿದೆ. ಆದರೆ ಡಾ ಬ್ರೋ ಬರಬಹುದು ಎಂಬ ಮಾತಿದೆ.
ಕೆಜಿಎಫ್ ಸಿನಿಮಾದ ಸದ್ದು ಮಾಡಿದ ನಟಿ ಅರ್ಚನಾ ಜೋಯಿಸ್ ಅವರಿಗೂ ಬಿಗ್ ಬಾಸ್‌ಗೆ ಕರೆಯಲಾಗಿದೆ ಎಂಬ ವದಂತಿ ಇದೆ. ಪಟ ಪಟ ಅಂತ ಮಾತಾಡುವ ಅರ್ಚನಾ ಜೋಯಿಸ್ ಯಂಗ್ ಬ್ಯೂಟಿಫುಲ್ ನಟಿ. ಇವರು ಈ ಬಾರಿ ಬಿಗ್ ಬಾಸ್‌ಗೆ ಬರ್ತಾರಾ ಕಾದು ನೋಡಬೇಕು.
ಈ ಮೇಲಿನ ನಾಲ್ವರಿಗೂ ಕರೆ ಮಾಡಲಾಗಿದೆ ಎಂಬುದು ಅಧಿಕೃತ ಮಾಹಿತಿ ಅಲ್ಲ. ಇದು ಕೇವಲ ಅಂತೆ ಕಂತೆಯ ಊಹಾಪೋಹ ಅಷ್ಟೇ.. ಬಿಗ್ ಬಾಸ್ ಶೋ ಶುರುವಾದ ಮೇಲೆಯೇ ಅಂತಿಮ ಸ್ಪರ್ಧಿಗಳ ಪಟ್ಟಿ ಸಿಗಲಿದೆ.