PHOTOS

ಮತ್ತೆ ಶುರುವಾಗ್ತಿದೆ ಬಿಗ್ ಬಾಸ್! ಕಿಚ್ಚನ ಸ್ಥಾನಕ್ಕೆ ಬರ್ತಿದ್ದಾರ 2 ರಾಜ್ಯಪ್ರಶಸ್ತಿ ಗೆದ್ದ ಕನ್ನಡದ ಖ್ಯಾತ ನಟ? ಸೀಸನ್‌ ಮುಕ್ತಾಯಗೊಂಡ ನಾಲ್ಕೇ ತಿಂಗಳಿಗೆ ಹೊಸ ಹೋಸ್ಟ್‌ ಹೆಸರು ರಿವೀಲ್‌!

Bigg Boss Kannada host: ಕನ್ನಡ ಬಿಗ್‌ ಬಾಸ್‌ ಸೀಸನ್‌ ೧೧ ಮುಕ್ತಾಯಗೊಂಡು ನಾಲ್ಕು ತಿಂಗಳುಗಳೇ ಕಳೆದಿದೆ. ಇನ್ನು ಈ ಸೀಸನ್‌ ಕಿಚ್ಚ ಸುದೀಪ್‌ ಅವರು ನಿರೂಪಣೆ ಮಾಡುವ ಕೊನೆಯ ಸೀಸನ್‌ ಎಂದು ಹೇಳಲಾಗುತ್ತಿದೆ.

Advertisement
1/9
ಬಿಗ್‌ ಬಾಸ್‌ ಸೀಸನ್‌ ೧೧
ಬಿಗ್‌ ಬಾಸ್‌ ಸೀಸನ್‌ ೧೧

ಕನ್ನಡ ಬಿಗ್‌ ಬಾಸ್‌ ಸೀಸನ್‌ ೧೧ ಮುಕ್ತಾಯಗೊಂಡು ನಾಲ್ಕು ತಿಂಗಳುಗಳೇ ಕಳೆದಿದೆ. ಇನ್ನು ಈ ಸೀಸನ್‌ ಕಿಚ್ಚ ಸುದೀಪ್‌ ಅವರು ನಿರೂಪಣೆ ಮಾಡುವ ಕೊನೆಯ ಸೀಸನ್‌ ಎಂದು ಹೇಳಲಾಗುತ್ತಿದೆ.  ಆ ಬಗ್ಗೆ ಕಿಚ್ಚ ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಕೂಡ ಶೇರ್‌ ಮಾಡಿದ್ದರು. ಆದರೆ ತಾನೇ ಮುಂದೆ ಸಹ ನಿರೂಪಣೆ ಮಾಡುತ್ತೇನೆ ಎಂಬ ಸುಳಿವನ್ನು ಒಂದಷ್ಟು ದಿನಗಳ ಬಳಿಕ ವೇದಿಕೆಯಲ್ಲಿ ನೀಡಿದ್ದರು. ಹೀಗಿರುವಾಗ ಸೀಸನ್‌ ೧೨ರ ಹೋಸ್ಟ್‌ ಯಾರಾಗ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ.

 

2/9
ಬಿಗ್‌ ಬಾಸ್‌ ಹೋಸ್ಟ್‌
ಬಿಗ್‌ ಬಾಸ್‌ ಹೋಸ್ಟ್‌

ಈ ಬೆನ್ನಲ್ಲೇ ಹೊಸದೊಂದು ವಿಚಾರ ಮುನ್ನೆಲೆಗೆ ಬಂದಿದ್ದು, ಕಿಚ್ಚನ ಬಳಿಕ ಸ್ಯಾಂಡಲ್ವುಡ್‌ನ ಪ್ರಖ್ಯಾತ ನಟನೊಬ್ಬ ಬಿಗ್‌ ಬಾಸ್‌ ಹೋಸ್ಟ್‌ ಮಾಡಲಿದ್ದಾರೆ ಎನ್ನಲಾಗಿದೆ.

