PHOTOS

ನಿಮಗೂ ಬಿಗ್‌ ಬಾಸ್‌ ಮನೆಗೆ ಹೋಗುವ ಆಸೆ ಇದೆಯೇ? ಹಾಗಿದ್ರೆ ಇಲ್ಲಿದೆ ಸುವರ್ಣಾವಕಾಶ, ಮಿಸ್ ​ಮಾಡ್ಕೋಬೇಡಿ!!

Bigg Boss Telugu Season 9: ಸಾಮಾನ್ಯವಾಗಿ ಬಿಗ್​ ಬಾಸ್​ ರಿಯಾಲಿಟಿ ಶೋಗೆ ಸೆಲೆಬ್ರಿಟಿಗಳು, ಬೇರೆ ಬೇರೆ ಕ್ಷೇತ್ರಗಳಲ್ಲಿ ಫೇಮಸ್​ ಆಗಿರುವ ಸ್ಟಾರ್​ಗಳನ್ನು ಕರೆಸಲಾಗುತ್ತದೆ. ತಾವೂ ಬಿಗ್‌ ಬಾಸ್‌ ಮನೆಗೆ ಹೋಗಬೇಕೆಂಬ ಆಸೆ ಅನೇಕ ಸಾಮಾನ್ಯ ಜನರಿಗೆ ಇರುತ್ತದೆ. ಸದ್ಯದಲ್ಲೇ ಬರಲಿರುವ ವೀಕ್ಷಕರ ನೆಚ್ಚಿನ ಬಿಗ್​ಬಾಸ್​ ಸೀಸನ್ 9ರ ರಿಯಾಲಿಟಿ ಶೋನಲ್ಲಿ ವಿಶೇಷತೆಯೊಂದು ಇರಲಿದೆ. ಈ ಬಾರಿ ಸೆಲೆಬ್ರಿಟಿಗಳ ಜೊತೆಗೆ ಸಾಮಾನ್ಯ ಜನರಿಗೂ ಸಹ ಬಿಗ್ ಬಾಸ್ ಮನೆಯೊಳಗೆ ಪ್ರವೇಶವಿರಲಿದೆಯಂತೆ. ಇದರ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ...

Advertisement
1/5

ಹೌದು, ನಿಮಗೂ ಬಿಗ್‌ ಬಾಸ್‌ ಮನೆಯೊಳಗೆ ಹೋಗುವ ಆಸೆ ಇದ್ದರೆ ಇಲ್ಲಿದೆ ನೋಡಿ ಸುವರ್ಣಾವಕಾಶ. ಈ ಚಾನ್ಸ್​ಅನ್ನ ನೀವು ಯಾವುದೇ ಕಾರಣಕ್ಕೂ ಮಿಸ್ ​ಮಾಡ್ಕೋಬೇಡಿ. ಈ ಬಾರಿ ಸೆಲೆಬ್ರಿಟಿಗಳ ಜೊತೆಗೆ ಸಾಮಾನ್ಯ ಜನರಿಗೂ ಬಿಗ್‌ ಮನೆ ಪ್ರವೇಶಕ್ಕೆ ಅವಕಾಶ ಸಿಗಲಿದೆ. ಈ ಬಗ್ಗೆ ಖುದ್ದು ಬಿಗ್ ಬಾಸ್ ಆಯೋಜಕರೇ ಅಧಿಕೃತವಾಗಿ ವಿಡಿಯೋವನ್ನು ಸೋಷಿಯಲ್​ ಮೀಡಿಯಾದಲ್ಲಿ ಬಿಡುಗಡೆ ಮಾಡಿದ್ದಾರೆ.

2/5

ಟಾಲಿವುಡ್‌ನ ನೆಚ್ಚಿನ ಶೋ ಬಿಗ್​ ಬಾಸ್ ಸೀಸನ್ 9 ಮತ್ತೆ ಬರುತ್ತಿದೆ. ಈ ರಿಯಾಲಿಟಿ ಶೋ ಈಗಾಗಲೇ 8 ಸೀಸನ್‌ಗಳನ್ನು ಯಶಸ್ವಿಯಾಗಿ ಪೂರೈಸಿದ್ದು, ಒಂಬತ್ತನೇ ಸೀಸನ್ ಸಹ ಶೀಘ್ರದಲ್ಲೇ ಬರಲಿದೆ ಎಂದು ಅಧಿಕೃತವಾಗಿ ಘೋಷಿಸಲಾಗಿದೆ. ಈ ಬಾರಿಯೂ ಹಿರಿಯ ನಟ ನಾಗಾರ್ಜುನ ಅಕ್ಕಿನೇನಿ ಅವರೇ ಈ ಕಾರ್ಯಕ್ರಮವನ್ನು ಆಯೋಜಿಸಲಿದ್ದಾರೆ. ‘ಈ ಬಾರಿ ಇದು ಚದುರಂಗವಲ್ಲ, ಯುದ್ಧ’ ಎಂದು ನಾಗಾರ್ಜುನ ಅವರು ಪಂಚ್ ಡೈಲಾಗ್ ಹೊಡೆದಿದ್ದಾರೆ. ಹೀಗಾಗಿ ಬಿಗ್ ಬಾಸ್‌ನ ಹೊಸ ಸೀಸನ್‌ ನೋಡಲು ವೀಕ್ಷಕರು ಕಾತರದಿಂದ ಕಾಯುತ್ತಿದ್ದಾರೆ. 

