Guru Gochar: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಪ್ರಸ್ತುತ ಮಿಥುನ ರಾಶಿಯಲ್ಲಿ ಸಂಚರಿಸುತ್ತಿರುವ ದೇವಗುರು ಬೃಹಸ್ಪತಿ ಗುರು ಪೂರ್ಣಿಮೆಯಂದು ಯೌವನಾವಸ್ಥೆಯಲ್ಲಿ ತನ್ನ ಸಂಚಾರ ಆರಂಭಿಸಲಿದ್ದಾನೆ.
ಹಿಂದೂ ಪಂಚಾಂಗದ ಪ್ರಕಾರ, ಪ್ರತಿ ವರ್ಷ ಆಷಾಢ ಮಾಸದ ಹುಣ್ಣಿಮೆಯ ದಿನ ಗುರು ಪೂರ್ಣಿಮಾವನ್ನು ಆಚರಿಸಲಾಗುತ್ತದೆ. ಈ ವರ್ಷ ಜುಲೈ 10, 2025ರಂದು ದೇಶಾದ್ಯಂತ ಗುರು ಪೂರ್ಣಿಮೆಯನ್ನು ಆಚರಿಸಲಾಗುತ್ತಿದೆ. ಈ ದಿನ ಅತ್ಯಂತ ಮಂಗಳಕರ ಗ್ರಹ ಗುರು 100ವರ್ಷಗಳ ಬಳಿಕ ಯೌವನಾವಸ್ಥೆಯಲ್ಲಿ ಸಂಚಾರ ಆರಂಭಿಸಲಿದ್ದಾನೆ.
ಶನಿ ಬಳಿಕ ಅತ್ಯಂತ ನಿಧಾನವಾಗಿ ಸಂಚರಿಸುವ ಗ್ರಹವಾದ ಗುರು 12 ರಿಂದ 18ಡಿಗ್ರಿಯಲ್ಲಿ ಸಂಚರಿಸುವಾಗ ಯೌವನ ಸ್ಥಿತಿಯಲ್ಲಿ ಉಳಿಯುತ್ತಾನೆ.
ಬರೋಬ್ಬರಿ 100ವರ್ಷಗಳ ಬಳಿಕ ಯೌವನ ಸ್ಥಿತಿಯಲ್ಲಿರುವ ಗುರು ಕೆಲವರ ಅದೃಷ್ಟವನ್ನು ಬೆಳಗಳಿದ್ದಾನೆ. ಇದರಿಂದ ಕೆಲವು ರಾಶಿಯವರಿಗೆ ಅಪಾರ ಹಣ ಗಳಿಸುವ ಅವಕಾಶ ಸಿಗಲಿದ್ದು ಅಷ್ಟೈಶ್ವರ್ಯವನ್ನು ಪ್ರಾಪ್ತಿಯಾಗಲಿದೆ. ಆ ಅದೃಷ್ಟದ ರಾಶಿಗಳೆಂದರೆ...
ಯೌವನಾವಸ್ಥೆಯಲ್ಲಿ ಗುರು ಸಂಚಾರವು ಈ ರಾಶಿಯ ಮದುವೆಯಾಗದ ಯುವಕ-ಯುವತಿಯರಿಗೆ ಕಂಕಣ ಭಾಗ್ಯವನ್ನು ತರಲಿದೆ. ವಿವಾಹಿತ ದಂಪತಿಗಳಿಗೆ ಸಂತಾನ ಭಾಗ್ಯ ಕೂಡಿಬರಲಿದೆ. ಉದ್ಯೋಗ ವ್ಯವಹಾರದಲ್ಲಿ ಪ್ರಗತಿಯ ಹೊಸ ಹಾದಿ ತೆರೆಯಲಿದ್ದು ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗಲಿದೆ.
ಯೌವನ ಸ್ಥಿತಿಯಲ್ಲಿ ಗುರು ಸಂಚಾರವು ಈ ರಾಶಿಯವರ ಬದುಕಿನಲ್ಲಿ ಧನಾತ್ಮಕ ಬದಲಾವಣೆಗಳನ್ನು ತರಲಿದೆ. ಈ ಸಮಯದಲ್ಲಿ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಲಿದ್ದು ವೃತ್ತಿ-ವ್ಯವಹಾರದಲ್ಲಿ ಯಶಸ್ಸಿನ ಉತ್ತುಂಗವನ್ನು ಏರುವಿರಿ. ಅವಿವಾಹಿತರಿಗೆ ಉತ್ತಮ ವಿವಾಹ ಪ್ರಸ್ತಾಪಗಳು ದೊರೆಯಲಿವೆ.
ಯೌವನಾವಸ್ಥೆಯಲ್ಲಿ ಗುರು ಚಲನೆಯು ಈ ರಾಶಿಯವರಿಗೆ ಉದ್ಯೋಗ ರಂಗದಲ್ಲಿ ಅದೃಷ್ಟದ ಸಮಯ ಎಂದು ಸಾಬೀತುಪಡಿಸಲಿದೆ. ಪಾಲುದಾರಿಕೆ ವ್ಯವಹಾರಗಳಲ್ಲಿ ಭರ್ಜರಿ ಆದಾಯವನ್ನು ಗಳಿಸುವಿರಿ. ಹಣಕಾಸಿನ ಮೂಲಗಳು ಹೆಚ್ಚಾಗಲಿದ್ದು, ಸಕಲೈಶ್ವರ್ಯ ಪ್ರಾಪ್ತಿಯಾಗಲಿದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.