Shocking Viral News: ಇತ್ತೀಚಿನ ದಿನಗಳಲ್ಲಿ ಪ್ರೇಮ ಪ್ರಕರಣಗಳಿಗೆ ಸಂಬಂಧಿಸಿದ ವಿಚಿತ್ರ ಘಟನೆಗಳು ಬೆಳಕಿಗೆ ಬರುತ್ತಿವೆ. ಇದಕ್ಕೆ ಸಾಕ್ಷಿ ಎಂಬಂತೆ ಹರಿಯಾಣದಲ್ಲಿ ಘಟನೆಯೊಂದು ನಡೆದಿದ್ದು, ಮಲತಾಯಿ, ತನ್ನ ಮಗನೊಂದಿಗೆಯೇ ಓಡಿಹೋಗಿ ಮದುವೆಯಾಗಿದ್ದಾಳೆ.
ಇತ್ತೀಚಿನ ದಿನಗಳಲ್ಲಿ ಪ್ರೇಮ ಪ್ರಕರಣಗಳಿಗೆ ಸಂಬಂಧಿಸಿದ ವಿಚಿತ್ರ ಘಟನೆಗಳು ಬೆಳಕಿಗೆ ಬರುತ್ತಿವೆ. ಇದಕ್ಕೆ ಸಾಕ್ಷಿ ಎಂಬಂತೆ ಹರಿಯಾಣದಲ್ಲಿ ಘಟನೆಯೊಂದು ನಡೆದಿದ್ದು, ಮಲತಾಯಿ, ತನ್ನ ಮಗನೊಂದಿಗೆಯೇ ಓಡಿಹೋಗಿ ಮದುವೆಯಾಗಿದ್ದಾಳೆ.
ಹರಿಯಾಣದ ನುಹ್ ಜಿಲ್ಲೆಯ ಬಸ್ದಲ್ಲಾ ಗ್ರಾಮದ ನಿವಾಸಿ ರಾಮ್ ಕಿಶನ್ ಎಂಬ ವ್ಯಕ್ತಿಯ ಪತ್ನಿ ಸೋಹ್ನಾ ತನ್ನ ಮಗನನ್ನು ಮದುವೆಯಾಗಿದ್ದಾಳೆ ಎಂದು ವರದಿಯಾಗಿದೆ. ಈ ಸಂಬಂಧ ಪೊಲೀಸರಿಗೆ ದೂರು ಕೂಡ ದಾಖಲಾಗಿದೆ.
ರಾಮ್ ಕಿಶನ್ 18 ವರ್ಷಗಳ ಹಿಂದೆ ಫಿರೋಜಾಬಾದ್‌ನ ಮಹಿಳೆಯನ್ನು ವಿವಾಹವಾಗಿದರು. ಆ ನಂತರ, ದಂಪತಿಗೆ ಒಂದು ಗಂಡು ಮಗು ಜನಿಸಿತು. ಮಗು ಜನಿಸಿದ ಕೆಲವು ವರ್ಷಗಳ ಬಳಿಕ, ರಾಮ್ ಕಿಶನ್ ಅವರ ಪತ್ನಿ ಅನಾರೋಗ್ಯದಿಂದ ನಿಧನರಾದರು. ಹೀಗಿದ್ದಾಗ ಮೂರು ವರ್ಷಗಳ ನಂತರ, ರಾಮ್ ಕಿಶನ್ ಸೋಹ್ನಾ ಎಂಬ ಇನ್ನೊಬ್ಬ ಮಹಿಳೆಯನ್ನು ವಿವಾಹವಾಗಿದ್ದರು.
ಅಂದಹಾಗೆ ರಾಮ್‌ಕಿಶನ್ ಅವರ ಮೊದಲ ಹೆಂಡತಿ ಮಗ ಹಲವು ವರ್ಷಗಳಿಂದ ತಂದೆಯಿಂದ ದೂರವಿದ್ದ. ಆದರೆ ಇತ್ತೀಚೆಗೆ ಕೆಲಸದ ನಿಮಿತ್ತ ನಗರಕ್ಕೆ ಬಂದಿದ್ದ. ಈ ಸಂದರ್ಭದಲ್ಲಿ ಇವರಿಬ್ಬರ ನಡುವೆ ಪ್ರೀತಿ ಮೂಡಿದೆ. ಈಗ ಆಕೆ ರಾಮ್ ಕಿಶೋರ್‌ಗೆ ಹೇಳದೆ ಮಗನೊಂದಿಗೆ ಓಡಿಹೋಗಿದ್ದಾಳೆ.
ಅಷ್ಟೇ ಅಲ್ಲದೆ, ಮನೆಯಿಂದ 30,000 ರೂ. ನಗದು ಮತ್ತು ಆಭರಣಗಳನ್ನು ಕೂಡ ತೆಗೆದುಕೊಂಡು ಹೋಗಿದ್ದಾಳೆ ಎಂದು ರಾಮ್ ಕಿಶನ್ ಪೊಲೀಸರಿಗೆ ತಿಳಿಸಿದ್ದಾರೆ.