PHOTOS

ಅವನು ನನ್ನ ಬ್ಲೌಸ್‌ ಒಳಗೆ ಕೈ ಹಾಕಿದ.. ನಂತರ..! ದೇವಸ್ಥಾನದಲ್ಲಿ ಅರ್ಚಕನಿಂದ ನಟಿಗೆ ಕಿರುಕುಳ

Lishalliny Kanaran : ಮಲೇಷ್ಯಾದ ರೂಪದರ್ಶಿಯೊಬ್ಬರೂ ತಮಗೆ ಅರ್ಚಕರೊಬ್ಬರು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೆ, ಈ ಕುರಿತು ಸ್ವತಃ ನಟಿ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಸುದೀರ್ಘವಾಗಿ ಬರೆದುಕೊಂಡಿದ್ದಾರೆ. ಪ್ರಸ್ತುತ ನಟಿ ಹೇಳಿಕೆ ಸಂಚಲನ ಸೃಷ್ಟಿಸುತ್ತಿದೆ.

Advertisement
1/7

ಮಲೇಷ್ಯಾದ ರೂಪದರ್ಶಿಯೊಬ್ಬರು ದೇವಾಲಯದಲ್ಲಿ ಆಶೀರ್ವಾದ ನೀಡುವ ನೆಪದಲ್ಲಿ ಅರ್ಚಕನೊಬ್ಬ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಿದ್ದಾರೆ.   

2/7

ರೂಪದರ್ಶಿ ಲಿಶಲ್ಲಿನಿ ಕನರನ್ ಈ ಆರೋಪ ಮಾಡಿದ್ದು, ಸಾಮಾಜಿಕ ಮಾಧ್ಯಮ ಘಟನೆಯ ಕುರಿತು ಬರೆದುಕೊಂಡಿದ್ದಾರೆ. ಕಳೆದ ಶನಿವಾರ ಸೆಪಾಂಗ್‌ನ ಮಾರಿಯಮ್ಮನ್ ದೇವಸ್ಥಾನದಲ್ಲಿ ಈ ಘಟನೆ ನಡೆದಿದೆ ಎಂದು ಹೇಳಿದ್ದಾರೆ.  

3/7

ಇನ್ನು ಘಟನೆ ಬೆನ್ನಲ್ಲೇ ಪೊಲೀಸರು ಅರ್ಚಕನಿಗಾಗಿ ಹುಡುಕಾಟ ಆರಂಭಿಸಿದ್ದಾರೆ ಎಂದು ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ. ಕನರನ್ 2021 ರಲ್ಲಿ ಮಿಸ್ ಗ್ರ್ಯಾಂಡ್ ಮಲೇಷ್ಯಾ ಕಿರೀಟವನ್ನು ಪಡೆದರು.  

4/7

"ಆ ದಿನ, ನಾನು ಪ್ರಾರ್ಥಿಸುತ್ತಿರುವಾಗ, ಅವನು ನನ್ನ ಬಳಿಗೆ ಬಂದು, ನನಗೆ ಕಟ್ಟಿಕೊಳ್ಳಲು ದಾರ ಮತ್ತು ಪವಿತ್ರ ನೀರನ್ನು ನೀಡುವುದಾಗಿ ಹೇಳಿದ. ನಾನು ಅವನನ್ನು ಹಿಂಬಾಲಿಸಿ ಕಚೇರಿಗೆ ಹೋದೆ..   

5/7

ಆಫೀಸ್‌ನಲ್ಲಿ ಪವಿತ್ರ ನೀರನ್ನು ಸುರಿದನು. ಅದು ಭಾರತದಿಂದ ಬಂದಿದ್ದು, ಸಾಮಾನ್ಯ ಜನರಿಗೆ ಇದನ್ನು ನೀಡುವುದಿಲ್ಲ ಎಂದು ತಿಳಿಸಿದ. ನಂತರ, ನನ್ನ ಮೇಲೆ ನೀರು ಚಿಮುಕಿಸುತ್ತಲೇ ತನ್ನ ಸೂಟ್ ಎತ್ತುವಂತೆ ಕೇಳಿಕೊಂಡ ಎಂದು ಲಿಶಲ್ಲಿನಿ ಆರೋಪಿಸಿದ್ದಾರೆ.  

6/7

ಅಲ್ಲದೆ, ಬಿಗಿಯಾದ ಬಟ್ಟೆಗಳನ್ನು ಧರಿಸಿದ್ದಕ್ಕೆ ನನಗೆ ಬೈದು, ತನ್ನ ಕೈಗಳನ್ನು ತನ್ನ ರವಿಕೆಯಲ್ಲಿ ಇಟ್ಟು ಅನುಚಿತವಾಗಿ ಮುಟ್ಟಿದ. ಯಾವುದೇ ಮುನ್ಸೂಚನೆ ನೀಡದೆ, ನನ್ನ ಬ್ಲೌಸ್‌ನೊಳಗೆ ಹಾಕಿದ ಅನುಚಿತವಾಗಿ ವರ್ತಿಸಲು ಪ್ರಾರಂಭಿಸಿದ. ತಕ್ಷಣ ನನಗೆ ಅದರ ಹಿಂದಿನ ಮರ್ಮ ಅರ್ಥವಾಯ್ತು ಅಂತ ಲಿಶಲ್ಲಿನಿ ಘಟನೆಯ ಬಗ್ಗೆ ವಿವರಿಸಿದರು.  

7/7

ಶಂಕಿತ ವ್ಯಕ್ತಿ ದೇವಾಲಯದಲ್ಲಿ ತಾತ್ಕಾಲಿಕವಾಗಿ ಸೇವೆ ಸಲ್ಲಿಸುತ್ತಿರುವ ಭಾರತೀಯ ಪ್ರಜೆ ಎಂದು ನಂಬಲಾಗಿದೆ ಎಂದು ಸೆಪಾಂಗ್ ಜಿಲ್ಲಾ ಪೊಲೀಸ್ ಮುಖ್ಯಸ್ಥ ನೋರ್ಹಿಜಾಮ್ ಬಹಮಾನ್ ಹೇಳಿದ್ದಾರೆ. ಪ್ರಕರಣ ತನಿಖೆ  ನಡೆಯುತ್ತಿದೆ..  





Read More