PHOTOS

Jio Prepaid Plan: ಐದು ಅಗ್ಗದ ಪ್ರಿಪೇಯ್ಡ್ ಪ್ಲಾನ್ ಬಿಡುಗಡೆ ಮಾಡಿದ ಮುಖೇಶ್ ಅಂಬಾನಿ

Jio Prepaid Recharge: ರಿಲಯನ್ಸ್ ಜಿಯೋ ಗ್ರಾಹಕರಿಗಾಗಿ ಮುಖೇಶ್ ಅಂಬಾನಿ  5 ಅದ್ಭುತ ಅಗ್ಗದ ರೀಚಾರ್ಜ್ ಯೋಜನೆಗಳನ್ನು ಪರಿಚಯಿಸಿದೆ. 

Advertisement
1/6
ಜಿಯೋ ಪ್ರಿಪೇಯ್ಡ್ ಪ್ಲಾನ್
ಜಿಯೋ ಪ್ರಿಪೇಯ್ಡ್ ಪ್ಲಾನ್

ದೇಶದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಮಾಲೀಕತ್ವದ ಜಿಯೋ ತನ್ನ ಬಳಕೆದಾರರಿಗಾಗಿ ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ರಿಚಾರ್ಜ್ ಯೋಜನೆಗಳನ್ನು ಪರಿಚಯಿಸಿದೆ. ಕೇವಲ 11ರೂ.ಗಳಿಂದ ಆರಂಭವಾಗಲಿರುವ ಈ ಯೋಜನೆಗಳಲ್ಲಿ ಗ್ರಾಹಕರಿಗೆ ಹಲವು ಪ್ರಯೋಜನಗಳು ಲಭ್ಯವಾಗಲಿವೆ.

2/6
ಜಿಯೋ 11 ರೂ. ಪ್ಲಾನ್
ಜಿಯೋ 11 ರೂ. ಪ್ಲಾನ್

ಜಿಯೋ ಅತ್ಯಂತ ಅಗ್ಗದ ಬೆಲೆಯಲ್ಲಿ ಎಂದರೆ ಕೇವಲ 11 ರೂ.ಗೆ  ರೀಚಾರ್ಜ್ ಪ್ಲಾನ್ ಬಿಡುಗಡೆ ಮಾಡಿದೆ. ಕೇವಲ 1 ಗಂಟೆಯ ವ್ಯಾಲಿಡಿಟಿಯೊಂದಿಗೆ ಲಭ್ಯವಿರುವ ಈ ರಿಚಾರ್ಜ್ ಪ್ಲಾನ್ ನಲ್ಲಿ 10 GB ಹೈ ಸ್ಪೀಡ್ ಡೇಟಾ ಲಭ್ಯವಿದ್ದು, ಡೇಟಾ ಮಿತಿ ಪೂರ್ಣಗೊಂಡ ನಂತರ, ವೇಗವು 64kbps ಗೆ ಇಳಿಕೆಯಾಗುತ್ತದೆ.

3/6
ಜಿಯೋ 19ರೂ. ಯೋಜನೆ
ಜಿಯೋ 19ರೂ. ಯೋಜನೆ

ಜಿಯೋದ ಇನ್ನೊಂದು ಅಗ್ಗದ ರಿಚಾರ್ಜ್ ಪ್ಲಾನ್ ಎಂದರೆ 19 ರೂಪಾಯಿಗಳ ಪ್ರಿಪೇಯ್ಡ್ ಪ್ಲಾನ್. ಇದರಲ್ಲಿ, 1 GB ಹೈಸ್ಪೀಡ್ ಡೇಟಾ ಲಭ್ಯವಿದ್ದು, 1 ದಿನದ ಮಾನ್ಯತೆಯೊಂದಿಗೆ ಬರುತ್ತದೆ. 

4/6
ಜಿಯೋ 29ರೂ. ಪ್ಲಾನ್
ಜಿಯೋ 29ರೂ. ಪ್ಲಾನ್

ಹೆಚ್ಚಿನ ಡೇಟಾ ಅವಶ್ಯಕತೆ ಇರುವವರಿಗೆ ಜಿಯೋ 29ರೂ. ಪ್ರಿಪೇಯ್ಡ್ ಪ್ಲಾನ್ ಪ್ರಯೋಜನಕಾರಿ ಆಗಿದೆ. ಎರಡು ದಿನಗಳ ಮಾನ್ಯತೆಯೊಂದಿಗೆ ಬರುವ ಈ ಯೋಜನೆಯಲ್ಲಿ 2ಜಿ‌ಬಿ ಹೈ ಸ್ಪೀಡ್ ಡೇಟಾ ಲಭ್ಯವಿದೆ.  

5/6
ಜಿಯೋ 49 ರೂ. ಪ್ಲಾನ್
ಜಿಯೋ 49 ರೂ. ಪ್ಲಾನ್

ರಿಲಯನ್ಸ್ ಜಿಯೋದ 49 ರೂ. ರಿಚಾರ್ಜ್ ಯೋಜನೆ 1 ದಿನದ ಮಾನ್ಯತೆಯೊಂದಿಗೆ 25 ಜಿಬಿ ಹೈ ಸ್ಪೀಡ್ ಡೇಟಾದ ಪ್ರಯೋಜನವನ್ನು ನೀಡುತ್ತದೆ. ಮಾನ್ಯತೆ ಅವಧಿ ಮುಗಿಯುವ ಮೊದಲು ನೀವು ಎಲ್ಲಾ ಡೇಟಾವನ್ನು ಬಳಸಿದರೆ, ಇಂಟರ್ನೆಟ್ ವೇಗವು 64kbpsಗೆ ಇಳಿಕೆಯಾಗುತ್ತದೆ.

6/6
ಜಿಯೋ 69ರೂ. ಯೋಜನೆ
ಜಿಯೋ 69ರೂ. ಯೋಜನೆ

ಜಿಯೋದ ಮತ್ತೊಂದು ಅಗ್ಗದ ರಿಚಾರ್ಜ್ ಯೋಜನೆ ಎಂದರೆ 69 ರೂಪಾಯಿಗಳ ಪ್ರಿಪೇಯ್ಡ್ ಪ್ಲಾನ್. ಬರೋಬ್ಬರಿ 7 ದಿನಗಳ ಮಾನ್ಯತೆಯೊಂದಿಗೆ ಬರುವ ಈ ಯೋಜನೆಯಲ್ಲಿ 6ಜಿಬಿ ಹೈಸ್ಪೀಡ್ ಇಂಟರ್ನೆಟ್‌ನ ಪ್ರಯೋಜನ ಲಭ್ಯವಿದೆ. ಆದಾಗ್ಯೂ, ಇವೆಲ್ಲವೂ ಡೇಟಾ ಪ್ಯಾಕ್‌ಗಳಾಗಿದ್ದು ಇದರಲ್ಲಿ ಕರೆ, ಎಸ್ಎಂಎಸ್ ನಂತಹ ಯಾವುದೇ ಪ್ರಯೋಜನಗಳು ಲಭ್ಯವಿಲ್ಲ. 





Read More