3/5

ಸದ್ಯ ಬಿಗ್ ಬಾಸ್ ಸ್ಪರ್ಧಿಗಳ ಆಯ್ಕೆ ಪ್ರಕ್ರಿಯೆಯೂ ವೇಗವಾಗಿ ನಡೆಯುತ್ತಿದೆ. ಈ ಮಧ್ಯೆ ಬಿಗ್ ಬಾಸ್ ಒಂದು ಸೆಲೆಬ್ರಿಟಿ ಶೋ ಎಂಬ ಮಾತು ಹೊರಗೆ ಕೇಳಿಬರುತ್ತಿದೆ. ಟಿವಿ ಸೆಲೆಬ್ರಿಟಿಗಳು, ಯೂಟ್ಯೂಬರ್‌ಗಳು ಮತ್ತು ಸಾಮಾಜಿಕ ಮಾಧ್ಯಮ ಪ್ರಭಾವಿಗಳನ್ನ ಇದರಲ್ಲಿ ಸ್ಪರ್ಧಿಗಳಾಗಿ ತೆಗೆದುಕೊಳ್ಳಲಾಗುತ್ತದೆ. ಹಿಂದಿನ ಕೆಲವು ಸೀಸನ್‌ಗಳಲ್ಲಿ ಸಾಮಾನ್ಯ ಜನರನ್ನೂ ಕರೆತರಲಾಗಿತ್ತು. ಇದೀಗ ಬಿಗ್ ಬಾಸ್ ತಂಡವು ಮತ್ತೊಮ್ಮೆ ಸಾಮಾನ್ಯ ಜನರಿಗೆ ಬಂಪರ್ ಆಫರ್ ನೀಡಿದೆ. ನೀವೂ ಸಹ ಬಿಗ್ ಬಾಸ್ ಸೀಸನ್ 9ರಲ್ಲಿ ಭಾಗವಹಿಸಬಹುದು ಎಂದು ಹೇಳುವ ವಿಡಿಯೋವನ್ನ ಬಿಡುಗಡೆ ಮಾಡಲಾಗಿದೆ.

4/5

ರಿಲೀಸ್​ ಆದ ಪ್ರೋಮೋದಲ್ಲಿ ನಟ ನಾಗಾರ್ಜುನ ಅವರು, ʼನೀವು ಇಷ್ಟು ವರ್ಷಗಳಿಂದ ಬಿಗ್ ಬಾಸ್ ಅನ್ನು ಪ್ರೀತಿಸುತ್ತಿದ್ದೀರಿ. ನೀವು ನನಗೆ ತುಂಬಾ ಬೆಂಬಲ ನೀಡಿದ್ದೀರಿ. ಈಗ ಆ ಪ್ರೀತಿ ಮತ್ತು ಅಭಿಮಾನಕ್ಕೆ ನಾವು ಪ್ರತಿಯಾಗಿ ಉಡುಗೊರೆ ನೀಡುತ್ತಿದ್ದೇವೆ. ಸೆಲೆಬ್ರಿಟಿಗಳು ಮಾತ್ರವಲ್ಲ, ನಿಮಗೂ ಬಿಗ್ ಬಾಸ್‌ನಲ್ಲಿ ಭಾಗವಹಿಸಲು ಅವಕಾಶ ನೀಡುತ್ತಿದ್ದೇವೆʼ ಎಂತಾ ಹೇಳಿದ್ದಾರೆ.

5/5

ಬಿಗ್ ಬಾಸ್ ಸೀಸನ್ 9ರಲ್ಲಿ ಭಾಗವಹಿಸಲು ಇಷ್ಟವಿರುವವರು ಈ ಲಿಂಕ್ https://bb9.jiostar.com ಗೆ ಹೋಗಿ ನಿಮ್ಮ ಹೆಸರು ಮತ್ತು ಮೊಬೈಲ್ ಸಂಖ್ಯೆಯನ್ನ ನಮೂದಿಸಿ ಹೆಸರು ನೋಂದಾಯಿಸಿಕೊಳ್ಳಬೇಕು. ನೀವು ನಿಮ್ಮ ಬಗ್ಗೆ ಮತ್ತು ನೀವು ಬಿಗ್ ಬಾಸ್ ಮನೆಗೆ ಏಕೆ ಪ್ರವೇಶಿಸಲು ಬಯಸುತ್ತೀರಿ ಅನ್ನೋದರ ಕುರಿತು ಒಂದರಿಂದ ಮೂರು ನಿಮಿಷಗಳ ವಿಡಿಯೋ ಮಾಡಿ ಅಪ್‌ಲೋಡ್ ಮಾಡಬೇಕಾಗುತ್ತದೆ. ಬಿಗ್ ಬಾಸ್ ತಂಡವು ಇದನ್ನ ಪರಿಶೀಲಿಸಿ ಅರ್ಹ ಮತ್ತು ಸೂಕ್ತ ಜನರನ್ನು ಬಿಗ್ ಬಾಸ್ ಮನೆಗೆ ಕಳುಹಿಸುತ್ತದಂತೆ. 





Read More