Cheapest Recharge Plan: 2024ರ ಜುಲೈನಲ್ಲಿ ಖಾಸಗಿ ಟೆಲಿಕಾಂ ಕಂಪನಿಗಳು ರಿಚಾರ್ಜ್ ಬೆಲೆಗಳನ್ನು ಹೆಚ್ಚಿಸಿದ ಬಳಿಕ ಬಿಎಸ್‌ಎನ್‌ಎಲ್ ಗ್ರಾಹಕರ ಸಂಖ್ಯೆ ನಿರಂತರವಾಗಿ ಹೆಚ್ಚಾಗುತ್ತಿದೆ.
ಯುಗಾದಿ ಹೊಸ್ತಿಲಲ್ಲಿ ಬಿಎಸ್‌ಎನ್‌ಎಲ್ ಗ್ರಾಹಕರಿಗೆ ಗುಡ್ ನ್ಯೂಸ್ ನೀಡಿದೆ. ದುಬಾರಿ ರೀಚಾರ್ಜ್ ಯೋಜನೆಗಳ ಹೊರೆ ಇಳಿಸುವ ಉದ್ದೇಶದಿಂದ ಬಜೆಟ್ ಸ್ನೇಹಿ ದೀರ್ಘಾವಧಿಯ ಯೋಜನೆ ಪರಿಚಯಿಸಿರುವ ಬಿಎಸ್‌ಎನ್‌ಎಲ್ ಇದರಲ್ಲಿ ಹಲವು ಪ್ರಯೋಜನಗಳನ್ನು ಸಹ ನೀಡಿದೆ.
ಹೌದು, ದೇಶದಲ್ಲಿ ಶೀಘ್ರದಲ್ಲೇ 4ಜಿ ನೆಟ್‌ವರ್ಕ್ ವಿಸ್ತರಣೆಯನ್ನು ವೇಗಗೊಳಿಸಿರುವ ಬಿಎಸ್‌ಎನ್‌ಎಲ್ ಗ್ರಾಹಕರಿಗೆ ಕೈಗೆಟುವ ಬೆಲೆಯಲ್ಲಿ ಆಕರ್ಷಕ ರಿಚಾರ್ಜ್ ಪ್ಲಾನ್ ಬಿಡುಗಡೆ ಮಾಡಿದೆ.
ಬಿಎಸ್‌ಎನ್‌ಎಲ್ ಪರಿಚಯಿಸಿರುವ ಈ ಕೈಗೆಟುಕುವ ಬೆಲೆಯ ಪ್ರಿಪೇಯ್ಡ್ ಪ್ಲಾನ್ 160 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ. ಬಿಎಸ್‌ಎನ್‌ಎಲ್ ಅಗ್ಗದ ರಿಚಾರ್ಜ್ ಪ್ಲಾನ್ ಬೆಲೆ ₹ 997. ಎಂದರೆ ದಿನಕ್ಕೆ 7 ರೂ.ಗಿಂತಲೂ ಕಡಿಮೆ ಬೆಲೆಯಲ್ಲಿ ಲಭ್ಯವಿದೆ.
ಕೈಗೆಟುಕುವ ಮತ್ತು ಉತ್ತಮ ರೀಚಾರ್ಜ್ ಯೋಜನೆಯನ್ನು ಹುಡುಕುತ್ತಿರುವವರಿಗೆ ಬಿಎಸ್‌ಎನ್‌ಎಲ್ ಪರಿಚಯಿಸಿರುವ ಅಗ್ಗದ ಬೆಲೆಯ ಈ ಪ್ರಿಪೇಯ್ಡ್ ಪ್ಲಾನ್ ಹೆಚ್ಚು ಲಾಭದಾಯಕವಾಗಿದೆ.
ಬಿಎಸ್‌ಎನ್‌ಎಲ್ ₹ 997ರೂ. ಪ್ರಿಪೇಯ್ಡ್ ಪ್ಲಾನ್ ನಲ್ಲಿ ಗ್ರಾಹಕರು 160ದಿನಗಳವರೆಗೆಎಲ್ಲಾ ನೆಟ್‌ವರ್ಕ್ ಗಳಿಗೆ ಫ್ರೀ ಕಾಲಿಂಗ್, ನಿತ್ಯ 100 ಎಸ್ಎಂಎಸ್ ಹಾಗೂ ಒಟ್ಟು 320ಜಿಬಿ ಹೈ ಸ್ಪೀಡ್ ಡೇಟಾ ಎಂದರೆ ಪ್ರತಿದಿನ 2ಜಿಬಿ ಡೇಟಾ ಪ್ರಯೋಜನವನ್ನು ಪಡೆಯಲಿದ್ದಾರೆ.