 

3/9
ರಮೇಶ್‌ ಅರವಿಂದ್‌
ರಮೇಶ್‌ ಅರವಿಂದ್‌

ಆ ನಟ ಬೇರಾರು ಅಲ್ಲ, ಎರಡು ರಾಜ್ಯ ಪ್ರಶಸ್ತಿ ಗೆದ್ದಿರುವ ರಮೇಶ್‌ ಅರವಿಂದ್‌ ಅವರು. ಸದ್ಯ ಹರಿದಾಡುತ್ತಿರುವ ವದಂತಿ ಪ್ರಕಾರ ಸೀಸನ್‌ ೧೨ರ ಬಿಗ್‌ ಬಾಸ್‌ ಹೋಸ್ಟ್‌ ಆಗಿ ರಮೇಶ್‌ ಅವರು ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ವೀಕೆಂಡ್‌ ವಿತ್‌ ರಮೇಶ್‌ನಂತಹ ಅದ್ಭುತ ಕಾರ್ಯಕ್ರಮ ನಡೆಸಿಕೊಟ್ಟಿರುವ ರಮೇಶ್‌ ಅವರು ಸ್ಪಷ್ಟವಾಗಿ ನಿರೂಪಣೆ ಮಾಡುತ್ತಾರೆ. ಅಷ್ಟೇ ಅಲ್ಲದೆ, ತಮ್ಮ ಭಾಷಾ ಹಿಡಿತದಿಂದ ಜನರನ್ನು ಸೆಳೆಯುವ ತಾಕತ್ತು ಕೂಡ ಅವರಿಗೆ ಇದೆ.

 

4/9
ಸಂಭಾವನೆ
ಸಂಭಾವನೆ

ಇನ್ನೊಂದೆಡೆ ಸಂಭಾವನೆ ವಿಚಾರಕ್ಕೆ ಬಂದರೆ ಕಿಚ್ಚ ಸುದೀಪ್ 5 ವರ್ಷಕ್ಕೆ 15 ಕೋಟಿ ಪಡೆದಿದ್ದರು ಎಂದು ಸುದ್ದಿ ವೈರಲ್‌ ಆಗಿತ್ತು. ಹೀಗಿರುವಾಗ ಇಷ್ಟರ ಮಟ್ಟಿಗೆ ಸಂಭಾವನೆ ಪಡೆಯುವ ಅರ್ಹತೆ  ಸದ್ಯಕ್ಕಿರುವುದು ರಮೇಶ್ ಅರವಿಂದ್‌ಗೆ ಮಾತ್ರ ಎಂದು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ. ಆದರೆ ಈ ಆಫರ್‌ನ್ನು ರಮೇಶ್‌ ಒಪ್ಪಿಕೊಂಡಿದ್ದಾರಾ? ಅಥವಾ ಇಲ್ಲವಾ ಎಂಬ ಸ್ಪಷ್ಟನೆ ಇಲ್ಲ.

 

5/9
ಹ್ಯಾಟ್ರಿಕ್‌ ಹೀರೋ ಡಾ.ಶಿವರಾಜ್‌ ಕುಮಾರ್‌
ಹ್ಯಾಟ್ರಿಕ್‌ ಹೀರೋ ಡಾ.ಶಿವರಾಜ್‌ ಕುಮಾರ್‌

ಇವರ ಹೊರತಾಗಿ ಡಿವೈನ್‌ ಸ್ಟಾರ್‌ ರಿಷಬ್‌ ಶೆಟ್ಟಿ, ಹ್ಯಾಟ್ರಿಕ್‌ ಹೀರೋ ಡಾ.ಶಿವರಾಜ್‌ ಕುಮಾರ್‌, ಗೋಲ್ಡನ್‌ ಸ್ಟಾರ್‌ ಗಣೇಶ್‌, ರಿಯಲ್‌ ಸ್ಟಾರ್‌ ಉಪೇಂದ್ರ, ರಾಕಿಂಗ್‌ ಸ್ಟಾರ್‌ ಯಶ್‌ ಅವರ ಹೆಸರುಗಳು ಮುನ್ನೆಲೆಗೆ ಬಂದಿದೆ.  

