Bollywood Actresses Not Eligible To Vote In India: ಭಾರತದಲ್ಲಿ ಲೋಕಸಭಾ ಚುನಾವಣೆಯ ಕಾವು ಜೋರಾಗಿಯೇ ಇದ್ದು, ಹಲವಾರು ರಾಜಕೀಯ ಪಕ್ಷಗಳು ಮತದಾರರನ್ನು ಸೆಳೆಯಲು ಹರಸಾಹಸ ಪಡುತ್ತಿದ್ದಾರೆ. ಇದರ ನಡುವೆಯೇ ಹಲವು ಬಾಲಿವುಡ್‌ನ ಖ್ಯಾತ ಹೀರೋಯಿನ್‌ಗಳು ಭಾರತದಲ್ಲಿ ಮತ ಚಲಾಯಿಸಲು ಹಕ್ಕನ್ನು ಪಡೆದು ಕೊಂಡಿಲ್ಲ. ಇದರ ಪಟ್ಟಿ ಇಲ್ಲಿದೆ.
1. ಜಾಕ್ವೆಲಿನ್ ಫರ್ನಾಂಡಿಸ್ :- ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಹುಟ್ಟಿದ್ದು ಬಹ್ರೇನ್‌ನಲ್ಲಿ, ಈಕೆಯ ತಂದೆ ಶ್ರೀಲಂಕಾದವರಾದರೇ ಹಾಗೂ ತಾಯಿ ಮಲೇಷ್ಯಾ ಪ್ರಜೆಯಾಗಿದ್ದಾರೆ. ಇನ್ನೂ ಈ ನಟಿ ತಮ್ಮ ಕಾಲೇಜಿನ ವ್ಯಾಸಂಗವನ್ನು ಆಸ್ಟ್ರೇಲಿಯಾದಲ್ಲಿ ಮಾಡಿದವರು, ನಂತರ ಶ್ರೀಲಂಕಾಕ್ಕೆ ಹಿಂದಿರುಗಿದರು. ಬಳಿಕ ಬಾಲಿವುಡ್‌ಗೆ ಪ್ರವೇಶಿಸಿದರು.
2. ಆಲಿಯಾ ಭಟ್ :- ಬಾಲಿವುಡ್ ನ ಟಾಪ್ ನಟಿಯರಲ್ಲಿ ಒಬ್ಬರಾದ ಆಲಿಯಾ ಭಟ್ ಭಾರತೀಯ ಪ್ರಜೆಯಲ್ಲ. ಈ ನಟಿ ಬ್ರಿಟಿಷ್ ಪೌರತ್ವವನ್ನು ಹೊಂದಿದ್ದಾರೆ. ಏಕೆಂದರೆ ಆಕೆಯ ತಾಯಿ ಬರ್ಮಿಂಗ್ಹ್ಯಾಮ್ ನವರಾಗಿದ್ದು, ಆಲಿಯಾ ಕೂಡ ಅಲ್ಲಿಯೇ ಜನಿಸಿ್ದರು. ಆದರಿಂದ ಆಲಿಯಾ ಭಾರತದಲ್ಲಿ ಮತ ಚಲಾಯಿಸುವಂತಿಲ್ಲ.
3. ನೋರಾ ಫತೇಹಿ :- ಬಾಲಿವುಡ್ ನಟಿ ನೋರಾ ಫತೇಹಿ ಭಾರತದಲ್ಲಿ ತುಂಬಾ ಸಮಯದಿಂದ ಕೆಲಸ ಮಾಡುತ್ತಿದ್ದರೂ ಕೂಡ ಭಾರತದಲ್ಲಿ ಮತ ಹಾಕುವಂತಿಲ್ಲ. ಈಕೆ ಅಮೇರಿಕಾದ ಕೆನಡಾ ಪ್ರಜೆ ಆಗಿದ್ದಾರೆ. ಈ ನಟಿ ತಮ್ಮದೇ ಸ್ಟೈಲ್ ಡ್ಯಾನ್ಸ್ ಮೂಲಕ ಅಭಿಮಾನಿಗಳ ಮನಗೆದ್ದಿದ್ದಾರೆ.
4. ಸನ್ನಿ ಲಿಯೋನ್ :- ಬಾಲಿವುಡ್‌ನ ಮಾದಕತಾರೆ ಸನ್ನಿ ಲಿಯೋನ್ ಭಾರತದ ಹಲವಾರು ಸಿನಿಮಾಗಳಲ್ಲಿ ಕೆಲಸ ಮಾಡಿದ್ದರೂ ಕೂಡ ಈ ದೇಶದಲ್ಲಿ ಮತ ಹಾಕುವಂತಿಲ್ಲ. ಏಕೆಂದರೆ ಈ ನಟಿ ಕೂಡ ಕೆನಡಾದ ಪಾಸ್‌ಪೋರ್ಟ್ ಅನ್ನು ಹೊಂದಿದ್ದಾರೆ.
5. ಕತ್ರಿನಾ ಕೈಫ್ ಬಾಲಿವುಡ್ ನಟಿ ಕತ್ರಿನಾ ಕೈಫ್ ಹಲವಾರು ಸಿನಿಮಾಗಳಲ್ಲಿ ಅಭಿನಯಿಸಿ ಛಾಪು ಮೂಡಿಸಿದರೂ ಭಾರತದಲ್ಲಿ ಮತ ಚಲಾಯಿಸುವಂತಿಲ್ಲ. ಏಕೆಂದರೆ ಈ ನಟಿ ಹಾಂಗ್ ಕಾಂಗ್ನಲ್ಲಿ ಜನಿಸಿದರು. ಆದರೆ ಈಕೆ ಬ್ರಿಟಿಷ್ ಪೌರತ್ವವನ್ನೂ ಹೊಂದಿದ್ದಾರೆ.
6. ದೀಪಿಕಾ ಪಡುಕೋಣೆ ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ಮೂಲತಃ ಬೆಂಗಳೂರಿನವರಾದರೂ, ಈ ನಟಿ ಜನಿಸಿದ್ದು ಡೆನ್ಮಾರ್ಕ್‌ನ ಕೋಪನ್‌ಹೇಗನ್‌ನಲ್ಲಿ ಜನಿಸಿದರು. ಹಾಗೆಯೇ ಈ ನಟಿ ಭಾರತೀಯ ಪಾಸ್‌ಪೋರ್ಟ್ ಹೊಂದಿಲ್ಲದ ಕಾರಣ ಭಾರತದಲ್ಲಿ ಮತ ಹಾಕುವಂತಿಲ್ಲ.