PHOTOS

ಲಂಡನ್‌ನಲ್ಲಿ ಸೆಟಲ್‌ ಆಗ್ತಿದ್ರೂ ಮಗಳು ವಾಮಿಕಾಗೆ ಭಾರತದ ಈ ಶಾಲೆಯಲ್ಲಿ ಅಡ್ಮಿಶನ್‌ ಮಾಡಿಸಿದ ವಿರಾಟ್-ಅನುಷ್ಕಾ! ಯಾವ ಸ್ಕೂಲ್‌? ಅಲ್ಲಿನ ಫೀಸ್‌ ಎಷ್ಟು ಗೊತ್ತಾ?

vamika kohli school:  ಭಾರತೀಯ ಕ್ರಿಕೆಟ್ ಸೂಪರ್‌ಸ್ಟಾರ್ ವಿರಾಟ್ ಕೊಹ್ಲಿ ಮತ್ತು ಪತ್ನಿ, ಬಾಲಿವುಡ್ ನಟಿ ಅನುಷ್ಕಾ ಶರ್ಮಾ ತಮ್ಮ ಕುಟುಂಬದೊಂದಿಗೆ ಲಂಡನ್‌ನಲ್ಲಿ ಸೆಟಲ್‌ ಆಗಲು ಪ್ಲಾನ್‌ ಮಾಡುತ್ತಿದ್ದಾರೆ ಎಂದು ಬಿಗ್‌ ಅಪ್ಟೇಟ್‌ ಹೊರಬಿದ್ದಿದೆ.

Advertisement
1/5
ವಾಮಿಕಾ ಕೊಹ್ಲಿ ಸ್ಕೂಲ್‌
ವಾಮಿಕಾ ಕೊಹ್ಲಿ ಸ್ಕೂಲ್‌

ಭಾರತೀಯ ಕ್ರಿಕೆಟ್ ಸೂಪರ್‌ಸ್ಟಾರ್ ವಿರಾಟ್ ಕೊಹ್ಲಿ ಮತ್ತು ಪತ್ನಿ, ಬಾಲಿವುಡ್ ನಟಿ ಅನುಷ್ಕಾ ಶರ್ಮಾ ತಮ್ಮ ಕುಟುಂಬದೊಂದಿಗೆ ಲಂಡನ್‌ನಲ್ಲಿ ಸೆಟಲ್‌ ಆಗಲು ಪ್ಲಾನ್‌ ಮಾಡುತ್ತಿದ್ದಾರೆ ಎಂದು ಬಿಗ್‌ ಅಪ್ಟೇಟ್‌ ಹೊರಬಿದ್ದಿದೆ. ಈ ಬಗ್ಗೆ ಹೇಳಿಕೆ ನೀಡಿರುವ ಅವರ ಬಾಲ್ಯದ ಕೋಚ್ ರಾಜ್‌ಕುಮಾರ್ ಶರ್ಮಾ, ದಂಪತಿ ತಮ್ಮ ಮಕ್ಕಳಿಗೆ ಉತ್ತಮ ಜೀವನಶೈಲಿ ಮತ್ತು ಪರಿಸರವನ್ನು ಒದಗಿಸಲೆಂದು ಈ ನಿರ್ಧಾರ ತೆಗೆದುಕೊಂಡಿದ್ದಾರೆಂದು ಹೇಳಿದ್ದಾರೆ.

2/5
ವಾಮಿಕಾ ಕೊಹ್ಲಿ ಸ್ಕೂಲ್‌
ವಾಮಿಕಾ ಕೊಹ್ಲಿ ಸ್ಕೂಲ್‌

ಹಿಂದಿ ದೈನಿಕ ಅಮರ್ ಉಜಾಲಾ ವರದಿಯ ಪ್ರಕಾರ, ರಾಜ್‌ ಕುಮಾರ್ ಶರ್ಮಾ ಈ ಮಾಹಿತಿ ರಿವೀಲ್‌ ಮಾಡಿದ್ದು, 'ವಿರಾಟ್ ಶೀಘ್ರದಲ್ಲೇ ತಮ್ಮ ಕುಟುಂಬದೊಂದಿಗೆ ಲಂಡನ್‌ನಲ್ಲಿ ನೆಲೆಸಲು ಮತ್ತು ಭಾರತವನ್ನು ತೊರೆಯಲು ಯೋಜಿಸುತ್ತಿದ್ದಾರೆ. ಅವರು ತಮ್ಮ ಮಕ್ಕಳಿಗೆ ಉತ್ತಮ ಜೀವನಶೈಲಿ ಮತ್ತು ಪರಿಸರವನ್ನು ನೀಡಲು ಬಯಸುತ್ತಾರೆ, ಆದ್ದರಿಂದ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ" ಎಂದಿದ್ದಾರೆ

