Sara Tendulkar: ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲಕ್ರ್ ಅವರ ಪುತ್ರಿ ಸಾರಾ ತೆಂಡೂಲ್ಕರ್ ಕ್ರಿಕೆಟ್ ಮತ್ತು ಸ್ತ್ರೀ ತತ್ವದ ಬಗ್ಗೆ ತಮ್ಮ ಆಲೋಚನೆಗಳನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ.
ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರ ಮಗಳು ಇತ್ತೀಚೆಗೆ ಮುಂಬೈ ಫ್ರಾಂಚೈಸಿ ಮಾಲೀಕರಾಗಿ ಗ್ಲೋಬಲ್ ಇ-ಕ್ರಿಕೆಟ್ ಪ್ರೀಮಿಯರ್ ಲೀಗ್ (GEPL) ಖರೀದಿಸಿದ್ದರು. ಅದಕ್ಕೂ ಮುನ್ನ ಸಚಿನ್ ತೆಂಡೂಲ್ಕರ್ ಫೌಂಡೇಶನ್ (STF) ನ ಹೊಸ ನಿರ್ದೇಶಕಿಯಾಗಿ ಕೂಡ ನೇಮಕಗೊಂಡಿದ್ದರು.
ಅಂದಹಾಗೆ ಸಾರಾಗೆ ತನ್ನ ತಂದೆಯ ಪರಂಪರೆಯನ್ನು ಮುನ್ನಡೆಸುವ ಹುಮ್ಮಸ್ಸು ಬಂದಿದೆ. ಕ್ರಿಕೆಟ್ ಎಂಬುದು ತೆಂಡೂಲ್ಕರ್ ಕುಟುಂಬಕ್ಕೆ ಕೇವಲ ಕ್ರೀಡೆಯಲ್ಲ ಬದಲಾಗಿ ಅದೊಂದು ಹೆಮ್ಮೆ ಮತ್ತು ಹೆಗ್ಗುರುತಾಗಿದೆ.
ಇತ್ತೀಚೆಗೆಯಷ್ಟೇ ಸಾರಾ ತೆಂಡೂಲ್ಕರ್, ಗ್ಲೋಬಲ್ ಇ-ಕ್ರಿಕೆಟ್ ಪ್ರೀಮಿಯರ್ ಲೀಗ್ (GEPL) ನಲ್ಲಿ ಮುಂಬೈ ಫ್ರಾಂಚೈಸಿಯನ್ನು ಖರೀದಿಸಿದ್ದಾರೆ. ಡಿಜಿಟಲ್ ಮನರಂಜನೆ ಮತ್ತು ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿರುವ ಜೆಟ್‌ಸಿಂಥೆಸಿಸ್‌ನಿಂದ ನಡೆಸಲ್ಪಡುವ ಜಿಇಪಿಎಲ್‌ನ್ನು ವಿಶ್ವದ ಅತಿದೊಡ್ಡ ಇ-ಕ್ರಿಕೆಟ್ ಮತ್ತು ಮನರಂಜನಾ ಲೀಗ್ ಎಂದು ಪರಿಗಣಿಸಲಾಗಿದೆ.
ಈ ಲೀಗ್‌ನಲ್ಲಿ ಅವರ ತಂಡ ರನ್ನರ್‌ಅಪ್ ಆಗಿದೆ. ಆ ಬಗ್ಗೆ ಪೋಸ್ಟ್ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ ಸಾರಾ, "ತಂಡದ ಮಾಲೀಕಳಾಗಿ ನನಗೆ ಇದು ಮೊದಲನೆಯದು. ಇದೊಂದು ಅದ್ಭುತ ಪ್ರಯಾಣವಾಗಿದೆ. ಆರಂಭಿಕ ಹಿನ್ನಡೆಗಳಿಂದ ಹಿಡಿದು ಫೈನಲ್ ತಲುಪುವವರೆಗೆ, ಈ ತಂಡವು ನಿಜವಾದ ಸ್ಥಿತಿಸ್ಥಾಪಕತ್ವ ಹೇಗಿರುತ್ತದೆ ಎಂಬುದನ್ನು ತೋರಿಸಿದೆ" ಎಂದಿದ್ದಾರೆ.
ಇದೇ ಸಂದರ್ಭದಲ್ಲಿ ಜೆಟ್‌ಸಿಂಥಸಿಸ್‌ನ ಸಿಇಒ ರಾಜನ್ ನವನಿ ಅವರೊಂದಿಗಿನ ಸಂಭಾಷಣೆಯಲ್ಲಿ ಮಾತನಾಡಿದ ಸಾರಾ, "ನಮ್ಮ ಮನೆಯಲ್ಲಿ ಕ್ರಿಕೆಟ್ ಕ್ರೀಡೆಗಿಂತ ಹೆಚ್ಚಿನದ್ದು. ಬಹುಶಃ ಅದೇ ನನ್ನ ಡಿಎನ್‌ಎನಲ್ಲೂ ಹರಿಯುತ್ತಿದೆ ಎಂದನಿಸುತ್ತಿದೆ. ಕ್ರಿಕೆಟ್ ಎಂದರೆ ನಮಗೆ ನೆನಪು ಮತ್ತು ಗುರುತು ಎರಡೂ ಆಗಿದೆ" ಎಂದು ಹೇಳಿದ್ದಾರೆ.
