Gold rate today : ಜುಲೈ 1 ರಂದು ಗರಿಷ್ಠ ಮಟ್ಟಕ್ಕೆ ತಲುಪಿದ್ದ ಬಂಗಾರದ ಬೆಲೆ ಜುಲೈ 4 ರಂದು ಇಳಿಕೆ ಕಂಡಿದೆ. ಅಂತರರಾಷ್ಟ್ರೀಯ ಮಾರುಕಟ್ಟೆ, ಡಾಲರ್ ವಿನಿಮಯ ದರ, ಫೆಡ್ ಬಡ್ಡಿದರಗಳು ಮತ್ತು ಸ್ಥಳೀಯ ಬೇಡಿಕೆ ಇದಕ್ಕೆ ಕಾರಣಗಳಾಗಿವೆ. ಹಾಗಿದ್ರೆ, ಕಳೆದ 10 ದಿನಗಳಲ್ಲಿ ಚಿನ್ನದ ಬೆಲೆ ಎಷ್ಟು ಇಳಿಕೆ ಕಂಡಿದೆ.. ಬನ್ನಿ ನೋಡೋಣ..
ದೇಶಾದ್ಯಂತ ಚಿನ್ನದ ಬೆಲೆಗಳು ನಿರಂತರವಾಗಿ ಏರಿಳಿತ ಕಾಣುತ್ತಿದೆ. ಒಂದು ದಿನ ದರ ಹೆಚ್ಚಾದರೆ, ಮರುದಿನ ಕಡಿಮೆಯಾಗುವುದನ್ನು ನೋಡಿ, ಗ್ರಾಹಕರು ಮತ್ತು ಹೂಡಿಕೆದಾರರಿಗೆ ತಲೆನೋವು ಶುರುವಾಗಿದೆ. ವಿಶೇಷವಾಗಿ ಕಳೆದ 10 ದಿನಗಳ ಚಿನ್ನದ ಬೆಲೆ ನೋಡಿದರೆ, ಬೆಲೆಗಳು ಹೇಗೆ ಬದಲಾದವು ಅಂತ ತಿಳಿಯುತ್ತದೆ..
ಜೂನ್ 29 ರಂದು (Gold price today) : ಇಂದು ಚಿನ್ನದ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. 24 ಕ್ಯಾರೆಟ್ ಚಿನ್ನ ಪ್ರತಿ ಗ್ರಾಂಗೆ ₹9,742 ರಂತೆ ಸ್ಥಿರವಾಗಿದ್ದರೆ, 22 ಕ್ಯಾರೆಟ್ ಚಿನ್ನ ₹8,930 ರಂತೆ ಸ್ಥಿರವಾಗಿದೆ. ಜೂನ್ 30 ರಂದು ದಿನವಿಡೀ ಸ್ವಲ್ಪ ಇಳಿಕೆ ಕಂಡುಬಂದಿತ್ತು.
ಜುಲೈ 1 : ಈ ದಿನದಂದು ಚಿನ್ನದ ಬೆಲೆ 10 ದಿನಗಳಲ್ಲಿಯೇ ಗರಿಷ್ಠ ಏರಿಕೆ ದಾಖಲಿಸಿತ್ತು. 24K ಚಿನ್ನ ₹114 ರಷ್ಟು ಏರಿಕೆಯಾಗಿ ₹9,840 ಕ್ಕೆ ತಲುಪಿದ್ದರೆ, 22K ಚಿನ್ನ ₹105 ರಷ್ಟು ಏರಿಕೆಯಾಗಿ ₹9,020 ಕ್ಕೆ ತಲುಪಿತ್ತು.
ಜುಲೈ 2 : ಜುಲೈ 1 ರಂದು ಪ್ರಾರಂಭವಾದ ಲಾಭದ ಆವೇಗ ಮುಂದುವರೆಯಿತು. 24K ಚಿನ್ನ ₹49 ರಷ್ಟು ಏರಿಕೆಯಾಗಿ ₹9,889 ಕ್ಕೆ ತಲುಪಿದ್ದರೆ, 22K ಚಿನ್ನ ₹45 ರಷ್ಟು ಏರಿಕೆಯಾಗಿ ₹9,065 ಕ್ಕೆ ತಲುಪಿದೆ. ಮಾರುಕಟ್ಟೆಯಲ್ಲಿ ಚಿನ್ನದ ಖರೀದಿ ಉತ್ತಮವಾಗಿತ್ತು.
ಜುಲೈ 3 : ಹಿಂದಿನ ಎರಡ ದಿನಕ್ಕೆ ಹೊಲಿಸಿದರೆ, ಜುಲೈ 3 ರಂದು ಬೆಲೆಗಳು ಮತ್ತಷ್ಟು ಏರಿಕೆ ಕಂಡವು. 24 ಕ್ಯಾರೆಟ್ ಚಿನ್ನದ ಬೆಲೆ ₹44 ರಷ್ಟು ಏರಿಕೆಯಾಗಿ ₹9,933 ಕ್ಕೆ ತಲುಪಿದ್ದರೆ, 22 ಕ್ಯಾರೆಟ್ ಚಿನ್ನದ ಬೆಲೆ ₹40 ರಷ್ಟು ಏರಿಕೆಯಾಗಿ ₹9,105 ಕ್ಕೆ ತಲುಪಿತ್ತು.
