PHOTOS

ನಿಮ್ಮ ಹೆಂಡತಿಗೆ ನೀವು ʼಅದುʼ ಮಾಡಿದ್ದು ಇಷ್ಟವಾಗಿದ್ಯಾ ಅಥವಾ ಇಲ್ವಾ ಅಂತಾ ತಿಳಿಯೋದು ಹೇಗೆ?

ಗಂಡ ತಾನು ಮಾಡುವ ರೊಮ್ಯಾನ್ಸ್​ ಹೆಂಡತಿಗೆ ಇಷ್ಟವಾಗಿದೆಯಾ ಅಥವಾ ಇಲ್ಲವಾ ಅನ್ನೋದನ್ನ ತಿಳಿಯುವುದು ಹೇಗೆ? ನೇರವಾಗಿ ಕೇಳದೆ ತಿಳಿದುಕೊಳ್ಳುವ ಬೇರೆ ಯಾವುದಾದರೂ ವಿಧಾನ ಇದೆಯಾ? ಇದಕ್ಕೆ ಏನು ಉತ್ತರ? ಏನು ಮಾಡಿದರೆ ತಿಳಿದುಕೊಳ್ಳಬಹುದು? ಈ ಕುರಿತು ಕೆಲವು ಮಾಹಿತಿ ಇಲ್ಲಿದೆ ನೋಡಿ...

Advertisement
1/5
ಷ್ಟವಾಗಿದೆಯಾ ಅಥವಾ ಇಲ್ಲವಾ?
ಷ್ಟವಾಗಿದೆಯಾ ಅಥವಾ ಇಲ್ಲವಾ?

ಹಲವು ಸಲ ಪತ್ನಿ ಬಾಯ್ಬಿಟ್ಟು ಅವರ ಇಷ್ಟ-ಕಷ್ಟಗಳ ಬಗ್ಗೆ ನಿಮಗೆ ಹೇಳದಿರಬಹುದು. ಅದೇ ರೀತಿ ಗಂಡನೂ ಹೆಂಡತಿ ಕೇಳದೆಯೂ ಇರಬಹುದು. ಎಲ್ಲಕ್ಕಿಂತ ಹೆಚ್ಚಾಗಿ ರೊಮ್ಯಾನ್ಸ್ ವೇಳೆ ಇಬ್ಬರೂ ಮೌನದ ಮೊರೆ ಹೋಗಿ ಆ ಕ್ಷಣವನ್ನ ಎಂಜಾಯ್ ಮಾಡುವುದರಲ್ಲಿ ಬ್ಯುಸಿಯಾಗಬಹುದು. ಆದರೆ ಈ ವೇಳೆ ಗಂಡ ತಾನು ಮಾಡುವ ರೊಮ್ಯಾನ್ಸ್​ ಹೆಂಡತಿಗೆ ಇಷ್ಟವಾಗಿದೆಯಾ ಅಥವಾ ಇಲ್ಲವಾ? ಅನ್ನೋದನ್ನ ತಿಳಿಯುವುದು ಹೇಗೆ? ನೇರವಾಗಿ ಕೇಳದೆ ತಿಳಿದುಕೊಳ್ಳುವ ಬೇರೆ ಯಾವುದಾದರೂ ವಿಧಾನ ಇದೆಯಾ? ಇದಕ್ಕೆ ಏನು ಉತ್ತರ? ಏನು ಮಾಡಿದರೆ ತಿಳಿದುಕೊಳ್ಳಬಹುದು? ಈ ಕುರಿತು ಕೆಲವು ಮಾಹಿತಿ ಇಲ್ಲಿದೆ ನೋಡಿ. 

2/5
ಸಂಗಾತಿಯನ್ನ ಗಮನಿಸುವುದು
ಸಂಗಾತಿಯನ್ನ ಗಮನಿಸುವುದು

ನಿಮ್ಮ ಸಂಗಾತಿಯನ್ನು ಗಮನಿಸುವುದು ತುಂಬಾ ಮುಖ್ಯ. ನಿಮ್ಮ ಪತ್ನಿಯ ಮುಖವನ್ನು ಮತ್ತು ದೇಹದ ರಿಯಾಕ್ಷನ್​ಗಳನ್ನು ಗಮನಿಸಬೇಕು. ಆಗ ಅವರು ನಿಮ್ಮ ರೊಮ್ಯಾನ್ಸ್ ಎಂಜಾಯ್ ಮಾಡುತ್ತಿದ್ದರೆ ಅದು ನಿಮಗೆ ಸ್ಪಷ್ಟವಾಗಿ ತಿಳಿಯುತ್ತದೆ. ಇಲ್ಲದಿದ್ದರೆ ಅದೂ ನಿಮಗೆ ಗೊತ್ತಾಗುತ್ತದೆ. ಅವರ ಇಷ್ಟ-ಕಷ್ಟಗಳನ್ನ ಅರಿತು ರೊಮ್ಯಾನ್ಸ್‌ ಮಾಡುವುದು ಉತ್ತಮ. ಇಷ್ಟವಿಲ್ಲದ ರೊಮ್ಯಾನ್ಸ್‌ ಯಾವುದೇ ಕಾರಣಕ್ಕೂ ಪ್ರಯೋಜನಕ್ಕೆ ಬರುವುದಿಲ್ಲ.