 

3/5
ವಾಮಿಕಾ ಕೊಹ್ಲಿ ಸ್ಕೂಲ್‌
ವಾಮಿಕಾ ಕೊಹ್ಲಿ ಸ್ಕೂಲ್‌

ಇನ್ನು ಈ ಬೆನ್ನಲ್ಲೇ ವಿರುಷ್ಕಾ ದಂಪತಿ ತಮ್ಮ ಮಗಳು ವಾಮಿಕಾರನ್ನು ಭಾರತದ ಪ್ರಖ್ಯಾತ ಶಾಲೆಯೊಂದರಲ್ಲಿ ಅಡ್ಮಿಶನ್‌ ಮಾಡಿಸಿದ್ದಾರೆ ಎಂದು ವರದಿಯಾಗುತ್ತಿದೆ.

 

4/5
ವಾಮಿಕಾ ಕೊಹ್ಲಿ ಸ್ಕೂಲ್‌
ವಾಮಿಕಾ ಕೊಹ್ಲಿ ಸ್ಕೂಲ್‌

ಅಕಾಯ್ ಜನಿಸಿದಾಗಿನಿಂದ ವಿರಾಟ್ ಮತ್ತು ಅನುಷ್ಕಾ ಲಂಡನ್‌ನಲ್ಲಿ ನೆಲೆಸಿದ್ದಾರೆ. ಇನ್ನು ಬಾಲಿವುಡ್ ಲೈಫ್ ವರದಿಯ ಪ್ರಕಾರ, ವಾಮಿಕಾಗೆ ಜನವರಿ ತಿಂಗಳಲ್ಲಿ 3 ವರ್ಷ ತುಂಬಿದೆ. ಇದು ಶಾಲೆಗೆ ಪ್ರವೇಶ ಪಡೆಯುವ ಸಮಯ. ಇನ್ನು ಇದೇ ಕಾರಣದಿಂದ ಇತ್ತೀಚೆಗೆ ಅನುಷ್ಕಾ ಭಾರತಕ್ಕೆ ಆಗಮಿಸಿದ್ದರು ಎನ್ನಲಾಗಿದೆ. ಅಂದರೆ ಇತರ ಸೆಲೆಬ್ರಿಟಿಗಳಂತೆ ವಾಮಿಕಾ ಕೂಡ ಧೀರೂಭಾಯಿ ಅಂಬಾನಿ ಶಾಲೆಯಲ್ಲಿ ಅಡ್ಮಿಶನ್‌ ಮಾಡಿಸಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಇಲ್ಲ.

 

5/5
ವಾಮಿಕಾ ಕೊಹ್ಲಿ ಸ್ಕೂಲ್‌
ವಾಮಿಕಾ ಕೊಹ್ಲಿ ಸ್ಕೂಲ್‌

ಧೀರೂಭಾಯಿ ಅಂಬಾನಿ ಇಂಟರ್‌ನ್ಯಾಶನಲ್ ಸ್ಕೂಲ್‌ನಲ್ಲಿ ವಾಮಿಕಾರನ್ನು ನರ್ಸರಿಗೆ ಅಡ್ಮಿಶನ್‌ ಮಾಡಿಸಲಾಗಿದೆ ಎಂದು ಹೇಳಲಾಗುತ್ತಿದೆ. ಇನ್ನು ಇಲ್ಲಿನ ಫೀಜ್‌ ಸ್ಟ್ರಕ್ಚರ್‌ ನೋಡುವುದಾದರೆ ಎಲ್‌ಕೆಜಿಗೆ 1.7 ಲಕ್ಷ ಫೀಜ್‌ ಇದ್ದು ಜಗತ್ತಿನ ಅತ್ಯದ್ಭುತ ಶಿಕ್ಷಣವನ್ನು ಇಲ್ಲಿ ನೀಡಲಾಗುತ್ತದೆ.

 





Read More