ಮೂರು ರಾಶಿಯವರ ಜೀವನದಲ್ಲಿ ಶುಕ್ರ ಮಹಾದೆಸೆ ಇರಲಿದೆ. ಈ ಸಮಯದಲ್ಲಿ ಜೀವನದಲ್ಲಿ ನಡೆಯುವ ಪ್ರತಿ ಘಟನೆಗಳು ನಮ್ಮ ಪರವಾಗಿಯೇ ಇರುವುದು. ಇಲ್ಲಿ ಸೋಲಿಗೆ ಜಾಗ ಇರುವುದಿಲ್ಲ.
ಶುಕ್ರ ಮಹಾದೆಸೆ ಎನ್ನುವುದು ಒಂದೆರಡು ವರ್ಷ ಅಲ್ಲ. ಬರೋಬ್ಬರಿ 20 ವರ್ಷಗಳವರೆಗೆ ಇರುವುದು.ಆ ಕಾರಣದಿಂದಲೇ ಅದನ್ನು ಮಹಾದೆಸೆ ಎಂದು ಕರೆಯಲಾಗುತ್ತದೆ.
ಮೂರು ರಾಶಿಯವರ ಜೀವನದಲ್ಲಿ ಶುಕ್ರ ಮಹಾದೆಸೆಯ ಕಾರಣ 20 ವರ್ಷಗಳ ಕಾಲ ಅದೃಷ್ಟದ ಪರ್ವ ಕಾಲ. ಜೀವನದಲ್ಲಿ ಸಕಲ ರೀತಿಯ ಸುಖ, ಸೌಕರ್ಯ, ಸಿರಿ ಸಂಪತ್ತು ಹರಿದು ಬರುತ್ತದೆ. ಹೆಜ್ಜೆ ಹೆಜ್ಜೆಗೂ ಗೆಲುವು ನಿಮ್ಮದಾಗುವುದು.
ವೃಷಭ ರಾಶಿ : ಎಲ್ಲಾ ಕೆಲಸಗಳು ನೀವು ಅಂದುಕೊಂಡಂತೆಯೇ ನಡೆಯುವುದು. ಹಣಕಾಸಿನ ಸ್ಥಿತಿ ಭದ್ರವಾಗುವುದು. ನಿಮ್ಮಿಂದ ಏನು ಮಾಡಲು ಸಾಧ್ಯವಿಲ್ಲ ಎನ್ನುವವರು ಕೂಡಾ ನೀವೇ ಎಲ್ಲಾ ಎನ್ನುವಂಥ ಕಾಲ. ಜೀವನದಲ್ಲಿ ಬರೀ ಸಂತೋಷವೇ ಇರುವುದು.
ತುಲಾ ರಾಶಿ : ಕಷ್ಟಗಳು ಕೊನೆಯಾಗುವುದು. ನೆಮ್ಮದಿಯ ಜೀವನ ನಿಮ್ಮದಾಗುವುದು. ನಿಮ್ಮ ಪ್ರತಿ ನಿರ್ಧಾರ ಗೆಲುವಿಗೆ ಕಾರಣವಾಗುವುದು. ಹಣಕಾಸಿನ ಸಮಸ್ಯೆ ನೀಗುವುದು.
ಕನ್ಯಾ ರಾಶಿ :ನಿಮ್ಮ ಜೀವನದಲ್ಲಿ ತಾಳ್ಮೆ ಬಹಳ ಮುಖ್ಯ. ತಾಳ್ಯಿಂದಲೇ ಎಲ್ಲರನ್ನೂ ಸೋಲಿಸುವುದು ಸಾಧ್ಯವಾಗುತ್ತದೆ. ಮನೆ ನಿರ್ಮಾಣ, ವಾಹನ ಖರೀದಿ ಕನಸು ನನಸಾಗುವುದು. ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳಿ.
ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳನ್ನು ಆಧರಿಸಿದೆ. Zee News ಅದನ್ನು ಖಚಿತಪಡಿಸುವುದಿಲ್ಲ.