PHOTOS

IPL ಟ್ರೋಫಿ ಗೆದ್ದಿದ್ದೇ ತಡ... ಬೆಂಗಳೂರಿನ ಈ ಶಾಲೆಯಲ್ಲೇ ವಾಮಿಕಾಗೆ ಅಡ್ಮಿಶನ್‌! ಕರ್ನಾಟಕ ನಂಟು ಬಿಡದ ವಿರಾಟ್‌ ಕೊಹ್ಲಿ... ಆ ಸ್ಕೂಲ್ ಯಾವುದು? ಅಲ್ಲಿನ ಫೀಸ್‌ ಎಷ್ಟು ಗೊತ್ತಾ?

Vamika Kohli School: ಸದ್ಯ ಐಪಿಎಲ್‌ ಮುಕ್ತಾಯವಾಗಿದೆ. ಬಹುಕಾಲದಿಂದ ನಿರೀಕ್ಷಿಸುತ್ತಿದ್ದ ಘಳಿಗೆಗೆ ಫುಲ್‌ಸ್ಟಾಪ್‌ ಬಿದ್ದಾಗಿದೆ. ೧೮ ವರ್ಷಗಳ ಬಳಿಕ ಆರ್‌ಸಿಬಿ ಟ್ರೋಫಿ ಗೆದ್ದಾಗಿದೆ. ಬೆಂಗಳೂರು ಅಭಿಮಾನಿಗಳಿಗೆ ಇದಕ್ಕಿಂತ ಬೆಸ್ಟ್‌ ಟೈಂ ಮತ್ತೊಂದು ಬೇಕೆ...? 

Advertisement
1/7
ವಾಮಿಕಾ ಕೊಹ್ಲಿ ಸ್ಕೂಲ್‌
ವಾಮಿಕಾ ಕೊಹ್ಲಿ ಸ್ಕೂಲ್‌

ಸದ್ಯ ಐಪಿಎಲ್‌ ಮುಕ್ತಾಯವಾಗಿದೆ. ಬಹುಕಾಲದಿಂದ ನಿರೀಕ್ಷಿಸುತ್ತಿದ್ದ ಘಳಿಗೆಗೆ ಫುಲ್‌ಸ್ಟಾಪ್‌ ಬಿದ್ದಾಗಿದೆ. ೧೮ ವರ್ಷಗಳ ಬಳಿಕ ಆರ್‌ಸಿಬಿ ಟ್ರೋಫಿ ಗೆದ್ದಾಗಿದೆ. ಬೆಂಗಳೂರು ಅಭಿಮಾನಿಗಳಿಗೆ ಇದಕ್ಕಿಂತ ಬೆಸ್ಟ್‌ ಟೈಂ ಮತ್ತೊಂದು ಬೇಕೆ...? ಇಲ್ಲೊಂದು ಸುದ್ದಿಯಿದೆ. ಇದನ್ನು ಓದಿದ ಬಳಿಕ ನಿಮಗೆ ಮತ್ತಷ್ಟು ಸಂತಸ ಆಗದೆ ಇರದು.  ಅದೇನೆಂಬುದನ್ನು ಮುಂದೆ ತಿಳಿಯೋಣ.

 

2/7
ವಾಮಿಕಾ ಕೊಹ್ಲಿ ಸ್ಕೂಲ್‌
ವಾಮಿಕಾ ಕೊಹ್ಲಿ ಸ್ಕೂಲ್‌

ಭಾರತೀಯ ಕ್ರಿಕೆಟ್ ಸೂಪರ್‌ಸ್ಟಾರ್ ವಿರಾಟ್ ಕೊಹ್ಲಿ ತಮ್ಮ ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಿದ್ದಾರೆ. ಅವರ ಖಾಸಗಿತನ ಕಾಪಾಡುವ ಸಲುವಾಗಿ ಭಾರತ ತೊರೆದು ಲಂಡನ್‌ನಲ್ಲಿ ನೆಲೆಸಿದ್ದಾರೆ ಕೊಹ್ಲಿ ಕುಟುಂಬ. ಆದರೆ ಈಗ ಮಗಳು ವಾಮಿಕಾ ಶಾಲೆಗೆ ತೆರಳಬೇಕಾದ ಸಮಯ. ಹೀಗಿರುವಾಗ ಆಕೆಯನ್ನು ವಿರುಷ್ಕಾ ಯಾವ ಸ್ಕೂಲ್‌ಗೆ ಅಡ್ಮಿಶನ್‌ ಮಾಡಿಸುತ್ತಿದ್ದಾರೆ ಎಂಬ ಕುತೂಹಲ ಮನೆಮಾಡಿದೆ. 

 

3/7
ವಾಮಿಕಾ ಕೊಹ್ಲಿ ಸ್ಕೂಲ್‌
ವಾಮಿಕಾ ಕೊಹ್ಲಿ ಸ್ಕೂಲ್‌

ಈ ಮಧ್ಯೆ ಸುದ್ದಿಯೊಂದು ಭಾರೀ ವೈರಲ್‌ ಆಗುತ್ತಿದ್ದು, ಬೆಂಗಳೂರಿನ ಪ್ರತಿಷ್ಠಿತ ಶಾಲೆಯೊಂದರಲ್ಲಿ ವಾಮಿಕಾಗೆ ಅಡ್ಮಿಶನ್‌ ಮಾಡಿಸಲಾಗಿದೆ. ಒಂದು ವೇಳೆ ಈ ವರದಿಯ ನಿಜವಾಗಿದ್ದಲ್ಲಿ, ಕರ್ನಾಟಕದ ನಂಟು ಬಿಡಲು ವಿರಾಟ್‌ ಆಗಲಿ, ಅನುಷ್ಕಾ ಆಗಲಿ ರೆಡಿಯಿಲ್ಲ ಎಂದೆನಿಸುತ್ತದೆ. 

