PHOTOS

Kapil Sharma: ಮುಂಬೈನಲ್ಲಿರುವ ಕಪಿಲ್ ಶರ್ಮಾ ಐಷಾರಾಮಿ ಮನೆಯ ವೈಭವ ಹೇಗಿದೆ ನೋಡಿ…

ಖ್ಯಾತ ಕಾಮಿಡಿಯನ್‌, ನಟ ಕಪಿಲ್ ಶರ್ಮಾ ವಾಣಿಜ್ಯ ನಗರಿ ಮುಂಬೈನಲ್ಲಿ ಐಷಾರಾಮಿ ಮನೆ ಹಾಗೂ ಪಂಜಾಬ್‌ನ ಫಾರ್ಮ್‌ಹೌಸ್‌ನ ಹೆಮ್ಮೆಯ ಮಾಲೀಕರಾಗಿದ್ದಾರೆ.

Advertisement
1/5
ಕಪಿಲ್ ಶರ್ಮಾರ ಮನೆಯ ಬಾಲ್ಕನಿ
ಕಪಿಲ್ ಶರ್ಮಾರ ಮನೆಯ ಬಾಲ್ಕನಿ

ಖ್ಯಾತ ಕಾಮಿಡಿಯನ್ ಕಪಿಲ್ ಶರ್ಮಾರ ಮುಂಬೈನಲ್ಲಿರುವ ಐಷಾರಾಮಿ ಮನೆಯಲ್ಲಿ ದೊಡ್ಡ ಬಾಲ್ಕನಿ ಇದೆ. ಇಲ್ಲಿ ಅವರು ತೋಟಗಾರಿಕೆ ಚಟುವಟಿಕೆ ಮಾಡುತ್ತಾರೆ. ಬಾಲ್ಕನಿಯನ್ನು ಹಚ್ಚು ಹಸಿರಿನಿಂದ ಕಂಗೊಳಿಸುವಂತೆ ಸಿದ್ಧಪಡಿಸಲಾಗಿದೆ.

2/5
ಅದ್ಭುತ ಡೈನಿಂಗ್ ಹಾಲ್
ಅದ್ಭುತ ಡೈನಿಂಗ್ ಹಾಲ್

ಕಪಿಲ್ ಶರ್ಮಾ ಅವರು ತಮ್ಮ ಮನೆಯಲ್ಲಿ ಅದ್ಭುತವಾಗಿರುವ ದೊಡ್ಡ ಡೈನಿಂಗ್ ಹಾಲ್ ಹೊಂದಿದ್ದಾರೆ. ಊಟದ ಪ್ರದೇಶದ ಚಾವಣಿಯ ಮೇಲೆ ನಕ್ಷತ್ರದ ದೀಪಗಳನ್ನು ನೇತುಹಾಕಿದ್ದು ಮೆರಗು ನೀಡಿದೆ.

3/5
ಕಪಿಲ್ ಶರ್ಮಾ ಮನೆಯ ವಾಸದ ಕೋಣೆ
ಕಪಿಲ್ ಶರ್ಮಾ ಮನೆಯ ವಾಸದ ಕೋಣೆ

ಕಪಿಲ್ ಶರ್ಮಾ ಅವರ ಮನೆಯಲ್ಲಿ ದೊಡ್ಡ ವಾಸದ ಕೋಣೆಗಳಿವೆ. ಸಾಕಷ್ಟು ಗಾಳಿ ಬೆಳಕು ಬರುವಂತೆ ನಿರ್ಮಿಸಲಾಗಿದೆ. ಅದ್ಭುತವಾಗಿ ಡಿಸೈನ್ ಮಾಡಿರುವ ವಾಸದ ಕೋಣೆ ನೋಡಲು ಅತ್ಯಾಕರ್ಷಕವಾಗಿ ಕಾಣುತ್ತದೆ.  

4/5
ಕಪಿಲ್ ಶರ್ಮಾರ ಮನೆಯ ಉದ್ಯಾನ ನೋಟ(Garden view)
ಕಪಿಲ್ ಶರ್ಮಾರ ಮನೆಯ ಉದ್ಯಾನ ನೋಟ(Garden view)

ಪಂಜಾಬ್‌ನಲ್ಲಿರುವ ಕಪಿಲ್ ಶರ್ಮಾ ಅವರ ಫಾರ್ಮ್‌ಹೌಸ್ ಅತ್ಯುತ್ತಮವಾದ ಉದ್ಯಾನ ನೋಟವನ್ನು ನೀಡುತ್ತದೆ. ಲಿವಿಂಗ್ ರೂಮ್ ದೊಡ್ಡ ಗಾಜಿನ ಕಿಟಕಿಗಳೊಂದಿಗೆ ಕಂದು ಬಣ್ಣದ ಸೋಫಾವನ್ನು ಹೊಂದಿದೆ.  

5/5
ಕಪಿಲ್ ಶರ್ಮಾರ ಮನೆಯ ರಾತ್ರಿ ನೋಟ(Night view)
ಕಪಿಲ್ ಶರ್ಮಾರ ಮನೆಯ ರಾತ್ರಿ ನೋಟ(Night view)

ಕಪಿಲ್ ಶರ್ಮಾರ ಮನೆಯ ರಾತ್ರಿ ನೋಟವು ನೋಡಲು ಅದ್ಭುತವಾಗಿ ಕಾಣುತ್ತದೆ. ಮನೆಯಲ್ಲಿಯೇ ಕುಳಿತುಕೊಂಡು ಇಡೀ ನಗರದ ರಾತ್ರಿ ಸೌಂದರ್ಯವನ್ನು ಒಂದೇ ನೋಟದಲ್ಲಿ ಸವಿಯಬಹುದಾಗಿದೆ. ಕಪಿಲ್ ಶರ್ಮಾ ಕೂಡ ಈ ಸುಂದರ ನೋಟವನ್ನು ಆನಂದಿಸುತ್ತಾರೆ.





Read More