ಶ್ರಾವಣ ಮಾಸದಲ್ಲಿ, ಶುಕ್ರ ಮತ್ತು ಗುರು ಒಟ್ಟಾಗಿ ಮಿಥುನ ರಾಶಿಯಲ್ಲಿ ಪ್ರಬಲವಾದ ಗಜಲಕ್ಷ್ಮಿ ರಾಜ್ಯಯೋಗವನ್ನು ರೂಪಿಸುತ್ತಿದ್ದಾರೆ. ಈ ಸಮಯವು ಅನೇಕ ರಾಶಿಯವರಿಗೆ ಶುಭವಾಗಿರಲಿದೆ.
ಶ್ರಾವಣದ ಆರಂಭದಲ್ಲಿಯೇ ಅಂದರೆ ಜುಲೈ 26 ರಂದು ಶುಕ್ರ ಮತ್ತು ಗುರು ಒಟ್ಟಾಗಿ ಗಜಲಕ್ಷ್ಮೀ ರಾಜಯೋಗವನ್ನು ರೂಪಿಸುತ್ತಾರೆ. ಮಿಥುನ ರಾಶಿಯಲ್ಲಿ ನಿರ್ಮಾಣವಾಗುತ್ತಿರುವ ಈ ರಾಜಯೋಗ ಕೆಲವು ರಾಶಿಯವರ ಅದೃಷ್ಟವನ್ನೇ ಬೆಳಗಲಿದೆ.
ಅವಿವಾಹಿತರಿಗೆ ವಿವಾಹ ಪ್ರಸ್ತಾಪಗಳು ಸಿಗಬಹುದು. ಸಮಾಜದಲ್ಲಿ ಗೌರವ ಹೆಚ್ಚಾಗಬಹುದು. ಮನಸ್ಸಿನ ಆಸೆಗಳು ಈಡೇರುವ ಕಾಲ. ಹೆಜ್ಜೆ ಹೆಜ್ಜೆಯಲ್ಲಿಯೂ ಅದೃಷ್ಟ ಜೊತೆಗಿರುವುದು. ಆದಾಯ ಹೆಚ್ಚಳಕ್ಕೆ ದಾರಿಗಳು ತೆರೆದುಕೊಳ್ಳುತ್ತವೆ. ಸರ್ಕಾರಿ ಕೆಲಸಕ್ಕೆ ಪ್ರಯತ್ನಿಸುವವರಿಗೆ ಶುಭ ಸುದ್ದಿ ಸಿಗಲಿದೆ.
ಆರ್ಥಿಕ ಸ್ಥಿತಿ ಸುಧಾರಿಸುವುದು. ಉದ್ಯೋಗದಲ್ಲಿ ಬಡ್ತಿ ಸಿಗುವುದು. ಸಂಪತ್ತು ಹೆಚ್ಚಾಗುವ ಹೊಸ ಹೊಸ ಮಾರ್ಗಗಳು ತೆರೆದುಕೊಳ್ಳುವುದು. ಎಲ್ಲಾ ಕೆಲಸ ಕಾರ್ಯಗಳಲ್ಲಿಯೂ ಯಶಸ್ಸು ನಿಮ್ಮದಾಗುವುದು.
ಉದ್ಯೋಗದಲ್ಲಿ ಉನ್ನತ ಸ್ಥಾನಮಾನಕ್ಕೆ ಏರುವಿರಿ. ವೇತನ ಹೆಚ್ಚಳವಾಗುವುದು. ನಿರುದ್ಯೋಗಿಗಳಿಗೆ ಉದ್ಯೋಗಾವಕಾಶಗಳು ಸಿಗುತ್ತವೆ. ಅವಿವಾಹಿತರಿಗೆ ವಿವಾಹ ಪ್ರಸ್ತಾಪಗಳು ಬರಬಹುದು. ಪೂರ್ವಜರ ಆಸ್ತಿಯಲ್ಲಿ ಲಾಭ ಸಿಗುವುದು.
ಆರ್ಥಿಕ ಸ್ಥಿತಿ ಬಲವಾಗಿರುತ್ತದೆ. ಅದೃಷ್ಟ ನಿಮ್ಮ ಜೊತೆಗಿರುವುದು. ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಅಪಾರ ಯಶಸ್ಸನ್ನು ಪಡೆಯುತ್ತಾರೆ. ಇದ್ದಕ್ಕಿದ್ದಂತೆ ಹಣ ಪಡೆಯುವ ಮಾರ್ಗ ತೆರೆದುಕೊಳ್ಳಬಹುದು.
ಸೂಚನೆ : ಈ ಲೇಖನವನ್ನು ಸಾಮಾನ್ಯ ಮಾಹಿತಿ ಮತ್ತು ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ನ್ಯೂಸ್ ಕನ್ನಡ ಇದನ್ನು ಅನುಮೋದಿಸುವುದಿಲ್ಲ.