 

4/7
ವಾಮಿಕಾ ಕೊಹ್ಲಿ ಸ್ಕೂಲ್‌
ವಾಮಿಕಾ ಕೊಹ್ಲಿ ಸ್ಕೂಲ್‌

ಇದಕ್ಕೆ ಕಾರಣ ಕಳೆದ ೧೮ ಸೀಸನ್‌ಗಳಿಂದ ಬೆಂಗಳೂರಿನ ಪರವೇ ಆಡುತ್ತಿರುವ ವಿರಾಟ್‌ ಕೊಹ್ಲಿಗೆ ಇಲ್ಲಿನ ಬಗ್ಗೆ ಅಪಾರ ಒಲವಿದೆ. ಅದಲ್ಲದೆ, ಈಗ ಟ್ರೋಫಿ ಕೂಡ ಗೆದ್ದಾಗಿದೆ. ಮತ್ತೊಂದೆಡೆ ಅನುಷ್ಕಾ ಕೂಡ ತಮ್ಮ ಸಂಪೂರ್ಣ ಬಾಲ್ಯ ಕಳೆದಿದ್ದು ಬೆಂಗಳೂರಿನಲ್ಲೇ. ಹೀಗಾಗಿ ಲಂಡನ್‌ನಲ್ಲಿದ್ದರೂ ಬೆಂಗಳೂರಿನ ಶಾಲೆಯಲ್ಲೇ ಅಡ್ಮಿಶನ್‌ ಮಾಡಿಸುತ್ತಿದ್ದಾರಾ ಎಂಬ ಗುಮಾನಿ ಎದ್ದಿದೆ.

5/7
ವಾಮಿಕಾ ಕೊಹ್ಲಿ ಸ್ಕೂಲ್‌
ವಾಮಿಕಾ ಕೊಹ್ಲಿ ಸ್ಕೂಲ್‌

ಮತ್ತೊಂದು ವರದಿಯ ಪ್ರಕಾರ ಅನುಷ್ಕಾ ಅದಾಗಲೇ ಪ್ರಿ ಅಡ್ಮಿಶನ್‌ ಮೂಲಕ ಧೀರೂಬಾಯಿ ಅಂಬಾನಿ ಇಂಟರ್‌ನ್ಯಾಷನಲ್‌ ಸ್ಕೂಲ್‌ನಲ್ಲಿ ದಾಖಲಾತಿ ಮಾಡಿಸಿದ್ದಾರೆ. ಈ ಹಿಂದೆ ಮುಂಬೈಗೆ ಆಗಮಿಸಿದ್ದ ಅನುಷ್ಕಾ, ಮಗಳ ಅಡ್ಮಿಶನ್‌ ವಿಚಾರವಾಗಿನ ಕೆಲಸಕ್ಕೇ ಬಂದಿದ್ದರು ಎಂದು ಹಿಂದಿ ಮಾಧ್ಯಮವೊಂದು ವರದಿ ಮಾಡಿತ್ತು. 

 

6/7
ವಾಮಿಕಾ ಕೊಹ್ಲಿ ಸ್ಕೂಲ್‌
ವಾಮಿಕಾ ಕೊಹ್ಲಿ ಸ್ಕೂಲ್‌

ವರದಿ ಪ್ರಕಾರ, ಧೀರೂಭಾಯಿ ಅಂಬಾನಿ ಇಂಟರ್ನ್ಯಾಷನಲ್ ಸ್ಕೂಲ್ (DAIS) ನಲ್ಲಿ 2023-2024 ಶೈಕ್ಷಣಿಕ ವರ್ಷದ ವಾರ್ಷಿಕ ಬೋಧನಾ ಶುಲ್ಕವು ಕಿಂಡರ್‌ಗಾರ್ಟನ್‌ಗೆ 1,400,000 ರೂ.ಗಳಿಂದ 12 ನೇ ತರಗತಿಗೆ 2,000,000 ರೂ.ಗಳವರೆಗೆ ಇರುತ್ತದೆ. ಈ ಶುಲ್ಕಗಳು ಪುಸ್ತಕ, ಲೇಖನ ಸಾಮಗ್ರಿಗಳು, ಸಮವಸ್ತ್ರ, ಸಾರಿಗೆ ಮತ್ತು ಇತರ ಸೌಲಭ್ಯಗಳನ್ನು ಒಳಗೊಂಡ ವೆಚ್ಚಗಳನ್ನು ಒಳಗೊಂಡಿರುತ್ತವೆ.

 

7/7
ವಾಮಿಕಾ ಕೊಹ್ಲಿ ಸ್ಕೂಲ್‌
ವಾಮಿಕಾ ಕೊಹ್ಲಿ ಸ್ಕೂಲ್‌

ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ತಮ್ಮ ಕುಟುಂಬಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಮಕ್ಕಳ ಹಿತದೃಷ್ಟಿಯಿಂದ ವೃತ್ತಿಯಿಂದಲೇ ದೂರ ಸರಿಯುವ ನಿರ್ಧಾರಕ್ಕೂ ಬಂದಿದ್ದಾರೆ ಈ ಜೋಡಿ. ಈಗಾಗಲೇ ಮಕ್ಕಳ ಸಲುವಾಗಿ ಚಿತ್ರರಂಗವನ್ನೇ ತೊರೆದಿದ್ದಾರಂತೆ ಅನುಷ್ಕಾ. ಅಂದಹಾಗೆ ಕೊಹ್ಲಿಗೆ ತನ್ನ ಮಗಳು ವಾಮಿಕಾ ಮೇಲೆ ವಿಶೇಷ ಪ್ರೀತಿ ಇದೆಯಂತೆ. 

 





Read More