 

6/9
ಉಪೇಂದ್ರ
ಉಪೇಂದ್ರ

ಉಪೇಂದ್ರ ತಮ್ಮ ನೇರಾನೇರ ನುಡಿಗಳಿಂದ ಜನಮನಗೆದ್ದಿದ್ದರೆ, ಗೋಲ್ಡನ್‌ ಸ್ಟಾರ್‌ ಗಣೇಶ್‌ ಅವರು ತಮ್ಮ ಮೃದು ಸ್ವಭಾವ ಮತ್ತು ವಿಶೇಷ ನಿರೂಪಣ ಶೈಲಿಯಿಂದಲೇ ಫೇಮಸ್‌ ಆದವರು. ಅಂದಹಾಗೆ ಗಣೇಶ್‌ ಅವರು ಈ ಹಿಂದೆ, ಗೋಲ್ಡನ್‌ ಮಿನಿಟ್‌ ಎಂಬ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಅನುಭವ ಹೊಂದಿದ್ದಾರೆ.

 

7/9
ಯಶ್
ಯಶ್

ಕಿಚ್ಚನ ರೀತಿಯೇ ನೇರಾನೇರ ಮಾತನಾಡುವ ಮತ್ತೋರ್ವ ನಟ ಯಶ್.‌ ಸದ್ಯ ಹೈ ಬಜೆಟ್‌ ಮತ್ತು ಪ್ಯಾನ್‌ ಇಂಡಿಯಾ ಸಿನಿಮಾಗಳನ್ನು ಮಾಡುತ್ತಿರುವ ಯಶ್‌, ಈ ಆಫರ್‌ನ್ನು ಒಪ್ಪಿಕೊಳ್ಳುವುದು ಅನುಮಾನ. ಇನ್ನೊಂದೆಡೆ ದರ್ಶನ್‌ ಹೆಸರು ಕೂಡ ಈ ಪಟ್ಟಿಯಲ್ಲಿ ಇದೆ. ಆದರೆ ಸದ್ಯ ಪ್ರಕರಣವೊಂದರಲ್ಲಿ ಸಿಲುಕಿಕೊಂಡಿರುವ ಕಾರಣ ಮತ್ತು ಅನಾರೋಗ್ಯದ ಹಿನ್ನೆಲೆಯಲ್ಲಿ ಅವರೂ ಸಹ ಈ ಆಫರ್‌ನ್ನು ರಿಜೆಕ್ಟ್‌ ಮಾಡುವ ಸಾಧ್ಯತೆ ಇದೆ.

 

8/9
ರಿಷಬ್‌ ಶೆಟ್ಟಿ
ರಿಷಬ್‌ ಶೆಟ್ಟಿ

ಇವರ ಹೊರತಾಗಿ, ಹೆಚ್ಚಾಗಿ ಸದ್ದು ಮಾಡಿರುವ ಹೆಸರು ರಿಷಬ್‌ ಶೆಟ್ಟಿಯವರದ್ದು. ಕಾಂತಾರ ಬಳಿಕ ಸಾಕಷ್ಟು ಪ್ರಖ್ಯಾತಿ ಗಳಿಸಿದ ಅವರು, ಬಿಗ್‌ ಬಾಸ್‌ಗೆ ಮುಂದಿನ ಹೋಸ್ಟ್‌ ಆಗಬಹುದು ಎಂದು ಊಹಿಸಲಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ರಿಷಬ್‌ ಅವರು ಒಂದಲ್ಲ ಒಂದು ಸಮಸ್ಯೆಯಲ್ಲಿ ಸಿಲುಕಿಕೊಳ್ಳುತ್ತಿದ್ದು, ಈ ಆಫರ್‌ನ್ನು ಒಪ್ಪಿಕೊಳ್ಳುತ್ತಾರಾ ಎಂಬುದು ಸದ್ಯದ ಪ್ರಶ್ನೆ.

 

9/9
ಸೂಚನೆ
ಸೂಚನೆ

ಸೂಚನೆ: ಈ ಸುದ್ದಿಯಲ್ಲಿ ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿರುವ ವದಂತಿಯ ಅನುಸಾರ ಬರೆಯಲಾಗಿದೆ. ಇದನ್ನು ಜೀ ಕನ್ನಡ ನ್ಯೂಸ್‌ ಖಚಿತಪಡಿಸುವುದಿಲ್ಲ.

 





Read More