PHOTOS

Gajakesari Yog: ತಿಂಗಳಾಂತ್ಯದಲ್ಲಿ ಗುರು-ಚಂದ್ರರಿಂದ ಈ ರಾಶಿಯವರಿಗೆ ಅಚ್ಚೇದಿನ್ ಆರಂಭ, ಮುಟ್ಟಿದ್ದೆಲ್ಲಾ ಬಂಗಾರವಾಗುವ ಪರ್ವಕಾಲ

Guru Chandra Yuti: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ ತಿಂಗಳಾಂತ್ಯದಲ್ಲಿ ಅತ್ಯಂತ ಮಂಗಳಕರ ಯೋಗ ನಿರ್ಮಾಣವಾಗಲಿದೆ. 

Advertisement
1/8
ಗಜಕೇಸರಿ ಯೋಗ
ಗಜಕೇಸರಿ ಯೋಗ

ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಸದ್ಯ ವೃಷಭ ರಾಶಿಯಲ್ಲಿರುವ ದೇವಗುರು ಬೃಹಸ್ಪತಿ 14 ಮೇ 2025ರ ರಾತ್ರಿ 11:20ಕ್ಕೆ ಮಿಥುನ ರಾಶಿಗೆ ಪ್ರವೇಶಿಸಲಿದ್ದಾನೆ. ಮೇ 28ರಂದು ಮನಸ್ಸಿನಕಾರಕ ಚಂದ್ರ ಕೂಡ ಮಿಥುನ ರಾಶಿಗೆ ಪದಾರ್ಪಣೆ ಮಾಡುವುದರಿಂದ ಅತ್ಯಂತ ಶಕ್ತಿಶಾಲಿ 'ಗಜಕೇಸರಿ ಯೋಗ' ನಿರ್ಮಾಣವಾಗಲಿದೆ. 

2/8
ಗಜಕೇಸರಿ ಯೋಗ ಪ್ರಭಾವ
ಗಜಕೇಸರಿ ಯೋಗ ಪ್ರಭಾವ

ಮೇ 28ರಿಂದ ಸುಮಾರು 52ಗಂಟೆಗಳ ಕಾಲ ಎಂದರೆ ಮೇ 30ರವರೆಗಿರುವ ಈ ಶಕ್ತಿಶಾಲಿ ಗಜಕೇಸರಿ ಯೋಗದಿಂದಾಗಿ ಕೆಲವು ರಾಶಿಯವರಿಗೆ ಅಚ್ಚೇದಿನ್ ಆರಂಭವಾಗಲಿದೆ. ಅವರು ಮುಟ್ಟಿದ್ದೆಲ್ಲಾ ಚಿನ್ನವಾಗುವ ಸುವರ್ಣ ಸಮಯ ಎನ್ನಲಾಗುತ್ತಿದೆ. 

3/8
ವೃಷಭ ರಾಶಿ
ವೃಷಭ ರಾಶಿ

ವೃಷಭ ರಾಶಿ:  ಗಜಕೇಸರಿ ಯೋಗದಿಂದಾಗಿ ಈ ರಾಶಿಯವರಿಗೆ ವ್ಯವಹಾರದಲ್ಲಿ ಭರ್ಜರಿ ಲಾಭವಾಗಲಿದೆ. ಉದ್ಯೋಗಸ್ಥರಿಗೆ ಬಡ್ತಿ ಸಂಭಾವವಿದೆ. ಹಣಕಾಸಿನ ಮೂಲಗಳು ಹೆಚ್ಚಾಗುವುದರಿಂದ ಆರ್ಥಿಕ ಸಮೃದ್ಧಿ ತರಲಿದೆ. 

