PHOTOS

Rakshith Shetty: ಅಯೋಧ್ಯೆಯಲ್ಲಿ ಬಾಲ ರಾಮನ ದರ್ಶನ ಪಡೆದ ಸಿಂಪಲ್‌ ಸ್ಟಾರ್!

Rakshith Shetty At Ayodhya Ram Mandir: ಸ್ಯಾಂಡಲ್‌ವುಡ್‌ ಸಿಂಪಲ್‌ ಸ್ಟಾರ್‌ ರಕ್ಷಿತ್‌ ಶೆಟ್ಟಿ ಇತ್ತೀಚೆಗೆ ಶ್ರೀರಾಮನ ಜನ್ಮ ಭೂಮಿ ಅಯೋಧ್ಯೆಗೆ ತೆರೆಳಿ ಅಲ್ಲಿಯ ರಾಮಮಂದಿರಲ್ಲಿವರು ಬಾಲ ರಾಮನ ದರ್ಶನ ಪಡೆದುಕೊಂಡಿದ್ದಾರೆ. ಹಾಗೆಯೇ ಅಲ್ಲಿ ತೆಗೆಸಿಕೊಂಡ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಿದ್ದಾರೆ. 
 
Advertisement
1/6
Rakshith Shetty At Ayodhya Sree Ram Temple
Rakshith Shetty At Ayodhya Sree Ram Temple

ಚಂದನವನದ ಸಿಂಪಲ್‌ ಸ್ಟಾರ್‌ ರಕ್ಷಿತ್‌ ಶೆಟ್ಟಿ ಅಯೋಧ್ಯೆಯ ರಾಮ ಮಂದಿರದಲ್ಲಿರುವ ಬಾಲ ರಾಮನ ದರ್ಶನ ಪಡೆದು ಕಣ್ತುಂಬಿಕೊಂಡಿದ್ದಾರೆ.

2/6
Rakshith Shetty At Ayodhya Sree Ram Temple
Rakshith Shetty At Ayodhya Sree Ram Temple

ನಟ ರಕ್ಷಿತ್‌ ಶೆಟ್ಟಿ ಅಯೋಧ್ಯೆಯಲ್ಲಿ ಸಾಂಪ್ರದಾಯಿಕ ಉಡುಗೆ ಜುಬ್ಬಾ, ಪೈಜಾಮ ಧರಿಸಿರುವುದರ ಜೊತೆಗೆ ಹಳದಿ ಶಾಲು ಹಾಕಿಕೊಂಡು ಶ್ರೀರಾಮನ ಜಪವನ್ನು ಮಾಡಿದ್ದಾರೆ.

3/6
Rakshith Shetty At Ayodhya Sree Ram Temple
Rakshith Shetty At Ayodhya Sree Ram Temple

ಸಿಂಪಲ್‌ ಸ್ಟಾರ್‌ ರಕ್ಷಿತ್‌ ಶೆಟ್ಟಿ ರಾಮ ಮಂದಿರದ ಮುಂದೆ ನಿಂತು ಫೋಟೋಗೆ ಪೋಸ್‌  ಕೊಡುವುದರ ಜೊತೆಗೆ ಅಭಿಮಾನಿಗಳ ಜೊತೆ ಕೂಡ ನಿಂತುಕೊಂಡು ಫೋಟೋಗೆ ಪೋಸ್ ನೀಡಿದ್ದಾರೆ.

4/6
Rakshith Shetty At Ayodhya Sree Ram Temple
Rakshith Shetty At Ayodhya Sree Ram Temple

ನಟ ರಕ್ಷಿತ್‌ ಶೆಟ್ಟಿ ಅಯೋಧ್ಯೆಯಲ್ಲಿ ಕಾಲ ಕಳೆದ ಫೋಟೋಗಳನ್ನು ಸೋಶಿಯಲ್‌ ಮಿಡಿಯಾದಲ್ಲಿ ಹಂಚಿಕೊಂಡಿದ್ದು, ಈಗಾಗಲೇ ಈ ಪೋಸ್ಟ್‌ಗೆ ಎಂಬತ್ತು ಸಾವಿರಕ್ಕೂ ಹೆಚ್ಚು ಲೈಕ್ಸ್‌ ಪಡೆದುಕೊಂಡಿದ್ದಾರೆ.

5/6
Rakshith Shetty At Ayodhya Sree Ram Temple
Rakshith Shetty At Ayodhya Sree Ram Temple

ರಕ್ಷಿತ್‌ ಶೆಟ್ಟಿ ಪೋಸ್ಟ್‌ನ ಕ್ಯಾಪ್ಶನ್‌ನಲ್ಲಿ "ಪ್ರಾಣ ಪ್ರತಿಷ್ಠೆಯ ದಿನದಿಂದಲೂ ಅವರನ್ನು ನೇರವಾಗಿ ನೋಡುವ ಹಂಬಲ. ಇಂದು ನಾನು ಅವನನ್ನು ದೂರದಿಂದ ನೋಡಿದೆ, ಕೆಲವು ಅದೃಷ್ಟವಂತರಿಗೆ ಮಾತ್ರ ಅವಕಾಶ ಸಿಗುತ್ತದೆ. ನಾನು ಸುಮಾರು ಅರ್ಧ ಘಂಟೆಯವರೆಗೆ ಅವನ ಮುಂದೆ ಕುಳಿತು ಅವನನ್ನು ಆರಾಧಿಸಬೇಕಾಯಿತು. ನನ್ನ ಜೀವನದಲ್ಲಿ ಯಾವ ವಿಗ್ರಹದ ಮುಂದೆಯೂ ಈ ರೀತಿ ಮಾಡಿಲ್ಲ. ನಾನು ಸಾಮಾನ್ಯವಾಗಿ ಎಲ್ಲಾ ವಿಗ್ರಹಗಳ ಕೆಲಸವನ್ನು ಮೆಚ್ಚುತ್ತೇನೆ, ಆದರೆ ಈ ಆರಾಧನೆಯು ವಿಭಿನ್ನವಾಗಿದೆ" ಎಂದು ಬರೆದುಕೊಂಡಿದ್ದಾರೆ.

6/6
Rakshith Shetty At Ayodhya Sree Ram Temple
Rakshith Shetty At Ayodhya Sree Ram Temple

ಕನ್ನಡದ ನಟ ರಕ್ಷಿತ್‌ ಶೆಟ್ಟಿಗೆ ದೇವರ ಮನೆ ಅಪಾರ ನಂಬಿಕೆ ಇರುವುದರಿಂದ ಆಗಾಗ ದೇವಾಲಯಗಳಿಗೂ ಭೇಟಿ ನೀಡುತ್ತಿರುತ್ತಾರೆ. ಇದೀಗ ಭವ್ಯವಾದ ಅಯೋಧ್ಯೆಯ ಶ್ರೀ ಬಾಲರಾಮ ಮಂದಿರಕ್ಕೆ ಸ್ನೇಹಿತರ ಜೊತೆಗೆ ಆಗಮಿಸಿ ದೇವರ ಆರ್ಶಿವಾದ ಪಡೆದುಕೊಂಡಿದ್ದಾರೆ.

Read More