WhatsApp: ಗೂಗಲ್‌ನಲ್ಲಿರುವಂತೆಯೇ ವಾಟ್ಸಾಪ್‌ನಲ್ಲಿಯೂ ಕೂಡ ಕೆಲವು ನಿಯಮಗಳಿವೆ.
ಈ ತಂತ್ರಜ್ಞಾನ ಯುಗದಲ್ಲಿ ವಾಟ್ಸಾಪ್ ಅತ್ಯಂತ ತ್ವರಿತವಾಗಿ ವಿಷಯ ವಿನಿಮಯ ಮಾಡಲು ಸಹಾಯಕವಾಗುವ ಮಾಧ್ಯಮವಾಗಿದೆ. ಇದರಲ್ಲಿ ಕೇವಲ ಸಂದೇಶವಷ್ಟೇ ಅಲ್ಲ, ಫೋಟೋ-ವಿಡಿಯೋಗಳನ್ನು ಕೂಡ ಶೇರ್ ಮಾಡಬಹುದು.
ಪ್ರಸ್ತುತ, ವಾಟ್ಸಾಪ್ ಅನ್ನು ಕೇವಲ ವೈಯಕ್ತಿಕ ವಿಚಾರಗಳಿಗೆ ಮಾತ್ರವಲ್ಲದೆ ವ್ಯಾವಹಾರಿಕ ಕ್ಷೇತ್ರದಲ್ಲೂ ಬಳಸಲಾಗುತ್ತಿದೆ. ಈ ರೀತಿಯಾಗಿ ತ್ವರಿತ ಮೆಸೇಜಿಂಗ್ ಅಪ್ಲಿಕೇಷನ್ ಆಗಿರುವ ವಾಟ್ಸಾಪ್ ಅನ್ನು ದುರ್ಬಳಕೆ ಮಾಡಿಕೊಳ್ಳುವವರೂ ಇದ್ದಾರೆ.
ಮೆಟಾ ಮಾಲೀಕತ್ವದ ವಾಟ್ಸಾಪ್‌ನಲ್ಲಿ ಹಲವು ನಿಯಮಗಳನ್ನು ರೂಪಿಸಲಾಗಿದೆ. ಈ ಪ್ರಕಾರ, ವಾಟ್ಸಾಪ್‌ನಲ್ಲಿ ಕೆಲವು ವಿಚಾರಗಳನ್ನು ಹಂಚಿಕೊಳ್ಳುವುದನ್ನು ನಿಷೇಧಿಸಲಾಗಿದೆ. ಒಂದೊಮ್ಮೆ ಅಪ್ಪಿತಪ್ಪಿ ಈ ನಿಯಮಗಳನ್ನು ಉಲ್ಲಂಘಿಸಿದರೆ, ಬಳಕೆದಾರರು ಜೈಲು ಪಾಲಗಬಹುದು. ಅಂತಹ ಐದು ವಿಚಾರಗಳು ಯಾವುವೆಂದರೆ...
ವಾಟ್ಸಾಪ್‌ನಲ್ಲಿ ಮಿಸ್ ಆಗಿಯೂ ಸಹ ಸ್ಪ್ಯಾಮ್ ಸಂದೇಶಗಳನ್ನು ಕಳುಹಿಸಬಾರದು.
ತ್ವರಿತ ಮೆಸೇಜಿಂಗ್ ಪ್ಲಾಟ್ಫಾರ್ಮ್ ಆಗಿರುವ ವಾಟ್ಸಾಪ್‌ನಲ್ಲಿ ಸುಳ್ಳು ಸುದ್ದಿಗಳನ್ನು ಹಂಚಿಕೊಳ್ಳುವಂತಿಲ್ಲ.
ವಾಟ್ಸಾಪ್ ವೇದಿಯಲ್ಲಿ ಪೋರ್ನ್ ವಿಷಯಗಳನ್ನು ಹಂಚಿಕೊಳ್ಳುವುದನ್ನು ನಿಷೇಧಿಸಲಾಗಿದೆ. ಒಂದೊಮ್ಮೆ ಅಶ್ಲೀಲ ವಿಷಯಗಳನ್ನು ಶೇರ್ ಮಾಡಿದರೆ ಜೈಲು ಪಾಲಾಗುವುದು ಖಂಡಿತ.
ವಾಟ್ಸಾಪ್‌ನಲ್ಲಿ ಯಾವುದೇ ವ್ಯಕ್ತಿಯ ಫೋಟೋ ಅಥವಾ ಹೆಸರನ್ನು ಬಳಸಿ ತೇಜೋವಧೆ ಮಾಡುವಂತಿಲ್ಲ. ಈ ಬಗ್ಗೆ ಅವರು ದೂರು ನೀಡಿದರೆ ಸಂದೇಶ ರವಾನಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.
ಒಂದೊಮ್ಮೆ ಯಾವುದೇ ವಾಟ್ಸಾಪ್ ಬಳಕೆದಾರರು ನಿಮ್ಮನ್ನು ಸಂಪರ್ಕಿಸಲು ನಿರಾಕರಿಸಿದರೂ ಸಹ ಬಲವಂತವಾಗಿ ಅವರನ್ನು ಸಂಪರ್ಕಿಸಲು ಪ್ರಯತ್ನಿಸಬಾರದು. ಈ ಬಗ್ಗೆ ದೂರು ಸ್ವೀಕರಿಸಿದರೆ ಕ್ರಮ ಜರುಗಿಸಬಹುದು.
ವಾಟ್ಸಾಪ್ ಖಾತೆ ನಿಷೇಧ ಮೇಲೆ ಉಲ್ಲೇಖಿಸಲಾದ ಯಾವುದೇ ವಾಟ್ಸಾಪ್ ನಿಯಮವನ್ನು ಉಲ್ಲಂಘಿಸಿದರೆ ಅಂತಹ ಬಳಕೆದಾರರ ವಾಟ್ಸಾಪ್ ಖಾತೆಯನ್ನು ನಿಷೇಧಿಸಬಹುದು.
ಅಗತ್ಯವಿದ್ದರೆ ಅಂತಹ ಬಳಕೆದಾರರ ವಿರುದ್ಧ ಕಾನೂನು ಕ್ರಮ ಜರುಗಿಸಲು ಅವಕಾಶವಿದ್ದು, ವಾಟ್ಸಾಪ್ ನಿಯಮ ಉಲ್ಲಂಘಿಸಿದವರನ್ನು ಜೈಲಿಗೂ ಕಳುಹಿಸಬಹುದಾಗಿದೆ.