4/8
ಸಿಂಹ ರಾಶಿ
ಸಿಂಹ ರಾಶಿ

ಸಿಂಹ ರಾಶಿ:  ಗಜಕೇಸರಿ ಯೋಗದೊಂದಿಗೆ ಈ ರಾಶಿಯವರ ಬದುಕಿನಲ್ಲಿ ಕಷ್ಟಗಳು ಕಳೆದು ಶುಭ ದಿನಗಳು ಆರಂಭವಾಗಲಿವೆ. ಹಣಕಾಸಿನ ಸ್ಥಿತಿಯಲ್ಲಿ ಗಮನಾರ್ಹ ಪ್ರಗತಿ ಕಾಣಲಿದ್ದು, ವೃತ್ತಿಪರರಿಗೆ ಪ್ರಮೋಷನ್ ಸಂಭವವಿದೆ. 

5/8
ವೃಶ್ಚಿಕ ರಾಶಿ
ವೃಶ್ಚಿಕ ರಾಶಿ

ವೃಶ್ಚಿಕ ರಾಶಿ:  ತಿಂಗಳಾಂತ್ಯದಲ್ಲಿ ನಿರ್ಮಾಣವಾಗಲಿರುವ ಗಜಕೇಸರಿ ಯೋಗವು ಈ ರಾಶಿಯವರಿಗೆ ವ್ಯವಹಾರದಲ್ಲಿ ಭರ್ಜರಿ ಲಾಭವಾಗಲಿದೆ. ಉದ್ಯೋಗ ಸ್ಥಳದಲ್ಲಿ ಪರಿಸ್ಥಿತಿ ಬಲವಾಗಿರಲಿದ್ದು ಬಡ್ತಿ ಸಂಭವವಿದೆ. ಜೊತೆಗೆ ಬ್ಯಾಂಕ್ ಬ್ಯಾಲೆನ್ಸ್ ಕೂಡ ಹೆಚ್ಚಾಗಲಿದೆ. ಹೊಸ ಮನೆ ಖರೀದಿ ಯೋಗವಿದೆ. 

6/8
ಕುಂಭ ರಾಶಿ
ಕುಂಭ ರಾಶಿ

ಕುಂಭ ರಾಶಿ:  ಗಜಕೇಸರಿ ಯೋಗವು ಈ ರಾಶಿಯವರಿಗೆ ವೃತ್ತಿ-ವ್ಯವಹಾರದಲ್ಲಿ ಭಾರೀ ಲಾಭ, ಯಶಸ್ಸನ್ನು ನೀಡಲಿದೆ. ಹೂಡಿಕೆಯಿಂದ ಉತ್ತಮ ಲಾಭ ಗಳಿಸುವಿರಿ. ಹಣಕಾಸಿನ ಮೂಲಗಳು ಹೆಚ್ಚಾಗಿ, ಆರ್ಥಿಕ ಸ್ಥಿತಿ ಸುಧಾರಿಸಲಿದೆ. 

7/8
ಮೀನ ರಾಶಿ
ಮೀನ ರಾಶಿ

ಮೀನ ರಾಶಿ:  ಗಜಕೇಸರಿ ಯೋಗದಿಂದ ಈ ರಾಶಿಯವರಿಗೆ ಮನಸ್ಸು ಶಾಂತಗೊಳ್ಳಲಿದ್ದು, ಹಣಕಾಸಿನ ಸ್ಥಿತಿ ಸುಧಾರಿಸಲಿದೆ. ವೃತ್ತಿಪರರಿಗೆ ಪ್ರಮೋಷನ್ ಸಿಗಲಿದೆ. ವ್ಯವಹಾರದಲ್ಲಿ ಪ್ರಗತಿ ಕಂಡುಬರಲಿದೆ. ದಿಢೀರ್ ಧನಲಾಭದಿಂದ ಆರ್ಥಿಕ ಮುಗ್ಗಟ್ಟಿನಿಂದ ಪರಿಹಾರ ದೊರೆಯಲಿದೆ. 

8/8
ಗಜಕೇಸರಿ ಯೋಗ ಪರಿಣಾಮ
ಗಜಕೇಸರಿ ಯೋಗ ಪರಿಣಾಮ

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.





Read More