PHOTOS

ಅಂದು ಅಪಘಾತದಲ್ಲಿ ದುರಂತ ಅಂತ್ಯ ಕಂಡ ಧೋನಿ ಫಸ್ಟ್ ಲವ್ವರ್‌ ನಿಜವಾದ ಫೋಟೋ ನೋಡಿದ್ದೀರಾ? ಅಂದದಲ್ಲಿ ಸಾಕ್ಷಿಯನ್ನೇ ಮೀರಿಸುವಷ್ಟು ಚಂದಗಾತಿ

MS Dhoni first love Priyanka Jha Real photo: ಜುಲೈ 7 ರಂದು ಜಾರ್ಖಂಡ್ ರಾಜಧಾನಿ ರಾಂಚಿಯ ಕುಟುಂಬದಲ್ಲಿ ಜನಿಸಿದ ಮಹೇಂದ್ರ ಸಿಂಗ್ ಧೋನಿ, ತಮ್ಮ ಸಾಮರ್ಥ್ಯ ಮತ್ತು ಹೋರಾಟದ ಮನೋಭಾವದಿಂದ ವಿಶ್ವ ಕ್ರಿಕೆಟ್‌ನಲ್ಲಿ ವಿಶಿಷ್ಟ ಸ್ಥಾನವನ್ನು ಗಳಿಸಿದ್ದಾರೆ.

Advertisement
1/6
ಧೋನಿ ಮಾಜಿ ಗರ್ಲ್‌ಫ್ರೆಂಡ್‌
ಧೋನಿ ಮಾಜಿ ಗರ್ಲ್‌ಫ್ರೆಂಡ್‌

ಮಹಿ ಎಂದೇ ಜನಪ್ರಿಯರಾಗಿರುವ ಧೋನಿ, ಮೂರು ಐಸಿಸಿ ವಿಶ್ವ ಟೂರ್ನಿಗಳನ್ನು ಗೆದ್ದ ಏಕೈಕ ನಾಯಕ. ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದ ನಂತರ, ಧೋನಿ ಇಂದು ತಮ್ಮ ಕುಟುಂಬದೊಂದಿಗೆ ಸಂತೋಷದ ಜೀವನವನ್ನು ನಡೆಸುತ್ತಿದ್ದಾರೆ. ಪತ್ನಿ ಸಾಕ್ಷಿ ಮತ್ತು ಮಗಳು ಜೀವಾ ಜೊತೆ ನಗರದಿಂದ ದೂರದಲ್ಲಿರುವ ತನ್ನ ತೋಟದ ಮನೆಯಲ್ಲಿ ಸಂತೋಷದಿಂದ ವಾಸಿಸುತ್ತಾರೆ. ಆದರೆ ಸಾಕ್ಷಿಯವರು ಧೋನಿ ಜೀವನದಲ್ಲಿ ಬರುವುದಕ್ಕೂ ಮೊದಲು ಪ್ರಿಯಾಂಕ ಝಾ ಎಂಬ ಮಹಿಳೆ ಜೊತೆ ಧೋನಿ ಡೇಟಿಂಗ್‌ ಮಾಡಿದ್ದರು.

 

2/6
ಧೋನಿ ಮಾಜಿ ಗರ್ಲ್‌ಫ್ರೆಂಡ್‌
ಧೋನಿ ಮಾಜಿ ಗರ್ಲ್‌ಫ್ರೆಂಡ್‌

ಧೋನಿ ಜೀವನಾಧಾರಿತ ಚಲನಚಿತ್ರದಲ್ಲೂ ಇದನ್ನು ಉಲ್ಲೇಖಿಸಲಾಗಿದೆ. ಧೋನಿಯ ಈ ಪ್ರೀತಿ ಅಪೂರ್ಣವಾಗಿಯೇ ಉಳಿಯಿತು. ಮಾಹಿ 20 ವರ್ಷದವನಿದ್ದಾಗ ಮತ್ತು ಭಾರತೀಯ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆಯಲು ಪ್ರಯತ್ನಿಸುತ್ತಿದ್ದಾಗ, ಪ್ರಿಯಾಂಕಾ ಝಾ ಎಂಬ ಹುಡುಗಿಯನ್ನು ಭೇಟಿಯಾದರು. ಕ್ರಮೇಣ ಇಬ್ಬರ ನಡುವೆ ಪ್ರೀತಿ ಚಿಗುರಿತು. ಪ್ರೀತಿ ಎಷ್ಟು ಬೆಳೆದುತ್ತೆಂದರೆ ಧೋನಿ ಪ್ರಿಯಾಂಕಾಳನ್ನು ಮದುವೆಯಾಗಲು ಬಯಸಿದ್ದರು.