3/5
ಕಮ್ಯುನಿಕೇಷನ್ ಒಂದೇ ಪರಿಹಾರ
ಕಮ್ಯುನಿಕೇಷನ್ ಒಂದೇ ಪರಿಹಾರ

ನೀವು ರೊಮ್ಯಾನ್ಸ್ ಮಾಡುವಾಗ ನಿಮ್ಮ ಪತ್ನಿಯನ್ನ ಸೂಕ್ಷ್ಮವಾಗಿ ಗಮನಿಸಬೇಕು. ಅವರ ದೇಹದಲ್ಲಿ ಮತ್ತು ಮುಖದಲ್ಲಿ ಆಗುವ ಬದಲಾವಣೆಗಳು ಹಾಗೂ ಎಕ್ಸೈಟ್​​ಮೆಂಟ್​​ಗಳು... ಅವರು ಯಾವಾಗ ಡಲ್ ಆಗುತ್ತಾರೆ ಅನ್ನೋದನ್ನೂ ಗಮನಿಸಬೇಕು. ಅವರು ಎಕ್ಸೈಟ್ ಆಗುವಾಗ ನೀವು ಮಾಡುತ್ತಿರುವ ರೊಮ್ಯಾನ್ಸ್ ಸರಿಯಾಗಿದೆ ಎಂದರ್ಥ. ಇದಕ್ಕೆ ಸರಿಯಾದ ಕಮ್ಯುನಿಕೇಷನ್ ಒಂದೇ ಪರಿಹಾರ. ಮೇಲೆ ಹೇಳಿದ ವಿಧಾನಗಳ ಮೂಲಕ ಪತ್ನಿ ನಿಮ್ಮ ರೊಮ್ಯಾನ್ಸ್​ ಎಂಜಾಯ್ ಮಾಡುತ್ತಿದ್ದಾರಾ ಅಥವಾ ಇಲ್ಲವಾ ಎಂಬುದನ್ನ ತಿಳಿಯಬಹುದು.

4/5
ಎಕ್ಸೈಟ್ ಪಾಯಿಂಟ್
ಎಕ್ಸೈಟ್ ಪಾಯಿಂಟ್

ನೀವು ನಿಮ್ಮ ಪತ್ನಿಯ ಪೂರ್ತಿ ದೇಹಕ್ಕೆ ಕಿಸ್ ಮಾಡಬಹುದು. ಈ ರೀತಿ ರೊಮ್ಯಾನ್ಸ್ ಮಾಡುವಾಗ ಅವರು ಯಾವಾಗ ಕಣ್ಣನ್ನು ಅರೆಮುಚ್ಚುತ್ತಾರೋ, ಅರ್ಧ ಕಣ್ಣನ್ನು ಮುಚ್ಚುತ್ತಾರೋ ಅಥವಾ ವಾಸ್ತವತೆ ಇಲ್ಲದೆ ಬೇರೆಯದೇ ಲೋಕದಲ್ಲಿರುವಂತೆ ಕಾಣಿಸುತ್ತಾರೋ ಅದು ಅವರ ಎಕ್ಸೈಟ್ ಪಾಯಿಂಟ್ ಅನ್ನೋದನ್ನ ನೀವು ಸರಿಯಾಗಿ ಅರ್ಥ ಮಾಡಿಕೊಳ್ಳಬಹುದು.

5/5
ಮುಕ್ತವಾಗಿ ಮಾತನಾಡಿ
ಮುಕ್ತವಾಗಿ ಮಾತನಾಡಿ

ಇದನ್ನ ಹೊರತುಪಡಿಸಿ ನಿಮ್ಮ ಪತ್ನಿಯಲ್ಲಿ ನೀವು ಮುಕ್ತವಾಗಿ ಮಾತನಾಡಿಯೂ ಕೇಳಬಹುದು. ಯಾವ ರೀತಿಯ ರೊಮ್ಯಾನ್ಸ್ ಅಥವಾ ಯಾವ ಸ್ಟೈಲ್ ಅವರಿಗೆ ಇಷ್ಟವಾಗಿದೆ? ಯಾವುದನ್ನು ಅವರು ಹೆಚ್ಚು ಎಂಜಾಯ್ ಮಾಡುತ್ತಾರೆ ಮುಂತಾದ ಪ್ರಶ್ನೆಗಳನ್ನ ನೀವು ಪ್ರೀತಿಯಿಂದ ಕೇಳಿ ತಿಳಿದುಕೊಳ್ಳಬಹುದು. ಮುಕ್ತವಾಗಿ ಮಾತನಾಡುವ ಮೂಲಕ ಈ ಗೊಂದಲವನ್ನ ಪರಿಹರಿಸಿಕೊಳ್ಳಬಹುದು. ಇದು ಪತ್ನಿಗೂ ಸಹ ಅನ್ವಯಿಸುತ್ತದೆ. ತನ್ನ ಪತಿಗೆ ಇಷ್ಟವಾಗುವುದನ್ನ ಕೇಳಿ ತಿಳಿದುಕೊಂಡು ರೊಮ್ಯಾನ್ಸ್ ಅನ್ನ ಎಂಜಾಯ್‌ ಮಾಡಬಹುದು. ಹೀಗೆ ಮಾಡಿದಾಗ ಮಾತ್ರ ನಿಮ್ಮ ಜೀವನ ಸುಖಮಯವಾಗಿರುತ್ತದೆ. 

(ಗಮನಿಸಿ: ಈ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಮನೆಮದ್ದುಗಳನ್ನು ಆಧರಿಸಿರುತ್ತದೆ. ಇಲ್ಲಿನ ಸಲಹೆ ಸೂಚನೆಗಳನ್ನು ಅಳವಡಿಸಿಕೊಳ್ಳವು ಮೊದಲು ನೀವು ಕಡ್ಡಾಯವಾಗಿ ತಜ್ಞರ ಸಲಹೆ ಪಡೆದುಕೊಳ್ಳಬೇಕು. Zee Kannada News ಇದನ್ನು ದೃಢಪಡಿಸುವುದಿಲ್ಲ.)





Read More