ಗುರು ಗ್ರಹದ ರಾಶಿ ಪರಿವರ್ತನೆಕೆಲವರು ರಾಶಿಯವರ ಜೀವನದಲ್ಲಿ ಅದೃಷ್ಟವನ್ನು ಹೊತ್ತು ತರಲಿದೆ.
ಗುರು ಗ್ರಹ ಮಿಥುನ ರಾಶಿಯಿಂದ ಕರ್ಕಾಟಕ ರಾಶಿಗೆ ಸ್ಥಳಾಂತರಗೊಳ್ಳಲಿದೆ. ಗುರು ಗ್ರಹದ ರಾಶಿ ಪರಿವರ್ತನೆಕೆಲವರು ರಾಶಿಯವರ ಜೀವನದಲ್ಲಿ ಅದೃಷ್ಟವನ್ನು ಹೊತ್ತು ತರಲಿದೆ.
ಗುರುವು ಕರ್ಕಾಟಕ ರಾಶಿಗೆ ಪ್ರವೇಶಿಸಿದಾಗ, ಮೂರು ರಾಶಿಯವರ ಬಾಳು ಬೆಳಗಲಿದೆ. ಇದರ ಜೊತೆಗೆ ಗುರು ಪ್ರಸ್ತುತ ಉದಯಿಸುತ್ತಿದ್ದು, ಈ ರಾಶಿಯವರ ಸುವರ್ಣ ಯುಗ ಆರಂಭವಾಗಲಿದೆ.
ತುಲಾ ರಾಶಿ : ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗುವುದು. ಕಷ್ಟಪಟ್ಟು ಮಾಡುವ ಕೆಲಸಕ್ಕೆ ತಕ್ಕ ಪ್ರತಿಫಲ ಸಿಗುವುದು. ಸಲ ತೀರಿ ನೆಮ್ಮದಿಯ ಜೀವನ ನಿಮ್ಮದಾಗುವುದು. ಜಮೀನು ಅಥವಾ ಮನೆ ಖರೀದಿ ಯೋಗವಿದೆ.
ವೃಶ್ಚಿಕ ರಾಶಿ : ಅದೃಷ್ಟ ನಿಮ್ಮ ಕಡೆಗೆ ಇರಲಿದೆ. ಉತ್ತಮ ಅವಕಾಶಗಳು ನಿಮ್ಮ ಪಾಲಿಗೆ ಒಲಿದು ಬರುವುದು. ಹೊಸ ಉದ್ಯೋಗ ಸಿಗುವ ಸಾಧ್ಯತೆಗಳಿವೆ.
ಮೀನ ರಾಶಿ : ಎಲ್ಲಾ ಕ್ಷೇತ್ರದಲ್ಲಿಯೂ ಯಶಸ್ಸು ನಿಮ್ಮದೇ ಆಗಿರುವುದು. ಹಠಾತ್ ಆರ್ಥಿಕ ಲಾಭವಾಗುವುದು. ಕಚೇರಿಯಲ್ಲಿ ಹಿರಿಯರ ಅಧಿಕಾರಿಗಳು ನಿಮ್ಮ ಕೆಲಸದಿಂದ ಖುಷಿಯಾಗಿರುತ್ತಾರೆ. ಬಡ್ತಿ ಸಿಗುವ ಸಾಧ್ಯತೆ ಹೆಚ್ಚಿದೆ.
ಈ ಲೇಖನವನ್ನು ಸಾಮಾನ್ಯ ಮಾಹಿತಿ ಮತ್ತು ಧಾರ್ಮಿಕ ನಂಬಿಕೆಯ ಆಧಾರದಲ್ಲಿ ಬರೆಯಲಾಗಿದೆ. ಇದನ್ನು ಜೀ ನ್ಯೂಸ್ ಕನ್ನಡ ಅನುಮೋದಿಸುವುದಿಲ್ಲ.