ಮೃದುವಾದ ಧ್ವನಿ, ಸ್ಪಷ್ಟವಾದ ಮಾತು ಮತ್ತು ಶಾಂತ ಆತ್ಮವಿಶ್ವಾಸ ಎದ್ದು ತೋರುವಂತೆ ಮಾತನಾಡಿದ ಸಾರಾ, ಕ್ರಿಕೆಟ್ ಮೇಲಿನ ಅವರ ಪ್ರೀತಿಯನ್ನು ಸ್ವಚ್ಛಂದವಾಗಿ ಬಿಂಬಿಸಿದ್ದರು.
ಇನ್ನೊಂದೆಡೆ ಮ್ಮದೇ ರೀತಿಯಲ್ಲಿ ಸ್ತ್ರೀ ತತ್ವವನ್ನು ಸಾರಾ ಪ್ರತಿನಿಧಿಸಿದ್ದಾರೆ. " ಸ್ತ್ರೀ ತತ್ವ ಎಂದರೆ ಮುಕ್ತವಾಗಿ ಹಿಂಜರಿಯದೆ ಮಾತನಾಡುವುದು. ಇದು ಮುನ್ನಡೆಗೆ ಕಾರಣವಾಗುತ್ತದೆ. ನೀವು ಪ್ರೀತಿಸಿದ್ದನ್ನೇ ಮಾಡಿ. ನಿಮ್ಮನ್ನು ಮುಕ್ತವಾಗಿರಿಸಲು ಹಿಂಜರಿಯಬೇಡಿ. ಮಾತನಾಡಿ, ರಿಸ್ಕ್ ತೆಗೆದುಕೊಳ್ಳಿ. ವಿಫಲವಾದರೂ ಸಹ ಪ್ರಯತ್ನ ಬಿಡಬೇಡಿ. ಏಕೆಂದರೆ ಪ್ರಯತ್ನಿಸುವುದರಲ್ಲಿ ಬಲವಿದೆ" ಎಂದು ಹೇಳಿದರು.
ಇತ್ತೀಚೆಗೆ ಸಚಿನ್ ತೆಂಡೂಲ್ಕರ್ ಫೌಂಡೇಶನ್ (STF) ನ ಹೊಸ ನಿರ್ದೇಶಕಿಯಾಗಿ ನೇಮಕಗೊಂಡಿದ್ದ ಸಾರಾ, ಜೀವನದ ಹೊಸ ಅಧ್ಯಾಯವನ್ನು ಶುರು ಮಾಡಿದ್ದರು. ನಿರ್ಗತಿಕರಿಗೆ ಸೇವೆ ಸಲ್ಲಿಸುವ ಉದ್ದೇಶದಿಂದ ಸ್ಥಾಪನೆಗೊಂಡಿರುವ ಸಚಿನ್ ತೆಂಡೂಲ್ಕರ್ ಫೌಂಡೇಶನ್ ಮುಂಬೈನ ಬಾಂಬೆ ಕ್ಲಬ್‌ನಲ್ಲಿ ಕಾರ್ಯಕ್ರಮವನ್ನು ಆಯೋಜಿಸಿತ್ತು. ಈ ವೇಳೆ ಸಾರಾ ಅವರನ್ನು ಟ್ರಸ್ಟ್‌ನ ನಿರ್ದೇಶಕಿಯಾಗಿ ಘೋಷಣೆ ಮಾಡಲಾಗಿತ್ತು.
ಆ ಸಂದರ್ಭದಲ್ಲಿ ಮಾತನಾಡಿದ್ದ ಸಾರಾ, "ಒಬ್ಬ ನಿರ್ದೇಶಕಿಯಾಗಿ, ನನ್ನ ಹೆತ್ತವರು ಪೀಠಿಕೆ ಹಾಕಿದನ್ನು ಮುಂದುವರಿಸಲು ಮತ್ತು ಪ್ರತಿಯೊಂದು ಸಣ್ಣ ಕನಸನ್ನು ಪೋಷಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಲು ಉತ್ಸುಕನಾಗಿದ್ದೇನೆ. ಅಂತಹ ಸಂದರ್ಭಕ್ಕಾಗಿ ನಾನು ಕಾಯುತ್ತಿದ್ದೆ. ಆದರೆ ಇನ್ಮುಂದೆ ನನ್ನಿಂದ ಕಾಯಲು ಸಾಧ್ಯವಿಲ್ಲ. ಭವಿಷ್ಯದ ಮಕ್ಕಳ ಜಗತ್ತನ್ನು ಬೆಳಗಿಸಲಿರುವ ಈ ಪ್ರಯಾಣವನ್ನು ಮುಂದುವರೆಸಲು ಖುಷಿಯಲ್ಲಿ ಉತ್ಸುಕಳಾಗಿದ್ದೇನೆ" ಎಂದು ಹೇಳಿಕೊಂಡಿದ್ದರು.