Income Tax Free: ಕೇಂದ್ರ ಸರ್ಕಾರವು ಪಿಂಚಣಿ ವಿನಾಯಿತಿಗೆ ಸಂಬಂಧಿಸಿದಂತೆ ಪ್ರಮುಖ ಘೋಷಣೆ ಮಾಡಿದ್ದು ಇದರಿಂದಾಗಿ ದೇಶದಲ್ಲಿ ಕೋಟ್ಯಾಂತರ ಹಿರಿಯ ನಾಗರೀಕರಿಗೆ ಹೆಚ್ಚಿನ ಪ್ರಯೋಜನವಾಗಲಿದೆ.
ತೆರಿಗೆ ವಿನಾಯಿತಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು ಇದರನ್ವಯ ಇನ್ನು ಮುಂದೆ ಹಿರಿಯ ನಾಗರೀಕರು ತಾವು ಪಡೆಯುವ ಪಿಂಚಣಿ ಆದಾಯದ ಮೇಲೆ ಯಾವುದೇ ತೆರಿಗೆ ಪಾವತಿಸಬೇಕಿಲ್ಲ ಎಂದು ಹೇಳಲಾಗುತ್ತಿದೆ.
ತೆರಿಗೆ ವಿನಾಯಿತಿಗೆ ಸಂಬಂಧಿಸಿದ ವಿತ್ತ ಸಚಿವಾಲಯದ ಈ ಮಹತ್ವದ ನಿರ್ಧಾರದಿಂದಾಗಿ ದೇಶಾದ್ಯಂತ ಪಿಂಚಣಿ ಪಡೆಯುವ ಲಕ್ಷಾಂತರ ಪಿಂಚಣಿದಾರರಿಗೆ ಮತ್ತು ಹಿರಿಯ ನಾಗರಿಕರಿಗೆ ನೇರ ಪ್ರಯೋಜನವಾಗಲಿದೆ.
ಹಣಕಾಸು ಸಚಿವಾಲಯದಿಂದ ಲಭ್ಯವಿರುವ ಮಾಹಿತಿಯ ಪ್ರಕಾರ, ಪಿಂಚಣಿ ಮೇಲಿನ ತೆರಿಗೆಯನ್ನು ತೆಗೆದುಹಾಕುವ ಸರ್ಕಾರದ ಈ ಕ್ರಮವು ದೇಶದ ಹಿರಿಯ ನಾಗರೀಕರಿಗೆ ಆರ್ಥಿಕ ಭದ್ರತೆಯನ್ನು ಒದಗಿಸುವ ಗುರಿಯೊಂದಿಗೆ, ದೇಶದ ಬೆಳವಣಿಗೆಗೆ ಗಣನೀಯ ಕೊಡುಗೆ ನೀಡಿರುವ ನಾಗರೀಕರ ಜೀವನ ಮಟ್ಟವನ್ನು ಸುಧಾರಿಸುವ ಉದ್ದೇಶವನ್ನು ಹೊಂದಿದೆ.
* ಪಿಂಚಣಿ ಮೇಲಿನ ತೆರಿಗೆ ವಿನಾಯಿತಿಯು ಕೇವಲ ಪಿಂಚಣಿ ಆದಾಯಕ್ಕೆ ಮಾತ್ರ ಅನ್ವಯವಾಗುತ್ತದೆ. * ಸರ್ಕಾರದ ಈ ನಿರ್ಧಾರದಿಂದ ಹಿರಿಯ ನಾಗರೀಕರ ಆದಾಯದಲ್ಲಿ ಗಮನಾರ್ಹ ಹೆಚ್ಚಳವಾಗುತ್ತದೆ.
ಹಿರಿಯ ನಾಗರೀಕರಿಗೆ ಪಿಂಚಣಿ ಮೇಲಿನ ತೆರಿಗೆ ವಿನಾಯಿತಿಯು ಮುಂಬರುವ ಆರ್ಥಿಕ ವರ್ಷದಿಂದ ಜಾರಿಗೆ ಬರುವ ನಿರೀಕ್ಷೆಯಿದೆ.