LPG Price: ಇತ್ತೀಚಿನ ದಿನಗಳಲ್ಲಿ ಗ್ಯಾಸ್ ಸಿಲಿಂಡರ್ ಬಳಕೆ ದೇಶದ ಮೂಲೆ ಮೂಲೆಯಲ್ಲಿ ಹೆಚ್ಚಾಗುತ್ತಿದೆ. ಬಳಕೆ ಹೆಚ್ಚಾಗುತ್ತಿದ್ದಂತೆ ಸಿಲಿಂಡರ್‌ನ ಬೆಲೆ ಕೂಡ ಏರಿಕೆಯಾಗುತ್ತಿದೆ. ಬೆಲೆ ಏರಿಕೆ ಸಾಮಾನ್ಯ ಜನರಿಗೆ ದೊಡ್ಡ ತಲೆ ನೋವಾಗಿ ಮಾರ್ಪಾಡಾಗಿದೆ. ಹಾಗಾದರೆ ಈ ಎಲ್‌ಪಿಜಿ ಸಿಲಿಂಡರ್ ಅನ್ನು ಕಡಿಮೆ ಬೆಲೆಗೆ ಖರೀದಿಸುವುದು ಹೇಗೆ..?ತಿಳಿಯಲು ಮುಂದೆ ಓದಿ...
ಇತ್ತೀಚಿನ ದಿನಗಳಲ್ಲಿ ಗ್ಯಾಸ್ ಸಿಲಿಂಡರ್ ಬಳಕೆ ದೇಶದ ಮೂಲೆ ಮೂಲೆಯಲ್ಲಿ ಹೆಚ್ಚಾಗುತ್ತಿದೆ. ಬಳಕೆ ಹೆಚ್ಚಾಗುತ್ತಿದ್ದಂತೆ ಸಿಲಿಂಡರ್‌ನ ಬೆಲೆ ಕೂಡ ಏರಿಕೆಯಾಗುತ್ತಿದೆ. ಬೆಲೆ ಏರಿಕೆ ಸಾಮಾನ್ಯ ಜನರಿಗೆ ದೊಡ್ಡ ತಲೆ ನೋವಾಗಿ ಮಾರ್ಪಾಡಾಗಿದೆ. ಹಾಗಾದರೆ ಈ ಎಲ್‌ಪಿಜಿ ಸಿಲಿಂಡರ್ ಅನ್ನು ಕಡಿಮೆ ಬೆಲೆಗೆ ಖರೀದಿಸುವುದು ಹೇಗೆ..?ತಿಳಿಯಲು ಮುಂದೆ ಓದಿ...
ಭಾರದ ಅಡುಗೆ ಮನೆಗಳಲ್ಲಿ ಒಂದು ಕಾಲದಲ್ಲಿ ಒಲೆಯನ್ನು ಉರಿಸಿ ಅಡುಗೆ ಮಾಡುತ್ತಿದ್ದರು. ಆದರೆ ಕಾಲ ಬದಲಾಗುತ್ತಿದ್ದಂತೆ ಜನರು ಎಲ್‌ಪಿಜಿ ಸಿಲಿಂಡರ್‌ನ ಮೊರೆ ಹೋಗಲು ಆರಂಭಿಸಿದರು. ಇದೀಗ ಭಾರತ ಪ್ರತಿಯೊಂದು ಹಳ್ಳಿ ಹಾಗೂ ಮೂಲೆ ಮೂಲೆಯಲ್ಲಿಯೂ ಸಿಲಿಂಡರ್‌ಗಳನ್ನು ಬಳಸಲಾಗುತ್ತದೆ.
ಈಗ ಇರುವ ಪರಿಸ್ಥಿತಿ ನೋಡಿದರೆ ಗ್ಯಾಸ್ ಸಿಲಿಂಡರ್ ಸಬ್ಸಿಡಿಯೊಂದಿಗೆ ರೂ. 850 ಇಲ್ಲವಾದರೆ ರೂ.1100ರ ವರೆಗೂ ದೊರೆಯುತ್ತದೆ. ಆದರೆ ಬಡವರು ಈ ಪರಿಸ್ಥಿತಿಯಲ್ಲಿ ಅನ್ನ ಬೇಯಿಸುವುದು ಕಷ್ಟವಾಗಿದೆ. ಆದರೆ ನಮ್ಮ ದೇಶದ ಈ ಎರಡು ಜಾಗಗಳಲ್ಲಿ ಸಿಲಿಂಡರ್ ಕಡಿಮೆ ಬೆಲೆಗೆ ಸಿಗುತ್ತದೆ. ಅದು ಎಲ್ಲಿ ಮುಂದೆ ಓದಿ...
ಕಾಂಗ್ರೇಸ್ ಸರ್ಕಾರ ತನ್ನ ಪ್ರಣಾಳಿಕೆಯಲ್ಲಿ ಎಲ್‌ಪಿಜಿ ಸಿಲಿಂಡರ್ ಅನ್ನು ಭಾರತದ ಈ ಎರಡು ಸ್ಥಳಗಳಲ್ಲಿ ರೂ.450 ಕ್ಕೆ ಕೊಡುವಂತೆ ಘೋಷಿಸಿತ್ತು. ಇದೀಗ ಆ ಪ್ರಣಾಳಿಕೆಯಂತೆ ಸರ್ಕಾರ ಈ ಎರಡು ಪ್ರದೇಶಗಳಲ್ಲಿ ಕಡಿಮೆ ಬೆಲೆಗೆ ಸಿಲಿಂಡರ್ ಕೊಡಲು ಮುಂದಾಗಿದೆ.
ರಾಜಸ್ಥಾನದಲ್ಲಿ ಈಗಾಗಲೇ ಪ್ರಧಾನ ಮಂತ್ರಿ ಉಜ್ವಲ ಯೋಜನ ಅಡಿಯಲ್ಲಿ ಸಿಲಿಂಡರ್ ಅನ್ನು ಕೇವಲ ರೂ. 603 ಕ್ಕೆ ನೀಡಲಾಗುತ್ತಿದೆ. ಆದರೆ ಇದೀಗ ಕಾಂಗ್ರೇಸ್ ಸರ್ಕಾರ ತನ್ನ ಪ್ರಾಣಾಳಿಕೆಯಂತೆ ರಾಜಸ್ಥಾನ ಹಾಗೂ ಮಧ್ಯ ಪ್ರದೇಶದಲ್ಲಿ ರೂ. 450 ಕ್ಕೆ ಕೊಡಲು ಸಿದ್ದವಾಗಿದೆ.