Virat Kohli daughter Vamika Net worth: ದೇಶದ ಪವರ್ ಕಪಲ್ ಎಂದೇ ಕರೆಯಲ್ಪಡುವ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಅವರ ಕೆಮಿಸ್ಟ್ರಿ ಅದ್ಭುತವಾಗಿದೆ.
ಸಾವಿರ ಕೋಟಿ ಒಡೆಯ ವಿರಾಟ್ ಕೊಹ್ಲಿ ಕ್ರಿಕೆಟ್’ನಲ್ಲಿ ಎಷ್ಟು ಶಿಸ್ತುಬದ್ಧವಾಗಿರುತ್ತಾರೋ.. ಅದೇ ರೀತಿ ತಮ್ಮ ಫ್ಯಾಮಿಲಿ ವಿಚಾರದಲ್ಲೂ ಸಂಯಮದಿಂದಿರುತ್ತಾರೆ. ಮನೆ, ಮಡದಿ, ಮಗುವಿಗಾಗಿ ಸಮಯ ನೀಡುತ್ತಾ ಪಕ್ಕಾ ಫ್ಯಾಮಿಲಿ ಮ್ಯಾನ್ ಕೊಹ್ಲಿ ಎನ್ನಬಹುದು.
ಇನ್ನು ವಿರಾಟ್ ಕೊಹ್ಲಿ ರೂ. 1000 ಕೋಟಿ ಆಸ್ತಿ ಹೊಂದಿದ್ದಾರೆ. ಅನುಷ್ಕಾ ಶರ್ಮಾ ಹೆಸರಲ್ಲಿ 250 ಕೋಟಿ ಆಸ್ತಿ ಮೌಲ್ಯವಿದೆ. ತಂದೆ ತಾಯಿ ಇಬ್ಬರೂ ಸಹ ಕೋಟ್ಯಾಧಿಪತಿಗಳು. ಹಾಗಿದ್ರೆ ಮಗಳ ಹೆಸರಲ್ಲಿ ಎಷ್ಟು ಮೌಲ್ಯದ ಆಸ್ತಿ ಇದೆ ಎಂದು ಅನೇಕರು ಪ್ರಶ್ನೆ ಮಾಡಿದ್ದರು.
ವಿರಾಟ್ ಮತ್ತು ಅನುಷ್ಕಾ ಕೇವಲ ತಮ್ಮ ವೃತ್ತಿಯಿಂದ ಹಣ ಸಂಪಾದನೆ ಮಾಡುತ್ತಿಲ್ಲ. ಬದಲಾಗಿ ಜಾಹೀರಾತು, ಬ್ರ್ಯಾಂಡ್ ಅನುಮೋದನೆ ಹೀಗೆ ಹತ್ತು ಹಲವಾರು ಮಾರ್ಗಗಳಿಂದ ಗಳಿಕೆ ಮಾಡುತ್ತಿದ್ದಾರೆ.
ಇವರಿಬ್ಬರ ಒಟ್ಟು ಆಸ್ತಿ ಮೌಲ್ಯ ಅಂದಾಜು 1250 ಕೋಟಿಗೂ ಹೆಚ್ಚೇ ಇದೆ. ಹೀಗಿರುವಾಗ ವಾಮಿಕಾ ಈ ಎಲ್ಲಾ ಆಸ್ತಿಯ ವಾರಿಸುದಾರಳಾಗುತ್ತಾಳೆ.
ಅಂದಹಾಗೆ ಇದುವರೆಗೆ ತಮ್ಮ ಮಗಳ ಫೋಟೋವನ್ನು ಈ ಜೋಡಿ ಎಲ್ಲೂ ಶೇರ್ ಮಾಡಿಕೊಂಡಿಲ್ಲ. ಆದರೆ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾರಂತೆ ವಾಮಿಕಾಗೂ ಕೂಡ ಭರ್ಜರಿ ಫ್ಯಾನ್ ಫಾಲೋವಿಂಗ್ ಇದೆ.