PHOTOS

ಬಿಗ್‌ ಬಾಸ್‌ ತಂಡದ ಪ್ರೆಸ್‌ಮೀಟ್‌ ಬೆನ್ನಲ್ಲೇ... ಸೀಸನ್‌ 12ರ ಸ್ಪರ್ಧಿಗಳ ಹೆಸರು ಲೀಕ್‌!! ಡಾ.ಬ್ರೋ, KGF ನಟಿ... See More

Bigg Boss Season 12: ಕೊನೆಗೂ ಬಿಗ್ ಬಾಸ್ ಸೀಸನ್ 12ರ ಹೋಸ್ಟ್‌ ಯಾರೆಂಬುದು ಗೊತ್ತಾಗಿದೆ. ಕಿಚ್ಚ ಸುದೀಪ್‌ ಅವರೇ ಮುಂದಿನ ಸೀಸನ್‌ ನಡೆಸಿಕೊಡಲಿದ್ದಾರೆ ಎಂದು ಕಳೆದ ಕೆಲ ದಿನಗಳ ಹಿಂದೆ ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟನೆ ನೀಡಲಾಗಿತ್ತು

Advertisement
1/8
ಬಿಗ್ ಬಾಸ್
ಬಿಗ್ ಬಾಸ್

ಕೊನೆಗೂ ಬಿಗ್ ಬಾಸ್ ಸೀಸನ್ 12ರ ಹೋಸ್ಟ್‌ ಯಾರೆಂಬುದು ಗೊತ್ತಾಗಿದೆ. ಕಿಚ್ಚ ಸುದೀಪ್‌ ಅವರೇ ಮುಂದಿನ ಸೀಸನ್‌ ನಡೆಸಿಕೊಡಲಿದ್ದಾರೆ ಎಂದು ಕಳೆದ ಕೆಲ ದಿನಗಳ ಹಿಂದೆ ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟನೆ ನೀಡಲಾಗಿತ್ತು. ಈ ಬೆನ್ನಲ್ಲೇ ಸೋಶಿಯಲ್‌ ಮೀಡಿಯಾದಲ್ಲಿ ವರದಿಯೊಂದು ಹರಿದಾಡುತ್ತಿದ್ದು, ಅದರ ಪ್ರಕಾರ ಈ ಬಾರಿ ದೊಡ್ಮನೆ ಒಳಗೆ ಯಾರ್ಯಾರು ಎಂಟ್ರಿ ಪಡೆಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. 

 

2/8
ಬಿಗ್ ಬಾಸ್ ಸೀಸನ್ 12
ಬಿಗ್ ಬಾಸ್ ಸೀಸನ್ 12

ಕಿಚ್ಚ ಸುದೀಪ್ ಈ ಬಾರಿ ಮಾತ್ರವಲ್ಲ ಮುಂದಿನ 4 ಸೀಸನ್‌ಗಳನ್ನೂ ಹೋಸ್ಟ್ ಮಾಡಲಿದ್ದಾರೆ. ಆದರೆ ಹೊಸ ಸೀಸನ್ ಯಾವಾಗ ಪ್ರಾರಂಭವಾಗುತ್ತದೆ? ಯಾರೆಲ್ಲಾ ಸ್ಪರ್ಧಿಗಳಿದ್ದಾರೆ ಎಂಬದಕ್ಕೆ ಉತ್ತರ ಸಿಕ್ಕಿಲ್ಲ. ಅನೇಕ ಹೆಸರುಗಳು ಈಗಾಗಲೇ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ. ಅಂತಹ ಹೆಸರುಗಳಲ್ಲಿ ಸಂಭಾವ್ಯ ಸ್ಪರ್ಧಿಗಳು ಯಾರೆಂಬುದನ್ನು ತಿಳಿಯೋಣ. 

 

3/8
ಚಂದನ್ ಶರ್ಮಾ
ಚಂದನ್ ಶರ್ಮಾ

ಚಂದನ್ ಶರ್ಮಾ: ಬಿಗ್ ಬಾಸ್ ಸೀಸನ್ 12 ಪ್ರಾರಂಭವಾಗುವ ಮೊದಲು ಪ್ರಸಿದ್ಧ ಸುದ್ದಿ ನಿರೂಪಕ ಚಂದನ್ ಶರ್ಮಾ ಅವರ ಹೆಸರು ಕೇಳಿಬಂದಿದೆ. ಈ ಬಾರಿಯ ಬಿಗ್‌ ಬಾಸ್‌ಗೆ ಎಂಟ್ರಿ ಕೊಡಲಿದ್ದಾರೆ ಎನ್ನಲಾಗುತ್ತಿದೆ. ಕನ್ನಡ ಸುದ್ದಿ ವಾಹಿನಿಗಳಲ್ಲಿ ಚಂದನ್‌ ಶರ್ಮಾ ಪ್ರಸಿದ್ಧಿ ಪಡೆದಿದ್ದು, ಮಾಧ್ಯಮ ಪ್ರಪಂಚದಿಂದ ಇವರನ್ನು ಆಯ್ಕೆ ಮಾಡುವ ಸಾಧ್ಯತೆ ಹೆಚ್ಚಿದೆ. 