 

3/6
ಧೋನಿ ಮಾಜಿ ಗರ್ಲ್‌ಫ್ರೆಂಡ್‌
ಧೋನಿ ಮಾಜಿ ಗರ್ಲ್‌ಫ್ರೆಂಡ್‌

2003-2004ರಲ್ಲಿ ಜಿಂಬಾಬ್ವೆ ಮತ್ತು ಕೀನ್ಯಾ ಪ್ರವಾಸಕ್ಕಾಗಿ ಭಾರತ ಎ ತಂಡದಲ್ಲಿ ಮಹಿ ಮೊದಲ ಬಾರಿಗೆ ಸ್ಥಾನ ಪಡೆದಾಗ, ನಂತರ ತ್ರಿಕೋನ ಪಂದ್ಯಾವಳಿಯ ಆರು ಇನ್ನಿಂಗ್ಸ್‌ಗಳಲ್ಲಿ 362 ರನ್ ಗಳಿಸುವ ಮೂಲಕ, ಯುವ ಧೋನಿ ಆಗಿನ ಭಾರತೀಯ ನಾಯಕ ಸೌರವ್ ಗಂಗೂಲಿ ಮತ್ತು ಮಧ್ಯಂತರ ಕೋಚ್ ರವಿಶಾಸ್ತ್ರಿ ಅವರ ಗಮನ ಸೆಳೆದರು. ಇದರಿಂದಾಗಿ ಅವರು 2004 ರಲ್ಲಿ ಬಾಂಗ್ಲಾದೇಶ ಪ್ರವಾಸದಲ್ಲಿಯೂ ಸ್ಥಾನ ಪಡೆದರು.

 

4/6
ಧೋನಿ ಮಾಜಿ ಗರ್ಲ್‌ಫ್ರೆಂಡ್‌
ಧೋನಿ ಮಾಜಿ ಗರ್ಲ್‌ಫ್ರೆಂಡ್‌

ಧೋನಿ ತನ್ನ ಕನಸುಗಳನ್ನು ವೇಗವಾಗಿ ನನಸಾಗಿಸುತ್ತಿರುವಾಗ, ಅವರ ಕನಸಿನ ರಾಜಕುಮಾರಿ ಇಹಲೋಕ ತ್ಯಜಿಸಿದ್ದರು. ಹೌದು... 2002 ರಲ್ಲಿ, ಪ್ರಿಯಾಂಕಾ ರಸ್ತೆ ಅಪಘಾತದಲ್ಲಿ ನಿಧನರಾದರು. ಪಂದ್ಯಾವಳಿಯನ್ನು ಆಡಿದ ನಂತರ ಭಾರತಕ್ಕೆ ಹಿಂದಿರುಗಿದಾಗ ಮಹಿಗೆ ಈ ವಿಷಯ ತಿಳಿಯಿತು.

 

5/6
ಧೋನಿ ಮಾಜಿ ಗರ್ಲ್‌ಫ್ರೆಂಡ್‌
ಧೋನಿ ಮಾಜಿ ಗರ್ಲ್‌ಫ್ರೆಂಡ್‌

ಪ್ರಿಯಾಂಕಾ ಅಪಘಾತವು ಧೋನಿಯನ್ನು ತೀವ್ರವಾಗಿ ನೋಯಿಸಿತ್ತು. ಆದರೆ ಅವರು ಛಲ ಬಿಡಲಿಲ್ಲ. ಟೀಮ್ ಇಂಡಿಯಾದಲ್ಲಿ ತಮ್ಮನ್ನು ತಾವು ಬಲವಾಗಿ ಸ್ಥಾಪಿಸಿಕೊಳ್ಳುವುದನ್ನು ಮುಂದುವರೆಸಿದರು. 2010 ರಲ್ಲಿ, ಅವರು ತಮ್ಮ ಗೆಳತಿ ಸಾಕ್ಷಿ ಸಿಂಗ್ ರಾವತ್ ಅವರನ್ನು ವಿವಾಹವಾದರು. ಪ್ರಿಯಾಂಕಾ ಝಾ ಅವರನ್ನು ಮತ್ತು ಅವರೊಂದಿಗೆ ಹಂಚಿಕೊಂಡ ಕ್ಷಣಗಳನ್ನು ಕ್ಯಾಪ್ಟನ್ ಕೂಲ್ ಎಂದಿಗೂ ಮರೆಯಲು ಸಾಧ್ಯವಿಲ್ಲ.

 

6/6
ಧೋನಿ ಮಾಜಿ ಗರ್ಲ್‌ಫ್ರೆಂಡ್‌
ಧೋನಿ ಮಾಜಿ ಗರ್ಲ್‌ಫ್ರೆಂಡ್‌

ಬಹುಶಃ ಇದೇ ಕಾರಣಕ್ಕೆ ಅವರು ತಮ್ಮ ಜೀವನ ಚರಿತ್ರೆಯ ಸಿನಿಮಾದಲ್ಲಿ ಈ ಕಥೆಯನ್ನು ಉಲ್ಲೇಖಿಸಲು, ನಿರ್ದೇಶಕ ನೀರಜ್ ಪಾಂಡೆ ಅವರಿಗೆ ಅನುಮತಿ ನೀಡಿದ್ದಿರಬಹುದು. ಚಿತ್ರದಲ್ಲಿ ದಿಶಾ ಪಟಾನಿ ಧೋನಿಯ ದಿವಂಗತ ಗೆಳತಿ ಪ್ರಿಯಾಂಕಾ ಝಾ ಪಾತ್ರದಲ್ಲಿ ನಟಿಸುತ್ತಿದ್ದರೆ, ಕಿಯಾರಾ ಅಡ್ವಾಣಿ ಧೋನಿ ಪತ್ನಿ ಸಾಕ್ಷಿ ಪಾತ್ರದಲ್ಲಿ ನಟಿಸಿದ್ದಾರೆ.





Read More