Jio Prepaid Plans below Rs 70: ಜಿಯೋ ಗ್ರಾಹಕರಿಗೆ ಬಂಪರ್ ಗುಡ್ ನ್ಯೂಸ್ ಇದ್ದು, ಇದೀಗ ಅತ್ಯಂತ ಕಡಿಮೆ ಬೆಲೆಯಲ್ಲಿ ಭರ್ಜರಿಯಾದ ಐದು ಪ್ರಿಪೇಯ್ಡ್ ಯೋಜನೆಗಳನ್ನು ಪರಿಚಯಿಸಿದೆ.
ಜಿಯೋ ತನ್ನ ಪ್ರಿಪೇಯ್ಡ್ ಗ್ರಾಹಕರಿಗೆ ಭರ್ಜರಿ ಆಫರ್ ನೀಡಿರುವ ದೇಶದ ನಂಬರ್ ಒನ್ ಟೆಲಿಕಾಂ ಕಂಪನಿ ಇದೀಗ ₹70ಕ್ಕಿಂತಲೂ ಕಡಿಮೆ ಬೆಲೆಯಲ್ಲಿ ಒಂದಲ್ಲ, ಎರಡಲ್ಲ... ಬರೋಬ್ಬರಿ ಐದು ಪ್ರಿಪೇಯ್ಡ್ ಪ್ಲಾನ್'ಗಳನ್ನು ಪರಿಚಯಿಸಿದೆ.
ಜಿಯೋ ಅತ್ಯಂತ ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನ್ ಬೆಲೆ ₹11. ಈ ಯೋಜನೆಯಲ್ಲಿ ಗ್ರಾಹಕರಿಗೆ ಬರೋಬ್ಬರಿ 10GB ಹೈಸ್ಪೀಡ್ ಇಂಟರ್ನೆಟ್ ಲಭ್ಯವಾಗಲಿದೆ. ಇದರ ಮಾನ್ಯತೆ ಕೇವಲ 1ಗಂಟೆಗಳು ಮಾತ್ರ.
ಜಿಯೋದ ಮತ್ತೊಂದು ಅಗ್ಗದ ರಿಚಾರ್ಜ್ ಪ್ಲಾನ್ ಕೇವಲ 19 ರೂ.ಗಳಿಗೆ ಸಿಗುತ್ತದೆ. ಇದರಲ್ಲಿ ಗ್ರಾಹಕರು 1ದಿನದ ಮಟ್ಟಿಗೆ 1ಜಿಬಿ ಹೈಸ್ಪೀಡ್ ಇಂಟರ್ನೆಟ್ ಪಡೆಯಬಹುದು.
ಜಿಯೋ ಕೇವಲ 29ರೂ.ಗಳಿಗೆ ಪರಿಚಯಿಸಿರುವ ಈ ಪ್ಲಾನ್'ನಲ್ಲಿ ಗ್ರಾಹಕರಿಗೆ 2ಜಿಬಿ ಡೇಟಾ ಪ್ರಯೋಜನ ಲಭ್ಯವಾಗಲಿದೆ. ಇದರ ಮಾನ್ಯತೆ ಎರಡು ದಿನಗಳವರೆಗೆ ಇರುತ್ತದೆ.
ಹೆಚ್ಚು ಡೇಟಾ ಅಗತ್ಯವಿರುವ ಗ್ರಾಹಕರಿಗೆ ಜಿಯೋದ ₹49 ಪ್ರಿಪೇಯ್ಡ್ ಪ್ಲಾನ್ ಲಾಭದಾಯಕವಾಗಿದೆ. ಒಂದು ದಿನದ ವ್ಯಾಲಿಡಿಟಿ ಜೊತೆಗೆ ಬರುವ ಈ ಯೋಜನೆಯಲ್ಲಿ ಗ್ರಾಹಕರಿಗೆ ಬರೋಬ್ಬರಿ 25ಜಿಬಿ ಡೇಟಾ ಲಭ್ಯವಾಗಲಿದೆ.
ಅತ್ಯಂತ ಕಡಿಮೆ ಬೆಲೆಯಲ್ಲಿ 7ದಿನಗಳ ಮಾನ್ಯತೆಯೊಂದಿಗೆ ಬರುವ ರಿಚಾರ್ಜ್ ಪ್ಲಾನ್ ಎಂದರೆ ಜಿಯೋದ ₹69 ಪ್ರಿಪೇಯ್ಡ್ ಪ್ಲಾನ್. ಇದರಲ್ಲಿ 6ಜಿಬಿ ಹೈಸ್ಪೀಡ್ ಡೇಟಾ ಲಭ್ಯವಾಗಲಿದೆ. ಆದಾಗ್ಯೂ, ಇದಕ್ಕೆ ಯಾವುದೇ ದೈನಂದಿನ ಮಿತಿ ಇರುವುದಿಲ್ಲ.