KL Rahul: ಸದ್ಯ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಇರುವ ಕನ್ನಡಿಗ ಅತ್ಯುತ್ತಮ ಪರ್ಫಾಮೆನ್ಸ್ ನೀಡುತ್ತಿದ್ದಾರೆ. ಇದುವರೆಗಿನ 12 ಪಂದ್ಯದಲ್ಲಿ ಒಂದು ಅಜೇಯ ಶತಕ ಮತ್ತು ಮೂರು ಅರ್ಧಶತಕ ಸೇರಿದಂತೆ 148.67 ಸ್ಟ್ರೈಕ್ ರೇಟ್‌ನಲ್ಲಿ ಒಟ್ಟು 504 ರನ್ ಗಳಿಸಿದ್ದಾರೆ.
2013ರಲ್ಲಿ ಐಪಿಎಲ್ ಟೂರ್ನಿಗೆ ಪಾದಾರ್ಪಣೆ ಮಾಡಿದ ಕನ್ನಡಿಗ ಕೆ.ಎಲ್.ರಾಹುಲ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಟೀಂನಲ್ಲಿ ಆಡಿದ್ದರು. ಒಂದೇ ವರ್ಷ ಆರ್‌ಸಿಬಿ ಪರ ಆಡಿದ್ದ ರಾಹುಲ್ 2014ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದಲ್ಲಿ ಸ್ಥಾನ ಪಡೆದರು. ಅಲ್ಲಿ ಎರಡು ವರ್ಷ ಆಡಿದ ರಾಹುಲ್ 2016ರಲ್ಲಿ ಮತ್ತೆ ಆರ್ಸಿಬಿಗೆ ಮರಳಿದ್ದರು. 2017ರ ವೇಳೆ ಗಾಯಕ್ಕೆ ತುತ್ತಾಗಿದ್ದರಿಂದ ಐಪಿಎಲ್ ಆಡಲಿಲ್ಲ. ಮರುವರ್ಷ 2018ರಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನ ಸೇರಿಕೊಂಡಿದ್ದರು. ಅದೇ ವರ್ಷವೇ ಭರ್ಜರಿ ಬ್ಯಾಟಿಂಗ್ ಮಾಡಿದ್ದ ರಾಹುಲ್ ಬರೋಬ್ಬರಿ 659 ರನ್ ಬಾರಿಸಿದ್ದರು. ಇದಷ್ಟೇ ಅಲ್ಲದೆ ಪಂಜಾಬ್ ತಂಡದಲ್ಲಿದ್ದ 4 ವರ್ಷವೂ 600 ರನ್ ಗಡಿ ದಾಟಿಸಿದ್ದರು. ಆದರೆ 2022ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಕ್ಯಾಪ್ಟನ್ ಆಗಿ ಆಯ್ಕೆಯಾದ ರಾಹುಲ್ 2024ರ ಟೂರ್ನಿಯಲ್ಲಿ 520 ರನ್ ಕಲೆ ಹಾಕಿದ್ದರು. 2024ರಲ್ಲಿ ಲಕ್ನೋ ತಂಡದಿಂದ ಹೊರಬಂದ ಅವರು ಸದ್ಯ ಅಂದರೆ 2025ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ.
ಐಪಿಎಲ್ ಟೂರ್ನಿಯಲ್ಲಿ ಇದುವರೆಗೆ 144 ಪಂದ್ಯಗಳನ್ನ ಆಡಿರುವ ಕೆ.ಎಲ್.ರಾಹುಲ್ 135.86ರ ಸ್ಟ್ರೈಕ್ ರೇಟ್‌ನಲ್ಲಿ ಒಟ್ಟು 5,187 ರನ್ಗಳನ್ನ ಗಳಿಸಿದ್ದಾರೆ. ಇದರಲ್ಲಿ 5 ಶತಕಗಳು ಸೇರಿದ್ದು, 40 ಅರ್ಧಶತಕಗಳನ್ನ ಬಾರಿಸಿದ್ದಾರೆ. ಪಂಜಾಬ್ ತಂಡದಲ್ಲಿದ್ದಾಗ ಅಜೇಯ 132 ರನ್ ಹೊಡೆದಿರುವುದು ಅವರ ವೈಯಕ್ತಿಕ ಗರಿಷ್ಠ ರನ್ ಆಗಿದೆ. 446ಕ್ಕೂ ಬೌಂಡರಿ ಬಾರಿಸಿರುವ ರಾಹುಲ್ ಒಟ್ಟು 207 ಸಿಕ್ಸರ್ಗಳನ್ನ ಸಿಡಿಸಿದ್ದಾರೆ. 2020ರಲ್ಲಿ ಪಂಜಾಬ್ ತಂಡದ ಪರ ಕೆ.ಎಲ್.ರಾಹುಲ್ 670 ರನ್ ಗಳಿಸಿದ್ದರು. ಇದೇ ಐಪಿಎಲ್ ಟೂರ್ನಿಗಳಲ್ಲಿ ಗಳಿಸಿರುವ ಗರಿಷ್ಠ ರನ್ ಆಗಿದೆ.