4/8
ಡಾ. ಬ್ರೋ
ಡಾ. ಬ್ರೋ

ಡಾ. ಬ್ರೋ: ಯೂಟ್ಯೂಬ್‌ನಲ್ಲಿ ಕನ್ನಡ ನಟರನ್ನೇ ಮೀರಿಸುವಷ್ಟು ಸಬ್‌ಸ್ಕ್ರೈಬರ್ಸ್‌ಗಳನ್ನು ಹೊಂದಿರುವ ಡಾ. ಬ್ರೋ ಖ್ಯಾತಿಯ ಗಗನ್‌ ಈ ಬಾರಿ ಬಿಗ್ ಬಾಸ್‌ಗೆ ಬರುವ ಮಾತು ಕೇಳಿ ಬರುತ್ತಿದೆ. ಈ ಹಿಂದೆಯೂ ಗಗನ್‌ ಬಿಗ್‌ ಬಾಸ್‌ ಮನೆಗೆ ಬರುವ ಗುಸುಗುಸು ಇತ್ತು. ಆದರೆ ಬಂದಿರಲಿಲ್ಲ. ಹೀಗಿರುವಾಗ ಈ ಬಾರಿ ಖಂಡಿತವಾಗಿಯೂ ಬಿಗ್ ಬಾಸ್‌ಗೆ ಬರುತ್ತಾರೆ ಎಂದು ಹೇಳಲಾಗುತ್ತಿದೆ. 

 

5/8
ಅರ್ಚನಾ ಜೋಯಿಸ್
ಅರ್ಚನಾ ಜೋಯಿಸ್

ಅರ್ಚನಾ ಜೋಯಿಸ್: ಕೆಜಿಎಫ್ ಚಿತ್ರದ ಮೂಲಕ ಸದ್ದು ಮಾಡಿದ ನಟಿ ಅರ್ಚನಾ ಜೋಯಿಸ್ ಈ ಬಾರಿ ಬಿಗ್ ಬಾಸ್‌ ಮನೆಗೆ ಪ್ರವೇಶಿಸುವ ಸಾಧ್ಯತೆ ಇದೆ. ಕೆಜಿಎಫ್ ನಲ್ಲಿ ಯಶ್ ತಾಯಿಯಾಗಿ ಅಭಿನಯಿಸಿ, ಭಾರೀ ಜನಮೆಚ್ಚುಗೆ ಪಡೆದಿದ್ದ ಅರ್ಚನಾ ಜೋಯಿಸ್‌ಗೆ ಕೇವಲ 30 ವರ್ಷ.

 

6/8
ಪ್ರಿಯಾಂಕಾ ಉಪೇಂದ್ರ
ಪ್ರಿಯಾಂಕಾ ಉಪೇಂದ್ರ

ಪ್ರಿಯಾಂಕಾ ಉಪೇಂದ್ರ: ಇದು ಅಚ್ಚರಿಯ ಹೆಸರೇ. ರಿಯಲ್ ಸ್ಟಾರ್ ಉಪೇಂದ್ರ ಅವರ ಪತ್ನಿ, ನಟಿ ಪ್ರಿಯಾಂಕಾ ಉಪೇಂದ್ರ ಈ ಬಾರಿ ಬಿಗ್ ಬಾಸ್‌ಗೆ ಬರ್ತಾರೆ ಎಂಬ ಸುದ್ದಿ ಕಳೆದ ಕೆಲವು ದಿನಗಳಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಇದೀಗ ಈ ಮಾತು ನಿಜವಾಗುತ್ತಾ ಎಂದು ಬಿಗ್ ಬಾಸ್ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ.  

 

7/8
ಗಿಲ್ಲಿ
ಗಿಲ್ಲಿ

ಕಾಮಿಡಿ ಖಿಲಾಡಿ ಗಿಲ್ಲಿ: ಬಿಗ್‌ ಬಾಸ್‌ನಲ್ಲಿ ಜಗಳ, ಗಲಾಟೆಗಳ ನಡುವೆ ಮನರಂಜನೆ ಸಿಗುವುದು ಕಾಮಿಡಿಯಿಂದ. ಇದುವರೆಗೆ ಬಿಗ್‌ ಬಾಸ್‌ ತಮಾಷೆಯ ವಿಚಾರದಲ್ಲಿ ಪ್ರೇಕ್ಷಕರಿಗೆ ಮೋಸ ಮಾಡಿಲ್ಲ. ಹೀಗಿರುವಾಗ ಪ್ರತೀಸಲದಂತೆ ಓರ್ವ ಹಾಸ್ಯ ಕಲಾವಿದನನ್ನು ದೊಡ್ಮನೆಗೆ ಕಳುಹಿಸುವ ಸಾಧ್ಯತೆ ಇದೆ. ಈ ಬಾರಿ ಕಾಮಿಡಿ ಖಿಲಾಡಿ ಗಿಲ್ಲಿ ಟ್ರೆಂಡಿಂಗ್‌ನಲ್ಲಿದ್ದು, ಅವರೇ ಬಿಗ್ ಬಾಸ್ ಮನೆಗೆ ಪ್ರವೇಶಿಸುವ ಸಾಧ್ಯತೆಯಿದೆ. 

8/8
ಸಂಭಾವ್ಯ ಸ್ಪರ್ಧಿಗಳ ಪಟ್ಟಿ
ಸಂಭಾವ್ಯ ಸ್ಪರ್ಧಿಗಳ ಪಟ್ಟಿ

ಅಂದಹಾಗೆ ಕಲರ್ಸ್ ಕನ್ನಡ ಚಾನೆಲ್ ಅಧಿಕೃತವಾಗಿ ಸುದೀಪ್ ಬಿಗ್ ಬಾಸ್ ಕನ್ನಡ ಸೀಸನ್ 12 ರ ನಿರೂಪಕರಾಗಲಿದ್ದಾರೆ ಎಂದು ಘೋಷಿಸಿದೆ ಹೊರತು, ಇಲ್ಲಿ ನೀಡಿರುವ ಸ್ಪರ್ಧಿಗಳ ಹೆಸರನ್ನಲ್ಲ. ಇಲ್ಲಿ ನೀಡಲಾದ ಸ್ಪರ್ಧಿಗಳ ಹೆಸರು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ಹೆಸರುಗಳಷ್ಟೆ.





Read More