Bipasha Basu Birthday Celebration In Maldives: ಮಾಲ್ಡೀವ್ಸ್‌ನ ಕೆಲವು ಸಚಿವರು ಲಕ್ಷದ್ವೀಪ ದ್ವೀಪಗಳ ಚಿತ್ರಗಳನ್ನು ಪೋಸ್ಟ್ ಮಾಡಿದ ನಂತರ ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತೀಯ ಸೆಲಬ್ರಿಟಿಗಳ ಮೇಲೆ ದ್ವೇಷಪೂರಿತ ಮತ್ತು ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದರು. ಇದಾದ ನಂತರ ಈ ವಿವಾದ ಸಾಕಷ್ಟು ಚರ್ಚೆಗೆ ಒಳಗಾಗಿದೆ. ಬಾಲಿವುಡ್ ಮತ್ತು ಕ್ರಿಕೆಟ್ ಸೆಲಬ್ರಿಟಿಗಳು ಬಾಯ್‌ಕಾಟ್ ಮಾಲ್ಡಿವ್ಸ್ ಅಭಿಮಾನಕ್ಕೆ ಬೆಂಬಲ ನೀಡಿದ್ದಾರೆ. ಇದರ ಬೆನ್ನಲ್ಲೇ ಇಡೀ ದೇಶವು ಮಾಲ್ಡೀವ್ಸ್ ವಿರುದ್ಧ ಒಂದಾಗಿದೆ. ಇದರ ನಡುವೆ ಬಾಲಿವುಡ್ ನಟಿ ಬಿಪಾಶಾ ಬಸು ಮಾಲ್ಡೀವ್ಸ್‌ನಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.
ಬಾಲಿವುಡ್ ಬ್ಯೂಟಿ ಬಿಪಾಶಾ ಬಸು ತನ್ನ ಪತಿ ಕರಣ್ ಸಿಂಗ್ ಗ್ರೋವರ್ ಮತ್ತು ಮಗಳು ದೇವಿ ಜೊತೆಗೆ ಇತ್ತೀಚೆಗೆ ಜನವರಿ 7 ರಂದು ತನ್ನ 45 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.
ಬೋಲ್ಡ್ ನಟಿ ಬಿಪಾಶಾ ಮಾಲ್ಡೀವ್ಸ್ ಬೀಚ್‌ಗಳಲ್ಲಿ ಸಕತ್ ಏಂಜಾಯ್ ಮಾಡುತ್ತಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ.
ನಟಿ ಬಿಪಾಶಾ ಇತ್ತೀಚೆಗೆ ಹುಟ್ಟುಹಬ್ಬ ಆಚರಣೆಯ ಫೋಟೋಗಳ ಸರಣಿಯನ್ನು ಹಂಚಿಕೊಂಡಿದ್ದು, ಇದರಿಂದ ಟ್ರೋಲರ್‌ಗಳಿಗೆ ಸಕತ್ ಕಂಟೆಂಟ್ ನೀಡುತ್ತಿದ್ದಾರೆ.
ಬಿಪಾಶಾ ಚಿತ್ರಗಳಿಗೆ ಇಷ್ಟು ದಿನ ಸಕತ್ ಆಗಿ ಕಾಮೆಂಟ್ ಮಾಡುತ್ತಿದ್ದ ನೆಟ್ಟಿಗರು, ಇದೀಗ ಈ ವಿಡಿಯೋ ಮತ್ತು ಫೋಟೋಗಳಿಗೆ ನೆಟಿಜನ್‌ಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬಾಲಿವುಡ್ ಸುಂದರಿ ಬಿಪಾಶಾ ಮಾಲ್ಡಿವ್ಸ್ ಸಚಿವರು ಪ್ರಧಾನಿ ಮೋದಿ ಮತ್ತು ಭಾರತಕ್ಕೆ ಮಾಡಿದ ಅವಮಾನದ ನಂತರವೂ ತಮ್ಮ ಪ್ರವಾಸಕ್ಕೆ ಮಾಲ್ಡೀವ್ಸ್ ಅನ್ನು ಆಯ್ಕೆ ಮಾಡಿದ್ದಕ್ಕಾಗಿ ಟ್ರೋಲ್ ಮಾಡಿದ್ದಾರೆ.
ಬಿಪಾಶಗೆ "ದಯವಿಟ್ಟು ಮಾಲ್ಡೀವ್ಸ್ ಅನ್ನು ಬಹಿಷ್ಕರಿಸಿ. ತಿಳುವಳಿಕೆಯುಳ್ಳ ನಾಗರಿಕರಾಗಿರಿ ಮತ್ತು ನಿಮ್ಮ ಸ್ವಂತ ದೇಶದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ತಿಳಿದುಕೊಳ್ಳಿ" ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, "ನಿಮ್ಮ ಸ್ವಂತ ಭಾರತೀಯ ಚಿತ್ರರಂಗವು ಮಾಲ್ಡೀವ್ಸ್ ಅನ್ನು ಬಹಿಷ್ಕರಿಸುತ್ತಿದೆ. ಆದರೆ, ನೀವು ಅದನ್ನು ಪ್ರಚಾರ ಮಾಡುತ್ತಿದ್ದೀರಿ. ನಿಮಗೆ ನಾಚಿಕೆಯಾಗಬೇಕು" ಎಂದು ಕಿಡಿಕಾರಿದ್ದಾರೆ.
ಮತ್ತೊಬ್ಬ ಬಳಕೆದಾರರು ನಟಿ ಬಿಪಾಶಾಗೆ, "ಮಾಲ್ಡೀವ್ಸ್ ಬೇಡ ಲಕ್ಷದ್ವೀಪಕ್ಕೆ ಹೋಗಿ" ಎಂದು ಕಾಮೆಂಟ್ ಮಾಡಿದ್ದಾರೆ. ಮೂರನೇ ಬಳಕೆದಾರರು, "ಮಾಲ್ಡಿವ್ಸ್ ಅನ್ನು ಪ್ರಚಾರ ಮಾಡುವುದನ್ನು ನಿಲ್ಲಿಸಿ. ಲಕ್ಷದ್ವೀಪದ ಬಗ್ಗೆ ಅವಹೇಳನಕಾರಿ ಕಾಮೆಂಟ್‌ಗಳಿಗೆ ಸಂಬಂಧಿಸಿದಂತೆ ಇಲ್ಲಿ ವಿವಾದ ನಡೆಯುತ್ತಿದೆ" ಎಂದು ಹೇಳಿದ್ದಾರೆ.