2013 ಆರ್‌ಸಿಬಿ 10 ಲಕ್ಷ ರೂಪಾಯಿ, 2014 ಹೈದರಾಬಾದ್ 1 ಕೋಟಿ ರೂಪಾಯಿ, 2015 ಹೈದರಾಬಾದ್ 1 ಕೋಟಿ ರೂಪಾಯಿ, 2016 ಆರ್‌ಸಿಬಿ 1 ಕೋಟಿ ರೂಪಾಯಿ, 2017 ಆರ್‌ಸಿಬಿ 1 ಕೋಟಿ ರೂಪಾಯಿ, 2018 ಪಂಜಾಬ್ ಕಿಂಗ್ಸ್ 11 ಕೋಟಿ ರೂಪಾಯಿ, 2019 ಪಂಜಾಬ್ ಕಿಂಗ್ಸ್ 11 ಕೋಟಿ ರೂಪಾಯಿ, 2020 ಪಂಜಾಬ್ ಕಿಂಗ್ಸ್ 11 ಕೋಟಿ ರೂಪಾಯಿ, 2021 ಪಂಜಾಬ್ ಕಿಂಗ್ಸ್ 11 ಕೋಟಿ ರೂಪಾಯಿ, 2022 ಲಕ್ನೋ ಸೂಪರ್ ಜೈಂಟ್ಸ್ 17 ಕೋಟಿ ರೂಪಾಯಿ, 2023 ಲಕ್ನೋ ಸೂಪರ್ ಜೈಂಟ್ಸ್ 17 ಕೋಟಿ ರೂಪಾಯಿ, 2024 ಲಕ್ನೋ ಸೂಪರ್ ಜೈಂಟ್ಸ್ 17 ಕೋಟಿ ರೂಪಾಯಿ ಮತ್ತು 2025 ಡೆಲ್ಲಿ ಕ್ಯಾಪಿಟಲ್ಸ್ 14 ಕೋಟಿ ರೂಪಾಯಿಗಳು.
ಲಕ್ನೋ ಸೂಪರ್ ಜೈಂಟ್ಸ್ ತಂಡದಲ್ಲಿಯೂ ಕನ್ನಡಿಗ ಕೆ.ಎಲ್.ರಾಹುಲ್ ಅದ್ಭುತ ಪ್ರದರ್ಶನ ನೀಡಿದ್ದಾರೆ. 2022ರಲ್ಲಿ ತಂಡಕ್ಕೆ ಸೇರಿದ ವರ್ಷವೇ 1 ಶತಕ ಸೇರಿದಂತೆ 616 ರನ್ಗಳನ್ನು ಗಳಿಸಿದ್ದರು. 2023ರಲ್ಲಿ ಗಾಯಕ್ಕೆ ತುತ್ತಾಗಿದ್ದ ರಾಹುಲ್, 9 ಪಂದ್ಯಗಳಿಂದ 274 ರನ್ಗಳ ಗಳಿಸಿದ್ದರು. 2024ರಲ್ಲಿ ನಾಯಕತ್ವದ ಜೊತೆಗೆ ಉತ್ತಮ ಪರ್ಫಾಮೆನ್ಸ್ ನೀಡಿದ್ದ ರಾಹುಲ್ 520 ರನ್ ಗಳಿಸಿದ್ದರು. ಸದ್ಯ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಇರುವ ಕನ್ನಡಿಗ ಅತ್ಯುತ್ತಮ ಪರ್ಫಾಮೆನ್ಸ್ ನೀಡುತ್ತಿದ್ದಾರೆ. ಇದುವರೆಗಿನ 12 ಪಂದ್ಯದಲ್ಲಿ ಒಂದು ಅಜೇಯ ಶತಕ ಮತ್ತು ಮೂರು ಅರ್ಧಶತಕ ಸೇರಿದಂತೆ 148.67 ಸ್ಟ್ರೈಕ್ ರೇಟ್‌ನಲ್ಲಿ ಒಟ್ಟು 504 ರನ್ ಗಳಿಸಿದ್ದಾರೆ.
ಇನ್ನು ಕೆ.ಎಲ್.ರಾಹುಲ್ ಅವರಿಗೆ ಬಿಸಿಸಿಐ ವರ್ಷಕ್ಕೆ 3.5 ಕೋಟಿ ರೂಪಾಯಿ ಸಂಭಾವನೆ ನೀಡುತ್ತಿದೆ. ಇದರ ಜೊತೆಗೆ ಕೆ.ಎಲ್.ರಾಹುಲ್ ಅವರ ಒಟ್ಟು ಆಸ್ತಿ 50ರಿಂದ ನೂರು ಕೋಟಿ ರೂಪಾಯಿಗೂ ಹೆಚ್ಚು ಏರಿಕೆ ಕಂಡಿದೆ ಎನ್ನಲಾಗಿದೆ. ಒಟ್ಟಾರೆ ಹೇಳಬೇಕೆಂದರೆ ಕನ್ನಡಿಗ ರಾಹುಲ್ ಅವರು ಭಾರತೀಯ ತಂಡದ ದುಬಾರಿ ಆಟಗಾರ ಎನ್ನುವುದರಲ್ಲಿ ಎರಡು ಮಾತಿಲ್ಲ.