ಜುಲೈ 4 : ಈ ದಿನದಂದು 24 ಕ್ಯಾರೆಟ್ ಚಿನ್ನದ ಬೆಲೆ ₹60 ರಷ್ಟು ಇಳಿಕೆಯಾಗಿ ₹9,873 ಕ್ಕೆ ತಲುಪಿದ್ದರೆ, 22 ಕ್ಯಾರೆಟ್ ಬಂಗಾರದ ಬೆಲೆ ₹55 ರಷ್ಟು ಇಳಿಕೆಯಾಗಿ ₹9,050 ಕ್ಕೆ ತಲುಪಿತ್ತು. ಇದು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿನ ಒತ್ತಡದ ಪರಿಣಾಮ ಎಂದು ತಜ್ಞರು ಹೇಳಿದ್ದರು.
ಜುಲೈ 5: ಜುಲೈ 4 ರಂದು ಕುಸಿದಿದ್ದ ಬೆಲೆಗಳು ಈ ದಿನದಂದು ಸ್ವಲ್ಪ ಏರಿಕೆ ಕಂಡವು. 24K ಚಿನ್ನ ₹10 ರಷ್ಟು ಏರಿಕೆಯಾಗಿ ₹9,883 ಕ್ಕೆ ತಲುಪಿತು ಮತ್ತು 22K ಚಿನ್ನ ₹10 ರಷ್ಟು ಏರಿಕೆಯಾಗಿ ₹9,060 ಕ್ಕೆ ತಲುಪಿತು. ಮಾರುಕಟ್ಟೆಯಲ್ಲಿ ಸ್ವಲ್ಪ ಸುಧಾರಣೆಯ ಸಂಕೇತವಾಗಿ ಇದನ್ನು ನೋಡಲಾಯಿತು.
ಜುಲೈ 6: ಬೆಲೆಗಳು ಹಿಂದಿನ ದಿನದಂತೆಯೇ ಇದ್ದವು. 24K ಚಿನ್ನ ₹9,883 ಮತ್ತು 22K ಚಿನ್ನ ₹9,060 ಕ್ಕೆ ಬದಲಾಗದೆ ಕೊನೆಗೊಂಡಿತು. ಖರೀದಿಯಲ್ಲಿನ ನಿಧಾನಗತಿಯ ಕಾರಣದಿಂದಾಗಿ ಇದು ಸಂಭವಿಸಿರಬಹುದು.
ಜುಲೈ 7 : ಚಿನ್ನದ ಬೆಲೆ ಮತ್ತೆ ನಿಧಾನವಾಗಿ ಕುಸಿಯಲು ಪ್ರಾರಂಭಿಸಿತು. 24 ಕ್ಯಾರೆಟ್ ಚಿನ್ನದ ಬೆಲೆ ₹54 ರಷ್ಟು ಇಳಿದು ₹9,829 ಕ್ಕೆ ತಲುಪಿತು. 22 ಕ್ಯಾರೆಟ್ ಬಂಗಾರ ₹50 ರಷ್ಟು ಇಳಿದು ₹9,010 ಕ್ಕೆ ತಲುಪಿತು. ಇದು ಅಂತರರಾಷ್ಟ್ರೀಯ ಮಾರುಕಟ್ಟೆಗಳ ಮೇಲಿನ ಒತ್ತಡದ ಪರಿಣಾಮ ಎಂದು ಹೇಳಲಾಗುತ್ತದೆ.
ಜುಲೈ 8 : ಈ ದಿನದಂದು ಬೆಲೆಗಳು ಮತ್ತೆ ಏರಿಕೆಯಾದವು. 24 ಕ್ಯಾರೆಟ್ ಚಿನ್ನದ ಬೆಲೆ ₹55 (gold rate) ರಷ್ಟು ಏರಿಕೆಯಾಗಿ ₹9,884 ಕ್ಕೆ ತಲುಪಿತು. 22 ಕ್ಯಾರೆಟ್ ಚಿನ್ನದ ಬೆಲೆ ₹50 ರಷ್ಟು ಏರಿಕೆಯಾಗಿ ₹9,060 ಕ್ಕೆ ತಲುಪಿತು. ಮಾರುಕಟ್ಟೆ ಮತ್ತೆ ಸಕಾರಾತ್ಮಕ ದಿಕ್ಕಿನಲ್ಲಿ ಸಾಗುತ್ತಿರುವುದರ ಸೂಚನೆಯಾಗಿ ಇದು ಕಂಡುಬರುತ್ತದೆ.
ಕಳೆದ 10 (gold price today) ದಿನಗಳಲ್ಲಿ ಚಿನ್ನದ ಬೆಲೆ ಏರಿಳಿತವನ್ನು ನೋಡಿದರೆ, ಒಂದು ದಿನ ಬೆಲೆ ಹೆಚ್ಚಾಯಿತು ಮತ್ತು ಮರುದಿನ ಕಡಿಮೆಯಾಗಿದ್ದನ್ನು ಗಮನಿಸಬಹುದು. ಬೆಲೆಗಳು 3 ಹಂತಗಳ ನಡುವೆ ಚಲಿಸುತ್ತಿವೆ. ಲಾಭ - ನಷ್ಟ - ಸ್ಥಿರತೆ. ಇದರ ಹಿಂದಿನ ಕಾರಣಗಳು ಅಂತರರಾಷ್ಟ್ರೀಯ ಮಾರುಕಟ್ಟೆ, ಡಾಲರ್ ವಿನಿಮಯ ದರ, ಫೆಡ್ ಬಡ್ಡಿದರಗಳು, ಆಮದು ನೀತಿಗಳು ಮತ್ತು ಸ್ಥಳೀಯ ಬೇಡಿಕೆಯಂತಹ ಅಂಶಗಳಾಗಿವೆ.