BSNL: ಬಿಎಸ್‌ಎನ್‌ಎಲ್ ಹೊಸ ಆಫರ್ ಬಿಡುಗಡೆ ಮಾಡಿದ್ದು, ಈ ಮೂಲಕ ಖಾಸಗಿ ಟೆಲಿಕಾಂ ಕಂಪನಿಗಳ ನಿದ್ದೆಗೆಡಿಸಿದೆ.
ಮತ್ತೊಮ್ಮೆ ರಿಲಯನ್ಸ್ ಜಿಯೋ, ಏರ್ಟೆಲ್, ವಿಐ ಕಂಪನಿಗಳ ನಿದ್ದೆಗೆಡಿಸಿರುವ ಬಿಎಸ್‌ಎನ್‌ಎಲ್ ಹೊಸ ಆಕರ್ಷಕ ರಿಚಾರ್ಜ್ ಯೋಜನೆಯನ್ನು ಬಿಡುಗಡೆ ಮಾಡಿದೆ.
ಈ ಬಿಎಸ್‌ಎನ್‌ಎಲ್ ರಿಚಾರ್ಜ್ ಯೋಜನೆ ದೀರ್ಘಾವಧಿಯ ಪ್ರಿಪೇಯ್ಡ್ ಯೋಜನೆಯಾಗಿದ್ದು, ಒಮ್ಮೆ ರೀಚಾರ್ಜ್ ಮಾಡಿಸಿದರೆ ಒಂದು ವರ್ಷಕ್ಕಿಂತ ಹೆಚ್ಚಿನ ಕಾಲ ಮತ್ತೆ ರೀಚಾರ್ಜ್ ಮಾಡುವ ಚಿಂತೆಯೇ ಇರುವುದಿಲ್ಲ.
ಬಿಎಸ್ಎನ್ಎಲ್ ₹2,399 ರೀಚಾರ್ಜ್ ಪ್ಲಾನ್ ಅನ್ನು ಬಿಡುಗಡೆ ಮಾಡಿದೆ. ಇದಲ್ಲದೆ, ₹1,499 ರೀಚಾರ್ಜ್ ಪ್ಲಾನ್ ಕೂಡ ಬಿಡುಗಡೆ ಮಾಡಿದೆ.
ಬಿಎಸ್‌ಎನ್‌ಎಲ್ ₹2,399 ಪ್ರಿಪೇಯ್ಡ್ ಪ್ಲಾನ್ ಒಟ್ಟು 395 ದಿನಗಳು ಎಂದರೆ 13 ತಿಂಗಳ ದೀರ್ಘಾವಧಿಯ ಮಾನ್ಯತೆಯೊಂದಿಗೆ ಬರುತ್ತದೆ. ಇದರಲ್ಲಿ ಅನಿಯಮಿತ ಕರೆ, ಪ್ರತಿದಿನ 100 ಎಸ್ಎಂಎಸ್ ಜೊತೆಗೆ ನಿತ್ಯ 2ಜಿಬಿ ಡೇಟಾ ದೈನಂದಿನ ಮಿತಿ ಮುಗಿದ ಬಳಿಕ ಇಂಟರ್ನೆಟ್ ವೇಗ 40kbps ಗೆ ಇಳಿಯುತ್ತದೆ.
ಬಿಎಸ್‌ಎನ್‌ಎಲ್ ₹1,499 ಪ್ರಿಪೇಯ್ಡ್ ಪ್ಲಾನ್ 11 ತಿಂಗಳ ವ್ಯಾಲಿಡಿಟಿಯೊಂದಿಗೆ ಲಭ್ಯವಿದೆ. ಇದರಲ್ಲಿ ಅನಿಯಮಿತ ಕರೆ, ದಿನಕ್ಕೆ 100 ಎಸ್‌ಎಮ್‌ಎಸ್ ಸೌಲಭ್ಯ ಲಭ್ಯವಿದೆ. ಈ ರೀಚಾರ್ಜ್ ಯೋಜನೆಯಲ್ಲಿ ಒಟ್ಟು 24ಜಿಬಿ ಎಂದರೆ ದಿನಕ್ಕೆ 70MB ಡೇಟಾ ಸೌಲಭ್ಯವೂ ಸಿಗಲಿದೆ.